ಚಿತ್ರಗಳು : ನರೇಂದ್ರ ಮೋದಿ ಅಚ್ಚರಿಯ ಲಾಹೋರ್ ಭೇಟಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 26 : ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರನೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ರಾಜತಾಂತ್ರಿಕ ಶಿಷ್ಟಾಚಾರ ಬದಿಗೊತ್ತಿ ನಡೆದ ಈ ಭೇಟಿ ದೇಶದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಉಭಯ ದೇಶಗಳ ಬಾಂಧವ್ಯ ಬಲಪಡಿಸುವಲ್ಲಿಯೂ ಈ ಭೇಟಿ ಮಹತ್ವದ ಬೆಳವಣಿಗೆಯಾಗಿದೆ.

ಡಿಸೆಂಬರ್ 25ರ ಶುಕ್ರವಾರ ಬೆಳಗ್ಗೆ ರಷ್ಯಾದಿಂದ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಬಂದ ನರೇಂದ್ರ ಮೋದಿ ಅವರು, ಅಲ್ಲಿ ಸಂಸತ್ ಭವನ ಉದ್ಘಾಟಿಸಿದ ನಂತರ ದೆಹಲಿಗೆ ಬರಬೇಕಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಮೋದಿ ಪ್ರವಾಸದಲ್ಲಿ ಮಹತ್ತರ ಬದಲಾವಣೆಯಾಯಿತು. ಲಾಹೋರ್‌ಗೆ ಭೇಟಿ ನೀಡುವುದಾಗಿ ಮೋದಿ ಟ್ವಿಟ್ ಮಾಡಿದರು. [ಕಾಬೂಲ್ ನಲ್ಲಿ ತಿಂಡಿ, ಲಾಹೋರ್ ನಲ್ಲಿ ಊಟ, ಅಬ್ಬಬ್ಬಾ!]

ಶಿಷ್ಟಾಚಾರ ಬದಿಗೊತ್ತಿದ ಪಾಕ್ ಪ್ರಧಾನಿ ನವಾಜ್ ಷರೀಫ್, ಲಾಹೋರ್‌ ಏರ್‌ಪೋರ್ಟ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಆಗಮಿಸಿದರು. ಸುಮಾರು ಎರಡು ಗಂಟೆಗಳ ಕಾಲ ಲಾಹೋರ್‌ನಲ್ಲಿದ್ದ ಮೋದಿ, ಷರೀಫ್‌ ಅವರಿಗೆ 66ನೇ ಜನ್ಮದಿನದ ಶುಭ ಕೋರಿದರು. ಷರೀಫ್ ಅವರ ನಿವಾಸಕ್ಕೆ ತೆರಳಿ ಅವರ ಮೊಮ್ಮಗಳ ಮದುವೆಯಲ್ಲಿ ಪಾಲ್ಗೊಂಡರು.

ಅಟಲ್ ಬಿಹಾರಿ ವಾಜಪೇಯಿ ಅವರ ಬಳಿಕ ಭಾರತದ ಪ್ರಧಾನಿಯೊಬ್ಬರು ಪಾಕಿಸ್ತಾನಕ್ಕೆ ಹೋಗಿದ್ದು ಇದೇ ಮೊದಲು. ಇದುವರೆಗೂ ಭಾರತದ ಪ್ರಧಾನಿಗಳಾದ ವಾಜಪೇಯಿ, ಜವಾಹರಲಾಲ್‌ ನೆಹರೂ, ರಾಜೀವ್‌ ಗಾಂಧಿ ಅವರು ಪಾಕ್‌ಗೆ ಭೇಟಿ ನೀಡಿದ್ದರು. ಲಾಹೋರ್‌ಗೆ ಭೇಟಿ ನೀಡಿ ಮೋದಿ ಅವರು ಈ ಸಾಲಿಗೆ ಸೇರಿದರು. ಮೋದಿ ಪಾಕ್‌ ಭೇಟಿಯ ಚಿತ್ರಗಳು ಇಲ್ಲಿವೆ.....[ಪಿಟಿಐ ಚಿತ್ರಗಳು]

ಸಂಚಲನ ಮೂಡಿಸಿದ ಮೋದಿ ಟ್ವಿಟ್

ಸಂಚಲನ ಮೂಡಿಸಿದ ಮೋದಿ ಟ್ವಿಟ್

ಡಿಸೆಂಬರ್ 25ರ ಶುಕ್ರವಾರ ರಷ್ಯಾದಿಂದ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಬಂದ ನರೇಂದ್ರ ಮೋದಿ ಅವರು ಅಲ್ಲಿ ಸಂಸತ್ ಭವನ ಉದ್ಘಾಟಿಸಿದ ನಂತರ ದೆಹಲಿಗೆ ಬರಬೇಕಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಮೋದಿ ಪ್ರವಾಸದಲ್ಲಿ ಮಹತ್ತರ ಬದಲಾವಣೆಯಾಯಿತು. ಲಾಹೋರ್‌ನಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ ಅವರನ್ನು ಭೇಟಿಯಾಗಲಿದ್ದೇನೆ ಎಂದು ಮೋದಿ ಟ್ವಿಟ್ ಮಾಡಿದರು. ಇದು ಭಾರತ ಮತ್ತು ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿತು.

ರಷ್ಯಾದಿಂದ-ದೆಹಲಿಯವರೆಗೆ

ರಷ್ಯಾದಿಂದ-ದೆಹಲಿಯವರೆಗೆ

ಗುರುವಾರ ರಾತ್ರಿ ರಷ್ಯಾದಲ್ಲಿದ್ದ ಮೋದಿ ಶುಕ್ರವಾರ ಬೆಳಗ್ಗೆ ಕಾಬೂಲ್, ಮಧ್ಯಾಹ್ನ ಲಾಹೋರ್‌ಗೆ ಭೇಟಿ ನೀಡಿ ಸಂಜೆ ನವದೆಹಲಿಗೆ ವಾಪಸ್ ಆದರು. ಮೋದಿ ಲಾಹೋರ್ ಭೇಟಿ ಅವರ ವಿದೇಶ ಪ್ರವಾಸದ ಪಟ್ಟಿಯಲ್ಲಿಯೇ ಸೇರಿರಲಿಲ್ಲ.

ಸಂತೋಷದಿಂದ ಆಹ್ವಾನಿಸಿದ ಷರೀಫ್

ಸಂತೋಷದಿಂದ ಆಹ್ವಾನಿಸಿದ ಷರೀಫ್

ಲಾಹೋರ್‌ನಲ್ಲಿ ಭೇಟಿಯಾಗೋಣ ಎಂಬ ಮೋದಿ ಆಹ್ವಾನಕ್ಕೆ ಷರೀಫ್‌ ಕೂಡ ಅಚ್ಚರಿ ವ್ಯಕ್ತಪಡಿಸಿದರು. 'ಮೋದಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಷರೀಫ್‌ ಅವರು, ದಯವಿಟ್ಟು ಬನ್ನಿ... ಒಟ್ಟಿಗೆ ಚಹಾ ಸೇವಿಸೋಣ' ಎಂದು ಪ್ರತಿಕ್ರಿಯಿಸಿದರು.

ಖುದ್ದಾಗಿ ಶುಭಾಶಯ ಕೋರಿದ ಮೋದಿ

ಖುದ್ದಾಗಿ ಶುಭಾಶಯ ಕೋರಿದ ಮೋದಿ

ಶುಕ್ರವಾರ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ ಅವರ 66ನೇ ಹುಟ್ಟುಹಬ್ಬ. ದೂರವಾಣಿ ಮೂಲಕ ಜನ್ಮದಿನದ ಶುಭಾಶಯ ಕೋರಿದ ಮೋದಿ ಅವರು, ಲಾಹೋರ್‌ನಲ್ಲಿ ಮತ್ತೊಮ್ಮೆ ಖುದ್ದಾಗಿ ಭೇಟಿ ಆದಾಗ ಶುಭಾಶಯ ಸಲ್ಲಿಸಿದರು. ಮೋದಿ ಲಾಹೋರ್ ಭೇಟಿ, ಪೂರ್ವನಿಯೋಜಿತ ಭೇಟಿಯಲ್ಲ ಎಂದು ಪಾಕ್‌ ವಿದೇಶಾಂಗ ಕಾರ್ಯದರ್ಶಿ ಐಜಾಜ್‌ ಚೌಧರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶಿಷ್ಟಾಚಾರ ಬದಿಗೊತ್ತಿದ ಪಾಕ್ ಪ್ರಧಾನಿ

ಶಿಷ್ಟಾಚಾರ ಬದಿಗೊತ್ತಿದ ಪಾಕ್ ಪ್ರಧಾನಿ

ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಶಿಷ್ಟಾಚಾರ ಬದಿಗೊತ್ತಿ, ಲಾಹೋರ್‌ ಏರ್‌ಪೋರ್ಟ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಆಗಮಿಸಿದರು. ಏರ್‌ಪೋರ್ಟ್‌ನಲ್ಲಿ ನರೇಂದ್ರ ಮೋದಿ ಅವರು ಭವ್ಯ ಸ್ವಾಗತ ದೊರೆಯಿತು.

'ನೀವು ಕೊನೆಗೂ ಬಂದಿರಲ್ಲ'

'ನೀವು ಕೊನೆಗೂ ಬಂದಿರಲ್ಲ'

ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡ ಷರೀಷ್ ಅವರು 'ನೀವು ಕೊನೆಗೂ ಬಂದಿರಲ್ಲಾ...' ಎಂದಿದ್ದಾರೆ. ಅದಕ್ಕೆ ಪ್ರಧಾನಿ, 'ಹೌದು. ಖಂಡಿತವಾಗಿಯೂ ನಾನು ಇಲ್ಲಿಗೆ ಬಂದಿದ್ದೇನೆ' ಎಂದು ಉತ್ತರಿಸಿದ್ದಾರೆ ಎಂದು ಪಾಕ್‌ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲಾಹೋರ್‌ನಲ್ಲಿ ಮೋದಿ ಮಾಡಿದ್ದೇನು?

ಲಾಹೋರ್‌ನಲ್ಲಿ ಮೋದಿ ಮಾಡಿದ್ದೇನು?

ನರೇಂದ್ರ ಮೋದಿ ಅವರು ಸುಮಾರು 2 ಗಂಟೆಗಳ ಕಾಲ ಲಾಹೋರ್‌ನಲ್ಲಿದ್ದರು. 66ನೇ ಜನ್ಮದಿನ ಆಚರಿಸಿಕೊಂಡ ಷರೀಫ್‌ ಅವರಿಗೆ ಖುದ್ದಾಗಿ ಶುಭ ಕೋರಿದರು. ಷರೀಫ್‌ ಅವರ ನಿವಾಸಕ್ಕೆ ತೆರಳಿ ಅವರ ಮೊಮ್ಮಗಳಾದ ಮೆಹರುನ್ನಿಸಾ ಮದುವೆಯಲ್ಲಿ ಪಾಲ್ಗೊಂಡರು.

'ನನಗೆ ಅವಳಿ ಸಂಭ್ರಮ ನೀಡಿತು'

'ನನಗೆ ಅವಳಿ ಸಂಭ್ರಮ ನೀಡಿತು'

ಲಾಹೋರ್ ಭೇಟಿ ಬಳಿಕ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ ಅವರು 'ಷರೀಫ್‌ ಕುಟುಂಬ ಜತೆ ಸುಂದರ ಸಂಜೆ ಕಳೆದೆ. ನವಾಜ್ ಸಾಹೇಬರ ಹುಟ್ಟುಹಬ್ಬ ಮತ್ತು ಮೊಮ್ಮಗಳ ಮದುವೆ ಕಾರ್ಯಕ್ರಮ ನನಗೆ ಅವಳಿ ಸಂಭ್ರಮ ನೀಡಿತು' ಎಂದು ಹೇಳಿದ್ದಾರೆ.

ಪಾಕಿಸ್ತಾನಲ್ಲೆ ಭೇಟಿ ಕೊಟ್ಟ 4ನೇ ಪ್ರಧಾನಿ

ಪಾಕಿಸ್ತಾನಲ್ಲೆ ಭೇಟಿ ಕೊಟ್ಟ 4ನೇ ಪ್ರಧಾನಿ

ಸ್ವಾತಂತ್ರ್ಯಾ ನಂತರ ಪಾಕಿಸ್ತಾನಕ್ಕೆ ಭೇಟಿ ಕೊಟ್ಟ 4ನೇ ಪ್ರಧಾನಿ ನರೇಂದ್ರ ಮೋದಿ. ಅಟಲ್ ಬಿಹಾರಿ ವಾಜಪೇಯಿ ಬಳಿಕ ಭಾರತದ ಪ್ರಧಾನಿಯೊಬ್ಬರು ಪಾಕಿಸ್ತಾನಕ್ಕೆ ಹೋಗಿದ್ದು ಇದೇ ಮೊದಲು. ವಾಜಪೇಯಿ ಅವರು 2004ರಲ್ಲಿ 12ನೇ ಸಾರ್ಕ್‌ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಸ್ಲಾಮಾಬಾದ್‌ ತೆರಳಿದ್ದರು. ಅದಕ್ಕೂ ಮುನ್ನ ಅವರು 1999ರಲ್ಲಿ ಪಾಕ್‌ಗೆ ಭೇಟಿ ನೀಡಿದ್ದರು. ಜವಾಹರಲಾಲ್‌ ನೆಹರೂ (1953, 1960) ಮತ್ತು ರಾಜೀವ್‌ ಗಾಂಧಿ (1988, 1989) ತಲಾ ಎರಡು ಸಲ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister of India Narendra Modi landed in Lahore, Pakistan on his way back from Kabul to New Delhi on Friday, December 25th afternoon. Narendra Modi met Pakistan PM Nawaz Sharif and his family at Lahore.
Please Wait while comments are loading...