ಇಮ್ರಾನ್ ಖಾನ್ ಹಣೆಬರಹ ಶನಿವಾರ ಡಿಸೈಡ್ ಆಗುತ್ತೆ!
ಲಾಹೋರ್: ಪಾಕಿಸ್ತಾನ ಸ್ಪೆಷಾಲಿಟಿನೇ ಹಂಗೆ, ಯಾವ ಟೈಂಗೆ ಯಾರ ಹೆಣ ಉರುಳುತ್ತೋ ಗೊತ್ತಿಲ್ಲ. ಹಿಂದೆ ಹಲವು ರಾಜಕಾರಣಿಗಳು ಪಾಕ್‌ನಲ್ಲಿ ಬೀದಿ ಹೆಣವಾಗಿದ್ದಾರೆ. ಈಗ ಯಾರ ಸರದಿ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಪಾಕ್ ಮಿಲಿಟರಿ ಇಮ್ರಾನ್ ಟಾರ್ಗೆಟ್ ಮಾಡುತ್ತಿರುವ ರೀತಿ ಭಯ ಹುಟ್ಟಿಸಿರುವಾಗಲೇ, ಶನಿವಾರ ಇಮ್ರಾನ್ ಖಾನ್ (Imran Khan) ಹಣೆಬರಹಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ತನ್ನ ಮೇಲಿರುವ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ನೀಡುವಂತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಲಾಹೋರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಇಮ್ರಾನ್ ಅರ್ಜಿ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಕಳೆದ ವಾರ ಅರೆಸ್ಟ್ ಆಗಿ ಜೈಲು ಸೇರಿದ್ದ ಇಮ್ರಾನ್, ಮೊನ್ನೆ ಮೊನ್ನೆ ತಾನೆ ರಿಲೀಸ್ ಆಗಿದ್ದರು. ಹೀಗೆ ರಿಲೀಸ್ ಆಗುತ್ತಿದ್ದಂತೆ ಅಲರ್ಟ್ ಆಗಿ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹಾಗಾದ್ರೆ ಜಾಮೀನು ಅರ್ಜಿ ತೀರ್ಪು ಹೊರಬೀಳುವುದು ಯಾವಾಗ? ಬನ್ನಿ ತಿಳಿಯೋಣ.

ಇಮ್ರಾನ್ ವಿರುದ್ಧ ಕೋರ್ಟ್‌ಗೆ ಕೋಪ!
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸಿಕ್ಕಾಪಟ್ಟೆ ಟಾರ್ಗೆಟ್ ಆಗಿದ್ದಾರೆ. ಅದರಲ್ಲೂ ಹೇಗಾದರೂ ಮಾಡಿ ಖಾನ್ ಅರೆಸ್ಟ್ ಮಾಡಿಸಬೇಕು ಎಂದು ಪಾಕಿಸ್ತಾನದ ಕೇಂದ್ರ ಸರ್ಕಾರ ಡಿಸೈಡ್ ಆಗಿಬಿಟ್ಟಿದೆ. ಇದೇ ಕಾರಣಕ್ಕೆ ಖಾನ್ ವಿರುದ್ಧ ಹಲವು ರೀತಿಯಲ್ಲಿ ಒತ್ತಡ ಹಾಕಿಸುತ್ತಿರುವ ಆರೋಪ ಕೇಳಿಬಂದಿದೆ. ಮತ್ತೊಂದ್ಕಡೆ ಇಮ್ರಾನ್ ತನ್ನ ಜಾಮೀನು ಅರ್ಜಿ ವಿಚಾರಣೆಗೆ ಖುದ್ದು ಹಾಜರಾಗಬೇಕೆಂಬ ಒತ್ತಡವಿದೆ. ಹೀಗಾಗಿ ಲಾಹೋರ್ ಹೈಕೋರ್ಟ್ ಕೂಡ ಇಂದು ಗರಂ ಆಗಿತ್ತು, ಕೊನೆಗೆ ಏನಾಯ್ತು ಗೊತ್ತಾ? ಮುಂದೆ ಓದಿ.
ಎಲ್ರೀ ಅವರು ಇಮ್ರಾನ್ ಖಾನ್!
ಹೌದು, ಲಾಹೋರ್ ಹೈಕೋರ್ಟ್ ವಿಚಾರಣೆ ಶುರು ಮಾಡಿದಾಗ ಇಮ್ರಾನ್ ಖಾನ್ ಬಂದಿರದೇ ಇದ್ದಿದ್ದನ್ನು ನೋಡಿ ಜಡ್ಜ್ ಈ ರೀತಿ ಖಾನ್ ವಕೀಲರಿಗೆ ಪ್ರಶ್ನೆ ಮಾಡಿದ್ದಾರೆ. ಉತ್ತರ ನೀಡಿದ್ದ ಖಾನ್ ಪರ ವಕೀಲರು, ಇಮ್ರಾನ್ ಖಾನ್ ಬೆಳಗ್ಗೆ 11 ಗಂಟೆ ಒಳಗೆ ನ್ಯಾಯಾಲಯಕ್ಕೆ ಬರ್ತಾರೆ ಎಂದು ಉತ್ತರ ನೀಡಿದ ಹಿನ್ನೆಲೆ ಜಡ್ಜ್ ತಣ್ಣಗಾದರು. ಮತ್ತೊಂದ್ಕಡೆ ಪಂಜಾಬ್‌ನ ಮಧ್ಯಂತರ ಸರ್ಕಾರ ಖಾನ್ ಜಾಮೀನು ಅರ್ಜಿ ವಿರುದ್ಧ ವಾದ ಮಂಡಿಸಿ, ಜಾಮೀನು ಅರ್ಜಿ ಪರಿಗಣಿಸಬೇಡಿ ಎಂದು ವಾದಿಸಿತ್ತು.

ಕೊನೆಗೂ ಬಂದು ಬೇಡಿಕೊಂಡ ಖಾನ್!
ಲಾಹೋರ್ ಹೈಕೋರ್ಟ್ ಇಮ್ರಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಆರಂಭಿಸಿ ಹಲವು ಗಂಟೆಗಳ ಬಳಿಕ ನ್ಯಾಯಾಲಯಕ್ಕೆ ಬಂದರು. ವಿಚಾರಣೆ ವೇಳೆ ತನಗೆ ಏಕೆ ಜಾಮೀನು ನೀಡಬೇಕು ಎಂದು ಖಾನ್ ವಿವರಣೆ ನೀಡಿದರು. ನಾನು ರಾಜಕೀಯವಾಗಿ ಸಂತ್ರಸ್ತ, ನನ್ನ ವಿರುದ್ಧ ಹಲವು ಪ್ರಕರಣಗಳಿವೆ. ಆದ್ದರಿಂದ ಪೊಲೀಸರು ಯಾವುದೇ ಕ್ಷಣದಲ್ಲಿ ನನ್ನ ಬಂಧಿಸಬಹುದು, ಹೀಗಾಗಿ ನನಗೆ ಜಾಮೀನು ನೀಡಿ ದಯವಿಟ್ಟು ಎಂದು ಖಾನ್ ಲಾಹೋರ್ ಹೈಕೋರ್ಟ್ ಜಡ್ಜ್ ಎದುರು ಮನವಿ ಮಾಡಿದರು.
ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರ
ಇಮ್ರಾನ್ ವಿರುದ್ಧ ಪಾಕಿಸ್ತಾನ ಸೇನೆ & ಪಾಕಿಸ್ತಾನ ಗುಪ್ತಚರ ಸಂಸ್ಥೆ ISI ಮಸಲತ್ತು ನಡೆಸುತ್ತಿರುವ ಆರೋಪವಿದೆ. ಈ ಸಂದರ್ಭದಲ್ಲಿ ಪಾಕ್ ಸರ್ಕಾರ ಕೂಡ ಇವರ ಜೊತೆ ಕೈಜೋಡಿಸಿದ ಗಂಭೀರ ಆರೋಪ ಕೇಳಿಬರುತ್ತಿದೆ. ಮೇ 9ರ ನಂತರ ಖಾನ್ ಬೆಂಬಲಿಗರು ನಡೆಸಿರುವ ಹಿಂಸೆಗೆ ಅವರನ್ನೇ ಹೊಣೆ ಮಾಡೋಕೆ ಎಲ್ಲಾ ತಯಾರಿ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಾಮೀನು ಪಡೆಯಲು ಇಮ್ರಾನ್ ಖಾನ್ ಲಾಹೋರ್ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಮುಂದಿನ ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರವಾಗಲಿದೆ.

ಒಟ್ನಲ್ಲಿ ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಅಲ್ಲಿನ ರಾಜಕೀಯ ಅಸ್ತಿರತೆಯನ್ನ ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಈ ಸಂದರ್ಭದಲ್ಲೇ ಇಮ್ರಾನ್ ಖಾನ್ ಪಾಕ್ ಸೇನೆ ವಿರುದ್ಧ ಸಮರ ಸಾರಿದ್ದಾರೆ. ಆದರೆ ಇಮ್ರಾನ್‌ಗೆ ಇನಿಲ್ಲದಂತೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಇದೇ ವೇಳೆ ಇಮ್ರಾನ್ ಖಾನ್ ಫ್ಯಾನ್ಸ್, ನೆಚ್ಚಿನ ನಾಯಕನ ಪರವಾಗಿ ಹೋರಾಟಕ್ಕೆ ಇಳಿದಿದ್ದಾರೆ. ಹಾಲಿ ಪಾಕ್ ಸರ್ಕಾರಕ್ಕೆ ಇದು ಭಯ ಹುಟ್ಟಿಸಿರುವುದು ಸುಳ್ಳಲ್ಲ.












Click it and Unblock the Notifications