ರಷ್ಯಾ ಆಸ್ತಿ ಉಡೀಸ್, 1,45,52,86,00,00,000 ರೂಪಾಯಿ ರಷ್ಯಾ ಆಸ್ತಿ ಉಕ್ರೇನ್ ಪಾಲು! Ukraine War

ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಮೇಲಿಂದ ಮೇಲೆ ಒಂದೊಂದು ಐಡಿಯಾ ಮಾಡುತ್ತಿವೆ, ಈ ಮೂಲಕ ಪದೇ ಪದೇ ವ್ಲಾದಿಮಿರ್ ಪುಟಿನ್ ಸೇರಿದಂತೆ ರಷ್ಯಾ ಸೇನೆಯ ಬಲ ಕುಗ್ಗಿಸಲು ಎಲ್ಲಾ ರೀತಿ ಪ್ರಯತ್ನ ನಡೆಯುತ್ತಿದೆ. ಅದರಲ್ಲೂ ಉಕ್ರೇನ್ ಬೆನ್ನಿಗೆ ನೇರವಾಗಿ ನಿಂತಿರುವ ಯುರೋಪ್ ದೇಶಗಳ ಒಕ್ಕೂಟ, ಹಣಕಾಸು & ಮಿಲಿಟರಿ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಹೀಗಾಗಿ ಉಕ್ರೇನ್ ದೇಶಕ್ಕೆ ಬಲ ಸಿಕ್ಕಿದ್ದರೂ, ರಷ್ಯಾಗೆ ಇದು ಮರಣ ಶಾಸನವಾಗುತ್ತಿದೆ. ಇಂತಹ ಸಮಯದಲ್ಲೇ ಮತ್ತೆ ಒಂದು ದೊಡ್ಡ ಆಘಾತವನ್ನು ರಷ್ಯಾಗೆ ಕೊಡಲು ಸಜ್ಜಾಗಿದೆ ಯುರೋಪ್ ಒಕ್ಕೂಟ!

ಆಧುನಿಕ ಕಾಲದಲ್ಲಿ ಯುದ್ಧ ಒಂದು ಶುರುವಾದ್ರೆ ಹೇಗಿರುತ್ತೆ? ಎಂಬುದಕ್ಕೆ ಇದೇ ಉದಾಹರಣೆ. ರಷ್ಯಾ & ಉಕ್ರೇನ್ ಇಬ್ಬರೂ ಒಬ್ಬರು ಮತ್ತೊಬ್ಬರನ್ನ ನಾಶ ಮಾಡುವ ಹಂತಕ್ಕೂ ಬಂದಿದ್ದಾರೆ. 3 ವರ್ಷಗಳ ಹಿಂದೆ ಶುರುವಾದ ರಷ್ಯಾ & ಉಕ್ರೇನ್ ಯುದ್ಧ, ಜಗತ್ತಿನ ಬೆನ್ನಿಗೆ ಚೂರಿ ಹಿರಿದಂತೆ ಕಾಣುತ್ತಿದೆ. ಯಾಕಂದ್ರೆ ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯ ಈ ಯುದ್ಧವು ಸೃಷ್ಟಿ ಮಾಡ್ತಿದೆ. ಹೀಗೆ ಪರದಾಟ ಕೂಡ ಜಾಸ್ತಿ ಆಗಿದ್ದು ಯಾವ ಕ್ಷಣದಲ್ಲಿ ಏನಾಗುತ್ತೆ? ಅನ್ನೋದೇ ಗೊತ್ತಾಗ್ತಿಲ್ಲ. ಇದೇ ಸಮಯದಲ್ಲಿ ರಷ್ಯಾ ಆಸ್ತಿಯನ್ನು ಉಕ್ರೇನ್‌ಗೆ ಒಪ್ಪಿಸಲು ಇದೀಗ ಸಜ್ಜಾಗಿವೆ ಪಾಶ್ಚಿಮಾತ್ಯ ದೇಶಗಳು.

Impact of 140 Billion Frozen Russian Funds on Ukraine and Europe

ರಷ್ಯಾಗೆ ಬಹುದೊಡ್ಡ ಆಘಾತ ಗ್ಯಾರಂಟಿ?

ಅಷ್ಟಕ್ಕೂ ರಷ್ಯಾ ಕಡೆಯಿಂದ ವಶಕ್ಕೆ ಪಡೆದಿದ್ದ ಶತ್ರು ಆಸ್ತಿಯನ್ನು ದಿಢೀರ್ ಅಂತಾ ಉಕ್ರೇನ್ ವಶಕ್ಕೆ ಒಪ್ಪಿಸಲು ಇದೀಗ ಯುರೋಪ್ ಒಕ್ಕುಟ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಮಹತ್ವದ ನಿರ್ಧಾರ ಕೈಗೊಂಡಿವೆ ಎನ್ನಲಾಗಿದೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 1,45,52,86,00,00,000 ರೂಪಾಯಿ ಆಗಲಿದ್ದು, ಈ ವಿಚಾರವಾಗಿ ರಷ್ಯಾ ಮತ್ತೊಮ್ಮೆ ದಿಢೀರ್ ರೊಚ್ಚಿಗೆದ್ದು ಇನ್ನಷ್ಟು ದಾಳಿ ನಡೆಸುವ ಭಯ ಕೂಡ ಉಕ್ರೇನ್‌ಗೆ ಕಾಡುತ್ತಿದೆ.

ಪಾಶ್ಚಿಮಾತ್ಯ ದೇಶಗಳಿಂದ ಎಚ್ಚರಿಕೆ ಸಂದೇಶ

ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಜಗತ್ತಿನಲ್ಲಿ ಹಲವು ಯುದ್ಧಗಳು ಶುರುವಾಗಿ ಪ್ರಪಂಚದ ಬುಡಕ್ಕೆ ಬಾಂಬ್ ಇಟ್ಟಂತೆ ಆಗಿದೆ. ಮುಂದೆ ಇದು ಸಮಸ್ಯೆ ತರುವುದು ಪಕ್ಕಾ, ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸುವ ಯತ್ನ ಮಾಡಿ ಸೋತು ಹೋಗಿದೆ. ಇಷ್ಟೆಲ್ಲದರ ಮಧ್ಯೆ ಈಗ ಅಮೆರಿಕ ನೀಡಿದ ವಿಶೇಷ ಅನುಮತಿ, ರಷ್ಯಾ ಪಿತ್ತ ನೆತ್ತಿಗೇರಿಸಿದೆ. ಅಲ್ಲದೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ ರಷ್ಯಾ. ಹೀಗಾಗಿ ಉಕ್ರೇನ್ ಮತ್ತಷ್ಟು ಹುಷಾರಾಗಿ ಇರಬೇಕಿದೆ ಅಂತಾ ಪಾಶ್ಚಿಮಾತ್ಯ ದೇಶಗಳು ಎಚ್ಚರಿಕೆ ಸಂದೇಶ ರವಾನಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+