ಪಾಕಿಸ್ತಾನ: ಇಸ್ಲಾಂಗೆ ಮತಾಂತರವಾಗಿ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾದ ಭಾರತೀಯ ಮಹಿಳೆ ಅಂಜು
ಇಸ್ಲಾಮಾಬಾದ್, ಜುಲೈ. 25: ಎರಡು ಮಕ್ಕಳ ತಾಯಿಯಾಗಿರುವ 34 ವರ್ಷದ ಭಾರತೀಯ ಮಹಿಳೆ ಅಂಜು ಮಂಗಳವಾರ ತನ್ನ 29 ವರ್ಷದ ಪಾಕಿಸ್ತಾನಿ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾ ಅವರನ್ನು ವಿವಾಹವಾಗಿದ್ದಾರೆ. ಭಾರತದಿಂದ ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ತಮ್ಮ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಿದ್ದಾರೆ.
ಭಾರತೀಯ ಮಹಿಳೆ ಅಂಜು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ದೂರದ ಹಳ್ಳಿಗೆ ಕಾನೂನುಬದ್ಧವಾಗಿ ಪ್ರಯಾಣಿಸಿದ್ದರು. ನಸ್ರುಲ್ಲಾ ಮತ್ತು ಅಂಜು 2019 ರಲ್ಲಿ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ಈ ನವ ದಂಪತಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ದಂಪತಿಯ ಪ್ರೀ ವೆಡ್ಡಿಂಗ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಭಾರತೀಯ ಮಹಿಳೆ ಅಂಜು ಮತ್ತು ಪಾಕ್ ಸ್ನೇಹಿತ ನಸ್ರುಲ್ಲಾ ಕೈ ಹಿಡಿದಿರುವುದನ್ನು ಮತ್ತು ಪ್ರದೇಶದ ರಮಣೀಯ ಪರ್ವತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದನ್ನು ತೋರಿಸಲಾಗಿದೆ.
ಮಲಕಂದ್ ವಿಭಾಗದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ ಅವರು ಅಂಜು (35) ಮತ್ತು ನಸ್ರುಲ್ಲಾ (29) ಅವರ ನಿಕ್ಕಾವನ್ನು ದೃಢಪಡಿಸಿದ್ದು, ಮಹಿಳೆ ಇಸ್ಲಾಂಗೆ ಮತಾಂತರಗೊಂಡ ನಂತರ ಫಾತಿಮಾ ಹೆಸರನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರ ಪ್ರಕಾರ, ದಂಪತಿ ನಸ್ರುಲ್ಲಾ ಅವರ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ದಿರ್ ಬಾಲಾದಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಭದ್ರತಾ ಕಾರಣಗಳಿಗಾಗಿ, ಮಹಿಳೆಯನ್ನು ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯದಿಂದ ತನ್ನ ಹೊಸ ಅತ್ತೆಯ ಮನೆಗೆ ಕರೆದೊಯ್ಯಲಾಗಿದೆ.
Video: Indian girl #Anju with her Pakistani friend Nasrullah Khan in his home district Dir pic.twitter.com/jJJaCmxq1U
— Naimat Khan (@NKMalazai) July 25, 2023
ಈಗ ಫಾತಿಮಾ ಎಂದು ಕರೆಯಲ್ಪಡುವ ಅಂಜು, ನಸ್ರುಲ್ಲಾಳನ್ನು ಮದುವೆಯಾಗುವ ಯಾವುದೇ ಯೋಜನೆ ಇಲ್ಲ ಮತ್ತು ತನ್ನ ವೀಸಾ ಅವಧಿ ಮುಗಿದಾಗ ಆಗಸ್ಟ್ 20 ರಂದು ಭಾರತಕ್ಕೆ ಮರಳುವುದಾಗಿ ಹೇಳಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ. ಇದರ ಜೊತೆಗೆ ನಸ್ರುಲ್ಲಾ ಕೂಡ ಸೋಮವಾರ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ, ತಮ್ಮ ನಡುವಿನ ಯಾವುದೇ ಪ್ರೇಮ ಸಂಬಂಧವಿಲ್ಲ ಎಂದಿದ್ದರು. ಅಂಜು ಅವರನ್ನು ಮದುವೆಯಾಗುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ.

"ಅಂಜು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ನಾವು ಮದುವೆಯಾಗುವ ಯಾವುದೇ ಯೋಜನೆ ಹೊಂದಿಲ್ಲ" ಎಂದು ನಸ್ರುಲ್ಲಾ ಅವರು ಪೇಶಾವರದಿಂದ 300 ಕಿಮೀ ದೂರದಲ್ಲಿರುವ ಜಿಲ್ಲೆಯ ಕುಲ್ಶೋ ಗ್ರಾಮದಿಂದ ಫೋನ್ ಮೂಲಕ ಪಿಟಿಐಗೆ ತಿಳಿಸಿದರು. "ಅವರ ವೀಸಾ ಅವಧಿ ಮುಗಿದ ನಂತರ ಆಕೆ ಆಗಸ್ಟ್ 20 ರಂದು ತನ್ನ ದೇಶಕ್ಕೆ ಹಿಂತಿರುಗುತ್ತಾರೆ. ಅಂಜು ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ತನ್ನ ಮನೆಯ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಾರೆ" ಎಂದು ಅವರು ಮಾಹಿತಿ ನೀಡಿದ್ದರು.
ಅಂಜು ಅವರು ನಸ್ರುಲ್ಲಾ ಅವರನ್ನು ಭೇಟಿಯಾಗಲು ಪಾಕಿಸ್ತಾನದ ಮಾನ್ಯ ಪಾಕಿಸ್ತಾನಿ ವೀಸಾದ ಮೇಲೆ ಪಾಕಿಸ್ತಾನದ ಬುಡಕಟ್ಟು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಪ್ಪರ್ ದಿರ್ ಜಿಲ್ಲೆಗೆ ಪ್ರಯಾಣಿಸಿದ್ದರು. ಇಲ್ಲಿ ಗಮನಿಸಬೇಕಾದ ವಿಷಯವೆಂದರೇ, ಅಂಜು ಭಾರತದಲ್ಲಿದ್ದಾಗಲೇ ಮದುವೆಯಾಗಿದ್ದಾರೆ. ರಾಜಸ್ಥಾನದಲ್ಲಿರುವ ಅಂಜು ಅವರ ಪತಿ ಅರವಿಂದ್ ಅವರು ತಮ್ಮ ಪತ್ನಿ ಶೀಘ್ರದಲ್ಲೇ ಮರಳುತ್ತಾರೆ ಎಂಬ ಭರವಸೆಯಲ್ಲಿದ್ದರು. ಅವರಿಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾರೆ.












Click it and Unblock the Notifications