ಇಂಡೋನೇಷ್ಯಾ ಸುನಾಮಿ: ಸಾವಿನ ಸಂಖ್ಯೆ 222ಕ್ಕೆ ಏರಿಕೆ

ಜಕಾರ್ತಾ (ಇಂಡೋನೇಷ್ಯಾ), ಡಿಸೆಂಬರ್ 24: ಇಂಡೋನೇಷ್ಯಾದ ಜಾವಾ ಮತ್ತು ಸುಮಾತ್ರಾ ದ್ವೀಪಗಳಲ್ಲಿ ಉಂಟಾಗಿರುವ ಸುನಾಮಿ ದೈತ್ಯ ಅಲೆಗಳ ಅಬ್ಬರಕ್ಕೆ ಮೃತಪಟ್ಟವರ ಸಂಖ್ಯೆ 222ಕ್ಕೆ ಏರಿದೆ.

ಶನಿವಾರ ರಾತ್ರಿ ಸುಂದಾ ಜಲಸಂಧಿಯಲ್ಲಿನ ಕರಾವಳಿ ತೀರಕ್ಕೆ ಅಪ್ಪಳಿಸಿದ ಸುನಾಮಿ 800 ಹೆಚ್ಚು ಜನರನ್ನು ಗಾಯಾಳುಗಳನ್ನಾಗಿಸಿದೆ.

ಅನಕ್ ಕ್ರಕಟಾಯು ಪರ್ವತದಲ್ಲಿನ ಅಗ್ನಿಪರ್ವತದ ಕ್ರಿಯೆಗಳಿಂದಾಗಿ ಸಮುದ್ರದಾಳದಲ್ಲಿ ಭೂಕುಸಿತ ಉಂಟಾಗಿದ್ದು ಮತ್ತು ಹುಣ್ಣಿಮೆಯ ಅವಧಿಯಲ್ಲಿನ ಅಲೆಗಳ ಉಬ್ಬರ ಅಸಹಜವಾಗಿ ಹೆಚ್ಚಾಗಿದ್ದು ಸುನಾಮಿಗೆ ಕಾರಣ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ವಕ್ತಾರ ಸುಪೊಟೊ ಪುರ್ವೊ ನುಗ್ರೊಹೊ ತಿಳಿಸಿದ್ದಾರೆ.

Indonesia java sumatra tsunami death toll rised to 222

ಪಂಡೆಗ್ಲಾಂಗ್, ದಕ್ಷಿಣ ಲ್ಯಾಂಪುಂಗ್ ಮತ್ತು ಟಂಗಮ್ಮಸ್‌ಗಳಲ್ಲಿ 550ಕ್ಕೂ ಅಧಿಕ ಮನೆಗಳು, ಅನೇಕ ಹೋಟೆಲ್‌ ಕಟ್ಟಡಗಳು ಅಲೆಗಳ ಹೊಡೆತ, ಗಾಳಿಗೆ ನೆಲಕ್ಕುರುಳಿವೆ. ಅನೇಕರು ಕಣ್ಮರೆಯಾಗಿದ್ದಾರೆ.

ಸುನಾಮಿ ಅಪ್ಪಳಿಸಿದ ಕೆಲವು ಗಂಟೆಗಳ ಬಳಿಕ ರಿಕ್ಟರ್ ಮಾಪಕದಲ್ಲಿ 5.೦ ತೀಕ್ಷ್ಣತೆಯ ಭೂಕಂಪ ಸಂಭವಿಸಿದೆ.

ಟಿಕು ಪ್ರದೇಶದಿಂದ 23 ಕಿ.ಮೀ. ದೂರದಲ್ಲಿ ಭೂಕಂಪ ಉಂಟಾಗಿದ್ದು, ಜನರಲ್ಲಿ ಇನ್ನಷ್ಟು ಭಯ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+