Get Updates
Get notified of breaking news, exclusive insights, and must-see stories!

Iran Earthquake: ವಾಯುವ್ಯ ಇರಾನ್‌ನಲ್ಲಿ ಭೂಕಂಪನ; 7 ಸಾವು, 400 ಕ್ಕೂ ಹೆಚ್ಚು ಗಾಯಾಳು

ವಾಯುವ್ಯ ಇರಾನ್‌ನಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪನವಾಗಿದ್ದು, ಇದುವರೆಗೆಗೂ 7 ಮಂದಿ ಸಾವನ್ನಪ್ಪಿದ್ದು, 440 ಕ್ಕೂ ಹೆಚ್ಚು ಜನ ಗಾಯಾಗೊಂಡಿದ್ದಾರೆ.

ಟೆಹ್ರಾನ್, ಜನವರಿ, 29: ಇರಾನ್‌ನಲ್ಲಿ ಪ್ರಬಲ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲಾಗಿದೆ. ವಾಯುವ್ಯ ಇರಾನ್‌ನ ಇರಾನ್-ಟರ್ಕಿ ಗಡಿಯ ಸಮೀಪವಿರುವ ಖೋಯ್ ನಗರದಲ್ಲಿ ಶನಿವಾರ ರಾತ್ರಿ 9:44 ಕ್ಕೆ (ಸ್ಥಳೀಯ ಕಾಲಮಾನ) ಭೂಕಂಪ ಸಂಭವಿಸಿದೆ.

ಭೂಕಂಪನದಲ್ಲಿ ಇದುವರೆಗೆ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು 440 ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.

ಭೂಕಂಪನ ಸಾಕಷ್ಟು ಪ್ರಬಲವಾಗಿವೆ ಎಂದು ವರದಿಯಾಗಿದ್ದು, ಇರಾನ್‌ನ ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದ ಹಲವು ಪ್ರದೇಶಗಳಲ್ಲಿ, ನೆರೆಯ ಪೂರ್ವ ಅಜೆರ್‌ಬೈಜಾನ್‌ನ ಪ್ರಾಂತೀಯ ರಾಜಧಾನಿಯಾದ ತಬ್ರಿಜ್ ಸೇರಿದಂತೆ ಹಲವಾರು ನಗರಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.

Iran Earthquake: at least 7 killed, more than 400 injured

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಪ್ರಕಾರ ಭೂಕಂಪವು 10 ಕಿಮೀ ಆಳದಲ್ಲಿ ಖೋಯ್‌ನಿಂದ 14 ಕಿಮೀ ದಕ್ಷಿಣ-ನೈಋತ್ಯಕ್ಕೆ ಅಪ್ಪಳಿಸಿದೆ.

ಜೊತೆಗೆ ಇರಾನ್‌ನ ಕೇಂದ್ರ ನಗರವಾದ ಇಸ್ಫಹಾನ್‌ನಲ್ಲಿರುವ ಮಿಲಿಟರಿ ಸ್ಥಾವರದಲ್ಲೂ ಸಹ ದೊಡ್ಡ ಸ್ಫೋಟ ಸಂಭವಿಸಿದೆ. ದೇಶದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ, ಇರಾನ್‌ನ ಮಾಧ್ಯಮವೊಂದು ಇದು ವಿಫಲ ಡ್ರೋನ್ ದಾಳಿ ಎಂದು ಹೇಳಿಕೊಂಡಿದೆ.

ಈ ಮೊದಲು ಜುಲೈ 2022 ರಲ್ಲಿ ದಕ್ಷಿಣ ಇರಾನ್‌ನಲ್ಲಿ 6.3 ತೀವ್ರತೆಯ ಭೂಕಂಪನ ಉಂಟಾಗಿ ಐದು ಮಂದಿ ಸಾವನ್ನಪ್ಪಿದರು ಮತ್ತು 44 ಜನರು ಗಾಯಗೊಂಡಿದ್ದರು. ಹೊರ್ಮೊಜ್ಗಾನ್ ಪ್ರಾಂತ್ಯದ ಸಯೆಹ್ ಖೋಶ್ ಗ್ರಾಮ ಭೂಕಂಪನದ ಕೇಂದ್ರಬಿಂದುವಾಗಿತ್ತು. ನೆರೆಯ ಹಲವು ದೇಶಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ವರದಿ ತಿಳಿಸಿದೆ.

Iran Earthquake: at least 7 killed, more than 400 injured

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಇರಾನ್‌ನಲ್ಲಿ ಸರಾಸರಿ ದಿನಕ್ಕೆ ಒಂದು ಭೂಕಂಪನ ಉಂಟಾಗುತ್ತದೆ. 2003 ರಲ್ಲಿ, 6.6 ತೀವ್ರತೆಯ ಭೂಕಂಪವು ಐತಿಹಾಸಿಕ ನಗರವಾದ ಬಾಮ್ ಅನ್ನು ನೆಲಸಮಗೊಳಿಸಿತು. ಇದರಲ್ಲಿ 26,000 ಜನರು ಸಾವನ್ನಪ್ಪಿದರು. 2017 ರಲ್ಲಿ ಪಶ್ಚಿಮ ಇರಾನ್‌ನಲ್ಲಿ ಸಂಭವಿಸಿದ 7 ತೀವ್ರತೆಯ ಭೂಕಂಪದಲ್ಲಿ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 9,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+