ಕುಲಭೂಷಣ್ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ಕೋರ್ಟ್ ತಡೆಯಾಜ್ಞೆ
ಮರಣ ದಂಡನೆ ತೀರ್ಪಿನ ವಿರುದ್ಧ ಬಾರತ ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಸದ್ಯದ ಮಟ್ಟಿಗೆ ಮರಣ ದಂಡನೆ ಶಿಕ್ಷೆಗೆ ಈ ತಡೆಯಾಜ್ಞೆ ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯ.
ನವದೆಹಲಿ, ಮೇ 9: ಭಾರತೀಯ ಗೂಢಾಚಾರಿ ಎಂಬ ಆರೋಪದ ಮೇರೆಗೆ ಭಾರತೀಯ ಕುಲಭೂಷಣ್ ಜಾಧವ್ ಅವರ ಮೇಲೆ ಪಾಕಿಸ್ತಾನ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆಗೆ ಹಾಲೆಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಕುಲಭೂಷಣ್ ಜಾಧವ್ ವಿರುದ್ಧ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ನೀಡಿರುವ ಮರಣ ದಂಡನೆ ತೀರ್ಪಿನ ವಿರುದ್ಧ ಬಾರತ ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಸದ್ಯದ ಮಟ್ಟಿಗೆ ಮರಣ ದಂಡನೆ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ. ಈ ಕುರಿತಂತೆ, ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರಿಗೂ ನ್ಯಾಯಾಲಯ ಪತ್ರ ರವಾನಿಸಿದೆ.[ಪಾಕಿಸ್ತಾನ ಮಿಲಿಟರಿ ಕೋರ್ಟ್ ನಲ್ಲಿ ಕುಲಭೂಷಣ್ ಜಾಧವ್ ಗೆ ಮರಣದಂಡನೆ]

ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯೂ ಆಗಿರುವ ಕುಲಭೂಷಣ್ ಜಾಧವ್ ಅವರನ್ನು ಕಳೆದ ವರ್ಷ ಮಾರ್ಚ್ ನಲ್ಲಿ ಪಾಕಿಸ್ತಾನ ದ ಕರಾಚಿಯಲ್ಲಿ ಅಲ್ಲಿನ ಭದ್ರತಾ ಪಡೆಗಳು ಬಂಧಿಸಿದ್ದವು.[ಕುಲಭೂಷಣ್ ಬೆಂಬಲಕ್ಕೆ ನಿಂತ ಬಿಲಾವಲ್ ಭುಟ್ಟೋ]
ಆಗಿನಿಂದ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದಲ್ಲಿ ಜಾಧವ್ ವಿರುದ್ಧ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಕಳೆದ ತಿಂಗಳ 10ರಂದು ನ್ಯಾಯಲಯ ಜಾಧವ್ ಅವರಿಗೆ ಕರಾಚಿ ಹಾಗೂ ಬಲೂಚಿಸ್ತಾನದ ಪ್ರಾಂತ್ಯದಲ್ಲಿ ಗೂಢಚರ್ಯೆ ನಡೆಸಿದ ಆರೋಪದ ಮೇರೆಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಅಂತಾರಾಷ್ಟ್ರೀಯ ನ್ಯಾಯಾಲಯದ ಬಗ್ಗೆ ಒಂದಿಷ್ಟು
ಸಿಜೆಐ ಎಂದು ಕರೆಯಲ್ಪಡುವ ಅಂತಾರಾಷ್ಟ್ರೀಯ ನ್ಯಾಯಾಲಯವು, ವಿಶ್ವ ಸಂಸ್ಥೆಯ ಪ್ರಮುಖ ನ್ಯಾಯಾಂಗವಾಗಿದ್ದು, ವಿವಿಧ ದೇಶಗಳ ನಡುವಿನ ಮಹತ್ವದ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ. 1945ರ ಜೂನ್ ನಲ್ಲಿ ಆರಂಭವಾದ ಇದು, 1946ರ ಏಪ್ರಿಲ್ ನಿಂದ ಕಾರ್ಯಾರಂಭ ಮಾಡುತ್ತಿದೆ. ಹಾಲೆಂಡ್ ನ ಹೇಗ್ ನಲ್ಲಿರುವ ಪೀಸ್ ಪ್ಯಾಲೇಸ್ (PEACE PALACE) ಇದರ ಕಾರ್ಯಸ್ಥಾನ.












Click it and Unblock the Notifications