ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಇರಾನ್
ತೆಹ್ರಾನ್, ಜೂನ್ 29: ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವನ್ನೇ ಬಂಧಿಸಲು ಇರಾನ್ ಹವಣಿಸುತ್ತಿದ್ದು, ಟ್ರಂಪ್ ಬಂಧನಕ್ಕಾಗಿ ಇರಾನ್ ವಾರೆಂಟ್ ಹೊರಡಿಸಿದೆ. ಅಲ್ಲದೆ ಇಂಟರ್ ಪೋಲ್ ಸಹಾಯವನ್ನು ಕೇಳಿದೆ.
ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇದೇ ವರ್ಷ ಜನವರಿಯಲ್ಲಿ ಡ್ರೋನ್ ದಾಳಿ ನಡೆಸಿ ಜನರಲ್ ಸೂಲೈಮನ್ ಮತ್ತಿತರ ಸಾವಿಗೆ ಕಾರಣವಾಗಿರುವ ಡೊನಾಲ್ಡ್ ಟ್ರಂಪ್ ಹಾಗೂ ಇತರ ಡಜನ್ ವ್ಯಕ್ತಿಗಳ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್ ಒಬ್ಬರು ಇಂದು ಹೇಳಿದ್ದಾರೆ ಎಂದು ಅಲ್ ಜಜೀರಾ ಸುದ್ದಿ ಮಾಡಿದೆ.
ಜನವರಿಯಲ್ಲಿ ಮೂರು ದಾಳಿ ನಡೆಸಿ ಜನರಲ್ ಆಗಿದ್ದ ಖಾಸಿಂ ಸೂಲೈಮನ್ ಹತ್ಯೆಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಹಾಗೂ ಇತರ 30ಕ್ಕೂ ಹೆಚ್ಚು ಮಂದಿಯನ್ನು ಆರೋಪಿಗಳನ್ನಾಗಿ ಇರಾನ್ ಹತ್ಯೆ ಮಾಡಿದ್ದು, ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ ಎಂದು ತೆಹ್ರನ್ ಪ್ರಾಸಿಕ್ಯೂಟರ್ ಅಲಿ ಅಲ್ಕಾಸಿ ಮೆಹ್ರ್ ಹೇಳಿರುವುದಾಗಿ ಐಎಸ್ಎನ್ ಎ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.

ಟ್ರಂಪ್ ಹೊರತುಪಡಿಸಿ ಬೇರೆಯವರನ್ನು ಅಲ್ಕಾಸಿಮೆಹರ್ ಗುರುತಿಸಲಿಲ್ಲ, ಆದರೆ, ಟ್ರಂಪ್ ಅಧ್ಯಕ್ಷ ಸ್ಥಾನ ಮುಗಿದ ನಂತರವೂ ಇರಾನ್ ತನ್ನ ಪ್ರಕರಣವನ್ನು ಮುಂದುವರೆಸಲಿದೆ ಎಂದು ಅಲಿ ಹೇಳಿದ್ದಾರೆ. ಟ್ರಂಪ್ ಮತ್ತು ಇತರರಿಗೆ "ರೆಡ್ ನೋಟಿಸ್" ನೀಡಬೇಕೆಂದು ಇರಾನ್ ಕೋರಿದೆ ಎಂದು ಅಲ್ಕಾಸಿಮೆಹ್ರ್ ಹೇಳಿದ್ದಾರೆ.
ಫ್ರಾನ್ಸ್‌ನ ಲಿಯಾನ್ ಮೂಲದ ಇಂಟರ್ ಪೋಲ್ ತತ್ ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಅಮೆರಿಕದ ಇರಾನ್ ರಾಯಭಾರಿ ಬ್ರಿಯಾನ್ ಹುಕ್ ಈ ಕ್ರಮವನ್ನು "ಪ್ರಚಾರದ ಸಾಹಸ" ಎಂದು ಬಣ್ಣಿಸಿದ್ದಾರೆ.












Click it and Unblock the Notifications