ಭಾರತದ ಬೆನ್ನಿಗೆ ಚೂರಿ ಹಾಕುತ್ತಿದೆಯಾ ಚೀನಾ?
ನವದೆಹಲಿ: ಭಾರತದ ಗಡಿಯನ್ನ ಚೀನಾ ಆಕ್ರಮಣ ಮಾಡಿಕೊಳ್ಳುತ್ತಿದೆ ಅನ್ನೋ ಆರೋಪ ಮೊದಲಿನಿಂದ ಕೇಳಿಬರುತ್ತಿದೆ. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಸುಮ್ಮನೆ ಇದೆ ಅನ್ನೋದು ವಿಪಕ್ಷಗಳ ಆರೋಪ. ಈ ನಡುವೆ ಚೀನಾ ಭಾರತದ ಗಡಿಯಲ್ಲಿ ನಡೆಸುತ್ತಿರುವ ಆಘಾತಕಾರಿ ಕೆಲಸಗಳ ಫೋಟೋ ಉಪಗ್ರಹದ ಮೂಲಕ ಕನ್ಫರ್ಮ್ ಆಗಿದೆ.
ಹೌದು, 2020ರಿಂದ ವಾಸ್ತವ ನಿಯಂತ್ರಣ ರೇಖೆ ಅಂದ್ರೆ ಲೈನ್ ಆಫ್ ಆಕ್ಚ್ಯುಲ್ ಕಂಟ್ರೋಲ್ (Line of Actual Control) ಉದ್ದಕ್ಕೂ ಚೀನಾ ಸೇನೆಯಿಂದ ವಾಯುನೆಲೆಗಳ ವಿಸ್ತರಣೆ ಕಾರ್ಯ ವೇಗ ಪಡೆಯುತ್ತಿದೆ ಎಂಬ ಅರೋಪ ಕೇಳಿಬರುತ್ತಿದೆ. ಈ ನಡುವೆ ಉಪಗ್ರಹ ಚಿತ್ರ ಆಧರಿಸಿ ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿರುವ ವರದಿ ಸಂಚಲನ ಸೃಷ್ಟಿಸಿದೆ. ಹಾಗಾದರೆ ಈ ವರದಿ ಹೇಳುತ್ತಿರುವುದು ಏನು? ಬನ್ನಿ ತಿಳಿಯೋಣ.

ಗಡಿ ಸಮೀಪದಲ್ಲೇ ರನ್‌ವೇ ನಿರ್ಮಾಣ?
ಅಷ್ಟಕ್ಕೂ 2020ರ ಮೇ ತಿಂಗಳಲ್ಲಿ ಭಾರತ ಮತ್ತು ಚೀನಾ ಸೇನೆ ನಡುವೆ ದೊಡ್ಡ ಘರ್ಷಣೆ ನಡೆದಿತ್ತು. ಹೀಗೆ ಗಡಿಯಲ್ಲಿ ಸಂಘರ್ಷ ಪ್ರಾರಂಭವಾದ ನಂತರ ಚೀನಾ ಸೇನೆ ವಾಯುನೆಲೆ, ಹೆಲಿಪ್ಯಾಡ್, ರೈಲ್ವೆ ಸೌಲಭ್ಯ, ಕ್ಷಿಪಣಿ ನೆಲೆ & ರಸ್ತೆ ಸೇರಿ ಸೇತುವೆ ವಿಸ್ತರಣೆ ಕಾರ್ಯವನ್ನ ಕೈಗೊಂಡಿದೆ ಎಂದು ಉಪಗ್ರಹದ ಚಿತ್ರಗಳು ತೋರಿಸುತ್ತಿವೆ. ಹಾಗೇ ಉಪಗ್ರಹದ ಫೋಟೋ ಪ್ರಕಾರ ಚೀನಾ ಸೇನೆ ತನ್ನ ವಿಮಾನಗಳಿಗಾಗಿ ಭಾರತದ ಗಡಿ ಸಮೀಪವೇ ಹೊಸ ರನ್‌ವೇ ನಿರ್ಮಿಸುವ ಮೂಲಕ ಸೌಕರ್ಯ ವಿಸ್ತರಿಸಿದೆ ಎಂದು ಆರೋಪಿಸಲಾಗಿದೆ.
ಗಡಿಯಲ್ಲಿ ಎದುರಾಯ್ತಾ ಸೂಕ್ಷ್ಮ ಪರಿಸ್ಥಿತಿ?
ಭಾರತದ ಕಡೆ ಆಯಕಟ್ಟಿನ ಸ್ಥಾನಕ್ಕೆ ಪ್ರತಿಯಾಗಿ ಚೀನಾದ ಮೂರು ಏರ್‌ಫೀಲ್ಡ್ ವಿಶ್ಲೇಷಣೆಗಾಗಿ ಆಯ್ಕೆ ಮಾಡಲಾಗಿದೆ. ಜೂನ್ 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮತ್ತು ಇದಕ್ಕೂ ಮೀರಿ ಚೀನೀ ಸೈನಿಕರು ಬಲಿಯಾಗಿದ್ದರು. ಈ ಘಟನೆ ಬಳಿಕ ಭಾರತ ಮತ್ತು ಚೀನಾ ಗಡಿಯಲ್ಲಿ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ. ಉಪಗ್ರಹದ ಚಿತ್ರಗಳು ಕೂಡ ಇದೀಗ ತಲ್ಲಣ ಸೃಷ್ಟಿಸುತ್ತಿವೆ. ಅಲ್ಲದೆ ಗಡಿಯಲ್ಲಿ ಸೂಕ್ಷ್ಮ ಸ್ಥಿತಿ ಇದೆಯಾ ಎಂಬ ಅನುಮಾನ ಮೂಡಿಸಿದೆ.
ರಷ್ಯಾ ಹೇಳಿದರೂ ಸಮಸ್ಯೆ ಬಗೆಹರಿದಿಲ್ಲ!
ಭಾರತದ ಜೊತೆಗಿರುವ ಗಡಿ ಸಮಸ್ಯೆ ಸೂಕ್ತವಾಗಿ ಮತ್ತು ಶಾಂತಿಯುವಾಗಿ ಬಗೆಹರಿಸಿಕೊಳ್ಳಿ ಎಂದು ಚೀನಾ ನಾಯಕರಿಗೆ ರಷ್ಯಾ ಬುದ್ಧಿ ಹೇಳಿತ್ತು. ಆದ್ರೂ ಗಡಿಯಲ್ಲಿ ಕಿತಾಪತಿ ಹೀಗೆ ಮುಂದುವರಿದಿರುವುದು ವಿಪರ್ಯಾಸ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಜೊತೆ ರಷ್ಯಾ ಉತ್ತಮ ಸಂಬಂಧ ಹೊಂದಲು ಬಯಸುತ್ತಿದೆ. ಅದೇ ರೀತಿ ಚೀನಾ ಕೂಡ ಗಡಿಯ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಸಲಹೆ ನೀಡಿತ್ತು. ಆದರೂ ರಷ್ಯಾ ಆದೇಶ ರಿಸಲ್ಟ್ ಕೊಡುತ್ತಿಲ್ಲ.

ಭಾರತದ ಜಾಗ ಆಕ್ರಮಿಸುತ್ತಿದೆಯಾ ಚೀನಾ?
ಇಷ್ಟೆಲ್ಲಾ ಆರೋಪಗಳ ನಡುವೆ, ಭಾರತದ ಜಾಗವನ್ನ ಚೀನಾ ಆಕ್ರಮಣ ಮಾಡುತ್ತಿರುವ ಆರೋಪ ಕೂಡ ಕೇಳಿಬರುತ್ತಿದೆ. ಗಡಿಯಲ್ಲಿ ಮೆಲ್ಲಗೆ ಹಳ್ಳಿಗಳನ್ನ ನಿರ್ಮಾಣ ಮಾಡುತ್ತಾ, ಭಾರತಕ್ಕೆ ಸೇರಿದ ಜಾಗಗಳನ್ನ ಚೀನಾ ತನ್ನ ವಶಕ್ಕೆ ಪಡೆದಿದೆ ಅನ್ನೋ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ ಉಪಗ್ರಹದ ಚಿತ್ರಗಳು ಭಾರತದ ಗಡಿ ಭಾಗದ ಬಗ್ಗೆ ಹೊಸ ಸಂಚಲನ ಸೃಷ್ಟಿಮಾಡಿವೆ. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ರಸ್ತೆ, ಏರ್ಪೋರ್ಟ್ ನಿರ್ಮಾಣ ಕಾರ್ಯ?
ಅಂದಹಾಗೆ ಭಾರತದ ಗಡಿ ಭಾಗದಲ್ಲಿ ಆಕ್ರಮಣ ನಡೆಸಿದ ನಂತರ, ಅಲ್ಲಿನ ಹಳ್ಳಿಗಳನ್ನು ತನ್ನ ವಶಕ್ಕೆ ಪಡೆಯಲು ಚೀನಾ ಏರ್ಪೋರ್ಟ್ & ರಸ್ತೆ ನಿರ್ಮಾಣ ಮಾಡುತ್ತಿದೆ ಅನ್ನೋ ಆರೋಪ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಇದೀಗ ಉಪಗ್ರಹದ ಚಿತ್ರಗಳು ಕೂಡ ಅದೇ ಆರೋಪ ಮಾಡುತ್ತಿವೆ. ಮತ್ತೊಂದ್ಕಡೆ ದಿಢೀರ್ ಭಾರತಕ್ಕೆ ಸೇರಿದ ಪ್ರದೇಶಗಳಲ್ಲಿ ಚೀನಾದ ಹಳ್ಳಿಗಳು ಪ್ರತ್ಯಕ್ಷ ಆಗಿವೆ ಅನ್ನೋ ಆರೋಪ ಕೂಡ ಕೇಳಿಬರುತ್ತಿದೆ.

ಒಟ್ನಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಘರ್ಷಣೆ ಹೊಸ ಸ್ವರೂಪ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಭೀಕರ ಸ್ವರೂಪ ಪಡೆದರೂ ಅಚ್ಚರಿ ಪಡಬೇಕಿಲ್ಲ. ಆದರೆ ಗಡಿ ಭಾಗದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು, ಗಡಿ ಭಾಗದಲ್ಲಿ ವಾಸ ಇರುವ ಜರನಲ್ಲಿ ಕೂಡ ಆತಂಕ ಸೃಷ್ಟಿಸಿರುವುದು ಸುಳ್ಳಲ್ಲ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications