ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ತಡೆಗೆ ಐಎಂಎಫ್‌ ನೆರವು

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 17: ಪಾಕಿಸ್ತಾನದಲ್ಲಿ ಕೂಡ ಕೊರೊನಾ ವೈರಸ್ ತಾಂಡವವಾಡುತ್ತಿದೆ. ಇದುವರೆಗೆ 128 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ಕೊರೊನಾ ಸೋಂಕು ತಡೆಗೆ ಅಮೆರಿಕ 94 ಲಕ್ಷ ಡಾಲರ್ ನೆರವನ್ನು ಘೋಷಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅಂದಾಜು 1.4 ಶತಕೋಟಿ ಡಾಲರ್ ನೆರವಿಗೆ ಒಪ್ಪಿಗೆ ನೀಡಿದೆ.

ಬ್ಯಾಲೆನ್ಸ್ ಪೇಮೆಂಟ್ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಐಎಂಎಫ್‌ ಬಳಿ ತುರ್ತು ಹಣಕಾಸಿನ ನೆರವು ಕೇಳಿತ್ತು. ಕಳೆದ ವರ್ಷ ಜುಲೈನಲ್ಲಿ ಪಾಕಿಸ್ತಾನ ದಿವಾಳಿಯಾಗುವುದನ್ನು ತಪ್ಪಿಸಲು ಬೇಲ್ ಔಟ್ ಘೋಷಿಸಿ ಐಎಂಎಫ್‌ ಜೊತೆ ಒಪ್ಪಂದ ಮಾಡಿಕೊಂಡಿತ್ತು.

IMF Approves Nearly 1.4 Billion Dollar To Pakistan

ಕೊರೊನಾ ಸೋಂಕು ಪಾಕಿಸ್ತಾನದ ಅರ್ಥ ವ್ಯವಸ್ಥೆಯ ಮೇಲೆ ವಿಪರೀತ ಪರಿಣಾಮ ಬೀರುತ್ತಿದ್ದು, ಈ ನೆರವು ಅದಕ್ಕೆ ಅಗತ್ಯವಾಗಿದೆ. ಪಾಕಿಸ್ತಾನದ ಆರ್ಥಿಕತೆ ಉತ್ತೇಜನ ನೀಡುವುದು ಕೂಡ ಅವಶ್ಯ. ಆದರೆ ಈಗಿರುವ ಬಾಕಿ ಪಾವತಿಸಲು ದಾನಿ ರಾಷ್ಟ್ರಗಳ ನೆರವೂ ಕೂಡ ಬೇಕಾಗಬಹುದು ಎಂದು ಐಎಂಎಫ್‌ ಹೇಳಿದೆ.

ಪಾಕಿಸ್ತಾನಕ್ಕೆ ಐಎಂಎಫ್‌ನಿಂದ 6 ಶತಕೋಟಿ ಡಾಲರ್ ಬೇಲ್ ಓಟ್ ಪ್ಯಾಕೇಜ್ ಸಿಗುವುದಿತ್ತು. ಇದಕ್ಕೆ ಹೊರತಾಗಿ 138.6 ಕೋಟಿ ರೂ ನೆರವು ಈಗ ಪಾಕಿಸ್ತಾನಕ್ಕೆ ಸಿಕ್ಕಿದೆ.

English summary
The International Monetary Fund Thursday approved, disbursement of USD1.386 billion as a financial assistance to Pakistan to meet its urgent balance of payment needs stemming from the COVID-19 outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X