Imran Khan Arrested: ವಿಡಿಯೋ ಮಾಡಿ ಜೈಲಿಗೆ ಹೋದ ಇಮ್ರಾನ್!

ಇಸ್ಲಾಮಾಬಾದ್: ಇಮ್ರಾನ್ ಖಾನ್ ಜೈಲುಕಂಬಿ ಹಿಂದೆ ಬೀಳುವ ಮೊದಲು ರೆಕಾರ್ಡ್ ಮಾಡಿದ್ದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ನಂತರವೇ ಇಮ್ರಾನ್ ಖಾನ್ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದರು. ಆದ್ರೆ ಇಸ್ಲಾಮಾಬಾದ್ ಹೈಕೋರ್ಟ್‌ನಿಂದ ಹೊರಬರುತ್ತಿದ್ದಂತೆ ಲಾಕ್ ಆಗಿದ್ದಾರೆ. ಹಾಗಾದ್ರೆ ಇಮ್ರಾನ್ ವಿಡಿಯೋದಲ್ಲಿ ಅಂತಹದ್ದೇನಿದೆ? ನೋಡೋಣ ಬನ್ನಿ.

ಇಮ್ರಾನ್ ಖಾನ್ ಮತ್ತು ಪಾಕಿಸ್ತಾನದ ISI ಅಂದರೆ ನಡುವೆ ದೊಡ್ಡ ಜಗಳ ಆರಂಭವಾಗಿ ಹಲವು ತಿಂಗಳೇ ಕಳೆದಿದೆ. ಅದರಲ್ಲೂ ಇಮ್ರಾನ್ ಪಾಕಿಸ್ತಾನದ ಪ್ರಧಾನಿ ಪಟ್ಟದಿಂದ ಕೆಳಗಿಳಿದ ನಂತರ ಜೀವ ಉಳಿಸಿಕೊಂಡರೆ ಸಾಕು ಎಂಬ ಸ್ಥಿತಿಯಲ್ಲಿ ಇದ್ದಾರೆ. ಹೀಗಿದ್ದಾಗಲೇ ಇಮ್ರಾನ್ ವಿರುದ್ಧ ಮನಸ್ಸಿಗೆ ಬಂದಂತೆ ಕೇಸ್ ಹಾಕಿ ಕಾಟ ಕೊಡುತ್ತಿರುವ ಆರೋಪವಿದೆ. ಈ ಕಾರಣಕ್ಕೇ ಇಮ್ರಾನ್ ಕೂಡ ರಾಜಕೀಯ ಸಭೆ ಮೂಲಕ ಪಾಕಿಸ್ತಾನ ಭ್ರಷ್ಟ ಸೇನಾಧಿಕಾರಿಗಳು, ಐಎಸ್‌ಐ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು. ಆದರೆ ಈಗ ಅದೇ ಇಮ್ರಾನ್ ಬುಡಕ್ಕೆ ಬಾಂಬ್ ಇಟ್ಟುಬಿಟ್ಟಿದೆ.

Imran Khans video getting viral after he get arrested in Islamabad

ವಿಡಿಯೋ ಮಾಡಿ ಜೈಲಿಗೆ ಹೋದ ಇಮ್ರಾನ್!

ISI ಅಂದರೆ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್, ಇದು ಪಾಕಿಸ್ತಾನವನ್ನೇ ಕಂಟ್ರೋಲ್ ಮಾಡುತ್ತದೆ. ಈ ಸಂಸ್ಥೆ ಪಾಕ್ ಆಂತರಿಕ ಭದ್ರತೆ ನೋಡಿಕೊಳ್ಳುವ ಗೂಢಚಾರಿ ಸಂಘಟನೆ. ಅದ್ರಲ್ಲೂ ಭಾರತದಲ್ಲಿ ನಡೆಯೋ ಟೆರರ್ ಆಕ್ಟಿವಿಟಿಗಳ ಹಿಂದೆ ಪಾಕಿಸ್ತಾನಿ ISI ಕೈವಾಡ ಪದೇ ಪದೆ ಸಾಬೀತಾಗಿದೆ. ಇಂತಹ ಸಂಸ್ಥೆ ವಿರುದ್ಧ ಬೆಳಗ್ಗೆ ಇಮ್ರಾನ್ ರೊಚ್ಚಿಗೆದ್ದು ವಿಡಿಯೋ ಮಾಡಿದ್ರು. ವಿಡಿಯೋದಲ್ಲಿ ಐಎಸ್‌ಐ ಅಧಿಕಾರಿಗಳ ಭ್ರಷ್ಟ ವ್ಯವಸ್ಥೆ & ಪಾಕಿಸ್ತಾನಕ್ಕೆ ಅವರು ಮಾಡ್ತಿತ್ತಿರುವ ಮೋಸ ಎಂಥದ್ದು ಎಂದು ಬೈದಿದ್ರು ಇಮ್ರಾನ್. ದುರಾದೃಷ್ಟ ಏನಂದ್ರೆ ಹೀಗೆ ಇಮ್ರಾನ್ ವಿಡಿಯೋ ಮಾಡಿ 3 ಗಂಟೆ ಕಳೆಯುವ ಹೊತ್ತಿಗೆ ಜೈಲು ಸೇರಿದ್ದಾರೆ.

ಇಮ್ರಾನ್ ಅಭಿಮಾನಿಗಳ ಆಕ್ರೋಶ

ಪಾಕಿಸ್ತಾನ ಮಾಜಿ ಪ್ರಧಾನಿಯನ್ನ ಬಂಧಿಸಿದ್ದು ಪಾಕಿಸ್ತಾನದ ಅರೆಸೈನಿಕ ಪಡೆ. ಇಸ್ಲಾಮಾಬಾದ್ ಹೈಕೋರ್ಟ್ ಹೊರಗೆ ಬರುತ್ತಿದ್ದಂತೆ ಪಾಕಿಸ್ತಾನ ಅರೆಸೈನಿಕ ಪಡೆ ಇಮ್ರಾನ್ ಖಾನ್ ಅವರನ್ನ ಹಿಡಿದು ವಾಹನಕ್ಕೆ ತುಂಬಿದೆ. ಈ ಘಟನೆ ಬಳಿಕ ತಕ್ಷಣ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗಿ, ಗಾಜುಗಳನ್ನ ಒಡೆಯಲು ಶುರುಮಾಡಿದ ಇಮ್ರಾನ್ ಅಭಿಮಾನಿಗಳು ಅರೆಸೈನಿಕ ಪಡೆ ವಿರುದ್ಧ ತಿರುಗಿಬಿದ್ದರು. ಆಗ ಪರಿಸ್ಥಿತಿ ಕೈಮೀರುವ ಸೂಚನೆ ಸಿಕ್ಕ ಕೂಡಲೇ ಇಮ್ರಾನ್ ಖಾನ್ ಕರೆದುಕೊಂಡು ಎಸ್ಕೇಪ್ ಆಗಿದೆ ಪಾಕ್ ಅರೆಸೈನಿಕ ಪಡೆ.

ಅತಿಯಾದ ಆತ್ಮವಿಶ್ವಾಸ ಮುಳುವಾಯ್ತಾ?

ಪಾಕಿಸ್ತಾನದಲ್ಲಿ ದೊಡ್ಡ ಬದಲಾವಣೆ ತಂದು ಬಿಡ್ತೀನಿ ಎಂಬ ಹುಮ್ಮಸ್ಸಿನಲ್ಲಿ ಮಾತನಾಡುತ್ತಿದ್ದ ಇಮ್ರಾನ್ ಸ್ವತಃ ತಮ್ಮ ಜೀವ ಉಳಿಸಿಕೊಳ್ಳಲು ಹೋರಾಡಬೇಕಾದ ಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲೇ ಅರೆಸ್ಟ್ ಆಗಿದ್ದು, ಇಮ್ರಾನ್ ಜೀವ ಮತ್ತೆ ಅಪಾಯದಲ್ಲಿ ಸಿಲುಕಿದೆ ಎಂದು ಇಮ್ರಾನ್ ಖಾನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹಾಗೇ ಪಾಕಿಸ್ತಾನದ ವಿವಿಧೆಡೆ ಹಿಂಸೆ ಭುಗಿಲೆದ್ದು, ಭೀಕರ ಪ್ರತಿಭಟನೆ ಆರಂಭವಾಗಿದೆ. ಹೀಗಾಗಿ ಪಾಕಿಸ್ತಾನ ಸೇನೆ ಮಧ್ಯಪ್ರವೇಶ ಮಾಡುವ ಮುನ್ಸೂಚನೆ ಸಿಕ್ಕಿದೆ.

ಗುಂಡು ತಿಂದು ಬದುಕಿದ್ದ ಇಮ್ರಾನ್!

ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಇಮ್ರಾನ್ ಖಾನ್ ಕಾಲಿಗೆ ಗುಂಡು ಹೊಡೆಯಲಾಗಿತ್ತು. ಹೇಗೋ ಬಚಾವ್ ಆಗಿ ಜೀವ ಉಳಿಸಿಕೊಂಡರು ಪಾಕ್ ಮಾಜಿ ಪ್ರಧಾನಿ. ಆದರೆ ಈಗಲೂ ಅಂತಹದ್ದೇ ಬೆದರಿಕೆ ಕರೆಗಳು ಹಾಗೂ ಇಮ್ರಾನ್ ಕೊಲೆಗೆ ಪ್ರಯತ್ನಗಳು ಸಾಗಿವೆ. ಇದರ ನಡುವೆ ಪಾಕ್ ಕ್ರಿಕೆಟ್ ಟೀಂ ಮಾಜಿ ಆಟಗಾರ ಕಂ ಪಾಕ್ ಮಾಜಿ ಪ್ರಧಾನಿ ಜೈಲು ಸೇರಿದ್ದು, ಇಮ್ರಾನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಒಟ್ಟಾರೆ ಹೇಳುವುದಾದರೆ ಪಾಕಿಸ್ತಾನದ ಬೀದಿಗಳಲ್ಲಿ ಮತ್ತೆ ರಕ್ತ ಹರಿಯುವ ಮುನ್ಸೂಚನೆ ಸಿಕ್ಕಿದೆ. ಇಮ್ರಾನ್ ಬಂಧನದ ಬಳಿಕ ಹೊತ್ತಿಕೊಂಡಿರುವ ಬೆಂಕಿ ಮತ್ತೆ ಪಾಕಿಸ್ತಾನದ ಸಾಮಾನ್ಯ ಜನರ ನೆಮ್ಮದಿ ಕೆಡಿಸುವುದು ಪಕ್ಕಾ. ಮತ್ತೊಂದ್ಕಡೆ ಇಮ್ರಾನ್ ಖಾನ್ ಬಂಧವಾಗಿರುವ ಹಿನ್ನೆಲೆ ಮಾಜಿ ಪ್ರಧಾನಿ ರಾಜಕೀಯ ಭವಿಷ್ಯವೂ ಡೋಲಾಯಮಾನ ಸ್ಥಿತಿಗೆ ತಲುಪಿದ್ದು, ವಿಪಕ್ಷಗಳ ನಾಯಕರು ಸಂಭ್ರಮಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+