Get Updates
Get notified of breaking news, exclusive insights, and must-see stories!

Indian immigrants: ಕೈಗೆ ಬೇಡಿ, ಕಾಲಿಗೆ ಕೋಳ.. ಭಾರತೀಯರನ್ನು ಅವಮಾನಿಸಿ, ಹೀಯಾಳಿಸಿ ಮನೆಗೆ ಕಳುಹಿಸಿದ ಅಮೆರಿಕ

ವಿಶ್ವದ ದೊಡ್ಡಣ್ಣ ಅಮೆರಿಕಾ ಭಾರತೀಯ ಪ್ರಜೆಗಳ ವಿಚಾರದಲ್ಲಿ ದೊಡ್ಡಸ್ಥಿಕೆ ತೋರಿದ್ದು ಆಕ್ರೋಶಕ್ಕೆ ಗುರಿಯಾಗಿದೆ. ಭಾರತೀಯ ಪ್ರಜೆಗಳನ್ನು ಅಮೆರಿಕಾ ಅವಮಾನಿಸಿ, ಹೀಯಾಳಿಸಿ ಮನೆಗೆ ಕಳುಹಿಸಿದ ಘಟನೆ ನಡೆದಿದ್ದು ಆ ಪೈಕಿ ಓರ್ವ ವ್ಯಕ್ತಿ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.

36 ವರ್ಷದ ಜಸ್ಪಾಲ್ ಸಿಂಗ್ ಗುರುದಾಸ್ಪುರ ಜಿಲ್ಲೆಯ ಹಾರ್ದೋರ್ವಾಲ್ ಗ್ರಾಮದ ನಿವಾಸಿ. ಜನವರಿ 24ರಂದು ಇವರು ಅಮೆರಿಕದ ಗಡಿ ದಾಟಿದಾಗ ಅಮೆರಿಕದ ಗಡಿ ಗಸ್ತು ಪಡೆಯಿಂದ ಬಂಧಿಸಲ್ಪಟ್ಟರು. ಪ್ರಯಾಣದ ಉದ್ದಕ್ಕೂ ಅವರ ಕೈಗಳಿಗೆ ಕೋಳ ಮತ್ತು ಕಾಲಿಗೆ ಸಂಕೋಲೆ ಹಾಕಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ನಂತರವೇ ಅವರನ್ನು ಬಂಧನದಿಂದ ಬಿಡುಗಡೆ ಮಾಡಲಾಯಿತು.

Indian Immigrant Shares Heartfelt Account of Deportation from the US

ಭಾರತೀಯರನ್ನು ಅವಮಾನಿಸಿದ ದೊಡ್ಡಣ್ಣ

ಹೌದು.. ಬುಧವಾರ ಅಮೆರಿಕದ ವಿಮಾನದಲ್ಲಿ 104 ಜನರನ್ನು ಗಡಿಪಾರು ಮಾಡಲಾಗಿದೆ. ಭಾರತದ ವಿವಿಧ ರಾಜ್ಯಗಳಿಂದ ಅಮೆರಿಕಾಕ್ಕೆ ಹೋದ 104 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಬುಧವಾರ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ಅಕ್ರಮ ವಲಸಿಗರ ವಿರುದ್ಧದ ಕ್ರಮದ ಭಾಗವಾಗಿ ಡೊನಾಲ್ಡ್ ಟ್ರಂಪ್ ಸರ್ಕಾರ ಭಾರತೀಯರನ್ನು ವಾಪಸ್ ಕಳುಹಿಸುತ್ತಿರುವ ಮೊದಲ ಬ್ಯಾಚ್ ಇದಾಗಿದೆ. ಈ ಬ್ಯಾಚ್‌ನಲ್ಲಿ ಬಂದ ಭಾರತೀಯರನ್ನು ಅಮೆರಿಕಾ ಸೇನಾಪಡೆ ಕೈಗೆ ಬೇಡಿ, ಕಾಲಿಗೆ ಕೋಳ ಹಾಕಿ ಖೈದಿಗಳಂತೆ ಬಂಧಿಸಿ ಕರೆದಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

104 ಅಕ್ರಮ ವಲಸಿಗರ ಪೈಕಿ ತಲಾ 33 ಜನರು ಹರಿಯಾಣ ಮತ್ತು ಗುಜರಾತ್‌ನಿಂದ, 30 ಜನರು ಪಂಜಾಬ್‌ನಿಂದ, ತಲಾ ಮೂರು ಜನರು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ಮತ್ತು ಚಂಡೀಗಢದಿಂದ ಇಬ್ಬರು ಬಂದಿದ್ದಾರೆ ಅಮೆರಿಕಾದಿಂದ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಡೀಪಾರು ಮಾಡಲಾದ ಜನರಲ್ಲಿ 19 ಮಹಿಳೆಯರು ಮತ್ತು 13 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಇದರಲ್ಲಿ ನಾಲ್ಕು ವರ್ಷದ ಬಾಲಕ ಮತ್ತು ಐದು ಮತ್ತು ಏಳು ವರ್ಷದ ಇಬ್ಬರು ಹುಡುಗಿಯರು ಸೇರಿದ್ದಾರೆ. ಪಂಜಾಬ್‌ನಿಂದ ಗಡೀಪಾರು ಮಾಡಲ್ಪಟ್ಟವರನ್ನು ಅಮೃತಸರ ವಿಮಾನ ನಿಲ್ದಾಣದಿಂದ ಪೊಲೀಸ್ ವಾಹನಗಳಲ್ಲಿ ಅವರ ಸ್ವಂತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.

ಟ್ರಾವೆಲ್ ಏಜೆಂಟ್ ವಂಚನೆ:-

ಬುಧವಾರ ರಾತ್ರಿ ತನ್ನ ಊರು ತಲುಪಿದ ಜಸ್ಪಾಲ್, ಕಾನೂನುಬದ್ಧವಾಗಿ ಅಮೆರಿಕಕ್ಕೆ ಕಳುಹಿಸುವುದಾಗಿ ಭರವಸೆ ನೀಡಿ ಟ್ರಾವೆಲ್ ಏಜೆಂಟ್ ಒಬ್ಬರಿಂದ ಮೋಸ ಹೋಗಿರುವುದಾಗಿ ಹೇಳಿಕೊಂಡಿದ್ದಾರೆ. 'ಅಮೆರಿಕಾದಿಂದ ಭಾರತಕ್ಕೆ ಕಳುಹಿಸಲು ಏಜೆಂಟ್‌ ಒಬ್ಬರಿಗೆ ಮೀಸಾ ನೀಡಲು ಕೇಳಿದ್ದರು ಜಸ್ಪಾಲ್. ಅದಕ್ಕಾಗಿ 30 ಲಕ್ಷ ರೂಪಾಯಿ ಕೂಡ ನೀಡಲಾಗಿತ್ತು. ಇದಕ್ಕಾಗಿ ಕಳೆದ ವರ್ಷ ಜುಲೈನಲ್ಲಿ ಜಸ್ಪಾಲ್ ವಿಮಾನದ ಮೂಲಕ ಬ್ರೆಜಿಲ್ ತಲುಪಿದ್ದು. ಮುಂದಿನ ಪ್ರವಾಸವೂ ವಿಮಾನದ ಮೂಲಕವೇ ಇರುವುದಾಗಿ ಏಜೆಂಟ್ ಜಸ್ಪಾಲ್ ಅವರಿಗೆ ಭರವಸೆ ನೀಡಿದ್ದರು. ಆದರೆ ಏಜೆಂಟ್ ವೀಸಾ ನೀಡದೆ ಅಕ್ರಮವಾಗಿ ಗಡಿದಾಟುವಂತೆ ಮಾಡಿದ್ದಾರೆ. ಜಸ್ಪಾಲ್ ಅವರಿಂದ ಹಣ ಪಡೆದು ವಂಚನೆ ಮಾಡಿದ್ದಾರೆ.

ಆರು ತಿಂಗಳ ಕಾಲ ಬ್ರೆಜಿಲ್‌ನಲ್ಲಿದ್ದ ನಂತರ, ಅವರು ಗಡಿಯನ್ನು ದಾಟಿ ಯುನೈಟೆಡ್ ಸ್ಟೇಟ್ಸ್‌ಗೆ ಹೋಗಿ ಅಲ್ಲಿಂದ ಯುಎಸ್ ಬಾರ್ಡರ್ ಸೇನೆಯಿಂದ ಬಂಧಿಸಲ್ಪಟ್ಟರು. ನಾನು ಸಾಲ ಪಡೆದು ಅಮೆರಿಕ ತಲುಪಿದೆ, ಈಗ ಅದನ್ನು ಮರುಪಾವತಿಸಲು ನನ್ನ ಬಳಿ ಯಾವುದೇ ಮಾರ್ಗವಿಲ್ಲ ಎಂದು ಜಸ್ಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲಿ ತನ್ನನ್ನು 11 ದಿನಗಳ ಕಾಲ ಕಸ್ಟಡಿಯಲ್ಲಿಟ್ಟು ನಂತರ ಮನೆಗೆ ಕಳುಹಿಸಲಾಯಿತು. ತನ್ನನ್ನು ಭಾರತಕ್ಕೆ ಕಳುಹಿಸಲಾಗುತ್ತಿದೆ ಎಂದು ತನಗೆ ತಿಳಿದಿರಲಿಲ್ಲ ಎಂದು ಜಸ್ಪಾಲ್ ಹೇಳಿದ್ದಾರೆ. 'ನಮ್ಮ ಕೈಗಳಿಗೆ ಕೋಳ ಹಾಕಲಾಗಿತ್ತು ಮತ್ತು ನಮ್ಮ ಕಾಲುಗಳಿಗೆ ಸಂಕೋಲೆ ಹಾಕಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಇವುಗಳಿಂದ ನಮಗೆ ಮುಕ್ತಿ ಸಿಕ್ಕಿತು. ಗಡಿಪಾರು ತನಗೆ ತೀವ್ರ ಆಘಾತವನ್ನುಂಟು ಮಾಡಿದೆ' ಎಂದು ಜಸ್ಪಾಲ್ ಹೇಳಿಕೊಂಡಿದ್ದಾರೆ.

'ನಾನು ವೀಸಾ ಪಡೆಯಲು ಹಾಗೂ ವಿಮಾನದ ಮೂಲಕ ಸುರಕ್ಷಿತವಾಗಿ ಪ್ರಯಾಣ ಮಾಡಲು ಏಜೆಂಟ್‌ಗೆ ಸಾಕಷ್ಟು ಹಣ ನೀಡಿದ್ದೇನೆ. ಇದಕ್ಕಾಗಿ ನಾನು ಹಣವನ್ನು ಸಾಲವಾಗಿ ಪಡೆದಿದ್ದೆನು' ಎಂದು ಜಸ್ಪಾಲ್ ಹೇಳಿಕೊಂಡಿದ್ದಾರೆ.

ಈ ಘಟನೆ ಭಾರತೀಯರನ್ನು ಬೆಚ್ಚಿಬೀಳಿಸಿದೆ. ಅಮೆರಿಕಾದಲ್ಲಿ ನೆಲೆಸಿದ ಭಾರತೀಯರ ಬಗ್ಗೆ ಆತಂಕ ಶುರುವಾಗಿದೆ. ಸಾಮಾನ್ಯ ಜನರಿಗೆ ಹೇಗೆಲ್ಲಾ ಮೋಸ ಮಾಡಲಾಗುತ್ತಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದರಿಂದ ಅಮೆರಿಕಾದಲ್ಲಿ ಇರುವ ಭಾರತೀಯರ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+