Get Updates
Get notified of breaking news, exclusive insights, and must-see stories!

ಭಾರತ ದುರ್ಬಲಗೊಳಿಸಲು ಪಾಕ್ ಬಳಿ ಹೊಸ ಅಸ್ತ್ರ

ಒಂದೆಡೆ ಪಾಕಿಸ್ತಾನ ಗಡಿರೇಖೆಯಲ್ಲಿ ಗಡಿಉಲ್ಲಂಘನೆ ಮಾಡುತ್ತ ಭಾರತದ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರೆ, ಮತ್ತೊಂದೆಡೆ ನೆರೆರಾಷ್ಟ್ರದಲ್ಲಿ ಭಯೋತ್ಪಾದಕ ಸಂಘಟನೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಇದರ-ತುಲ್-ಪಾಕಿಸ್ತಾನ ಎಂಬ ಉಗ್ರ ಸಂಘಟನೆ ಬಲಿಯುತ್ತಿರುವುದು ಭಾರತಕ್ಕೆ ಒಳ್ಳೆಯ ಸುದ್ದಿಯಲ್ಲ.

ಲಷ್ಕರ್-ಎ-ತೊಯ್ಬಾ, ಅಲ್ ಖೈದಾ, ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗಳಿಗೆ ಹೋಲಿಸಿದರೆ, ಹೊಚ್ಚಹೊಸ ಸಂಘಟನೆ ಇದರ-ತುಲ್-ಪಾಕಿಸ್ತಾನ (ಐಟಿಪಿ) ಭಯೋತ್ಪಾದಕರನ್ನು ಮಾತ್ರವಲ್ಲ ಪಾಕಿಸ್ತಾನದ ಮಿಲಿಟರಿಯನ್ನೂ ಹೊಂದಿದ್ದು, ಉಳಿದವುಗಳಿಗಿಂತ ಮಾರಕವಾಗಿದೆ.

ಭಾರತದ ವಿರುದ್ಧ ಯುದ್ಧವನ್ನು ಗೆಲ್ಲುವುದಿರಲಿ, ಕೆಚ್ಚೆದೆಯಿಂದ ಹೋರಾಟ ನಡೆಸಲೂ ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಪುಕ್ಕಲು ಪಾಕಿಸ್ತಾನ, ಈ ಐಟಿಪಿ ಅಥವಾ ಇನ್‌ಸ್ಟಿಟ್ಯೂಷನ್ ಆಫ್ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಯನ್ನು ತಾನೇ ನೀರು ಎರೆದು ಸಜ್ಜುಗೊಳಿಸುತ್ತಿದೆ.

Idara-Tul-Pakistan latest threat to India

ಭಾರತದ ವಿರುದ್ಧದ ದಾಳಿಗಾಗಿ ಐಟಿಪಿ ಹುಟ್ಟು

ಪಾಕಿಸ್ತಾನಿ ವಾಯುಸೇನೆಯ ಮಾಜಿ ಅಧಿಕಾರಿ ಅದ್ನನ್ ರಶೀದ್ ನಾಯಕತ್ವದ ಐಟಿಪಿ ಸಂಘಟನೆಯನ್ನು, ಪಾಕಿಸ್ತಾನದ ಉಗ್ರಶಕ್ತಿ ಮತ್ತು ಮೂರು ಸೇನಾಪಡೆಗಳನ್ನು ಒಗ್ಗೂಡಿಸಿ, ಭಾರತದ ವಿರುದ್ಧ ಯುದ್ಧ ಸಾರಲು ಹುಟ್ಟುಹಾಕಲಾಗಿದೆ. ಭಾರತದ ಗಡಿಯಲ್ಲಿ ಇದ್ದಕ್ಕಿದ್ದಂತೆ ಉಗ್ರ ಚಟುವಟಿಕೆಗಳು ಹೆಚ್ಚಿರುವುದು ಐಟಿಪಿಯ ಹುನ್ನಾರವನ್ನು ಬಹಿರಂಗಪಡಿಸಿದೆ.

ಅಲ್ ಖೈದಾದ ಮ್ಯಾಗಜಿನ್ ಅಝಾನ್ ನಲ್ಲಿ ಕಾಶ್ಮೀರವನ್ನು ಮುಂದಿಟ್ಟುಕೊಂಡು ಅದ್ನನ್ ರಶೀದ್ ನೀಡಿರುವ ಹೇಳಿಕೆ, ಪಾಕಿಸ್ತಾನದ ಸೇನೆ ಐಟಿಪಿ ಸಂಘಟನೆಯನ್ನು ಭಾರತದ ಮೇಲೆ ಯುದ್ಧ ಸಾರಲು ಅಧಿಕೃತವಾಗಿ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಪುರಾವೆ ನೀಡಿದೆ. ಭಾರತವನ್ನು ದುರ್ಬಲಗೊಳಿಸಲು ಪಾಕಿಸ್ತಾನ ಎಲ್ಲ ರೀತಿಯ ತಂತ್ರಗಳನ್ನು ರೂಪಿಸುತ್ತಿದೆ. ಐಟಿಪಿ ಪಾಕಿಸ್ತಾನ ಕಂಡುಕೊಂಡಿರುವ ಹೊಸ ಅಸ್ತ್ರ ಎಂದು ಜಾಗೃತ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಶೀದ್ ಹೇಳಿದ್ದೇನೆಂದರೆ, ಈ ಯುದ್ಧಕ್ಕಾಗಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಜಿಹಾದಿಗಳನ್ನು ಬಳಸಿಕೊಳ್ಳಲಾಗುವುದು. ಈ ಜಿಹಾದಿಗಳನ್ನು ಪಾಕಿಸ್ತಾನದ ಸೇನೆಯೊಳಗೆ ಸೇರಿಸಿ ಅವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗುತ್ತಿದೆ. [ಹಿಂದೂಗಳನ್ನು ಪಾಕಿಸ್ತಾನಕ್ಕೆ ಕರೆತರುತ್ತೇನೆ]

ಸಮವಸ್ತ್ರವಿಲ್ಲದ ಸೇನಾಪಡೆ

ಪಾಕಿಸ್ತಾನಿ ಸೇನಾಪಡೆ ಮತ್ತು ಜಿಹಾದಿ ಪಡೆ ನಡುವೆ ಹೆಚ್ಚೇನೂ ವ್ಯತ್ಯಾಸವಿಲ್ಲ. ಪಾಕಿಸ್ತಾನಿ ಸೇನಾಪಡೆ ಸಮವಸ್ತ್ರ ಧರಿಸಿ ಕಾರ್ಯಾಚರಣೆ ನಡೆಸಿದರೆ, ಜಿಹಾದಿ ಪಡೆ ಸಮವಸ್ತ್ರ ಧರಿಸದೆ ಕಾರ್ಯಾಚರಣೆ ನಡೆಸುತ್ತಿದೆ. ಪಾಕಿಸ್ತಾನಿ ಸೇನೆಯಲ್ಲಿಯೇ ಇಂಥ ಸಮವಸ್ತ್ರವಿಲ್ಲದೆ ಕಾರ್ಯಾಚರಣೆ ನಡೆಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ, ಭಾರತದಲ್ಲಿ ಉಗ್ರ ಸಂಘಟನೆಯ ಖಾತೆ ತೆರೆಯುವುದಾಗಿ ಹೇಳಿ ಆಯಮನ್-ಅಲ್-ಜವಾಹಿರಿ ಬಿಡುಗಡೆ ಮಾಡಿದ ವಿಡಿಯೋಗೂ ಐಟಿಪಿ ಹುಟ್ಟಿಕೊಂಡಿರುವುದಕ್ಕೂ ನೇರ ಸಂಬಂಧವಿದೆ ಎಂದು ಇದನ್ನೆಲ್ಲ ಅಧ್ಯಯನ ಮಾಡುತ್ತಿರುವ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

ಐಟಿಪಿ ಸಂಘಟನೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಾಲಿಬಾನ್ ಉಗ್ರರನ್ನು ಐಎಸ್ಐ ಸೇರಿಸಿಕೊಂಡಿದೆ. ತಾಲಿಬಾನ್ ಉಗ್ರರಿಗೆ ತರಬೇತಿ ನೀಡುತ್ತಿರುವ ರಶೀದ್ ಹೇಳಿಕೆಯಲ್ಲಿ ಇದು ಸ್ಪಷ್ಟವಾಗಿದೆ. ಅಲ್ಲದೆ, ನಂಬಿಗಸ್ತ ಉಗ್ರ ಸಂಘಟನೆಯಾದ ಲಷ್ಕರ್ ಉಗ್ರ ಅನ್ನು ಕೂಡ ಇದರ್-ತುಲ್-ಪಾಕಿಸ್ತಾನ್‌ನ ಭಾಗವಾಗಬೇಕೆಂದು ಐಎಸ್ಐ ಕೇಳಿಕೊಂಡಿದೆ. ಜೊತೆಗೆ, ಅಲ್ ಖೈದಾ ಮತ್ತು ಸಿಮಿ ಸಂಘಟನೆಗಳು ಸೇರಿಕೊಂಡು ಭಾರತದ ಮೇಲೆ ದಾಳಿ ನಡೆಸಬೇಕೆಂದು ಕೂಡ ಹುನ್ನಾರ ನಡೆಸಲಾಗುತ್ತಿದೆ.

ಪಾಕಿಸ್ತಾನದ ನಾಟಕ ಬಯಲು

ಪಾಕಿಸ್ತಾನ ತಾನೇ ಉಗ್ರರಿಂದ ಸಂಕಷ್ಟಕೊಳಗಾಗುತ್ತಿದೆ, ತನಗೂ ಈ ಉಗ್ರ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂಬುದು ಸಾಬೀತಾಗಿದೆ. ಈ ನುಸುಳುವಿಕೆ, ದಾಳಿಗಳ ಹಿಂದೆ ಐಎಸ್ಐ ಕೈವಾಡವಿದೆ ಎಂದು ಕೂಡ ರಶೀದ್ ಹೇಳಿಕೆಯಿಂದ ಸಾಬೀತಾಗಿದೆ. ಐಎಸ್ಐಗೆ ಇದರಿಂದ ಭಾರೀ ಲಾಭವಿದೆ. ದಾಳಿ ನಡೆಸುತ್ತಿರುವುದು ಉಗ್ರರು ಎಂದು ಹೇಳಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ.

ಈ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿರುವ ಭಾರತದ ಜಾಗೃತ ದಳ, ಇನ್ನಷ್ಟು ಎಚ್ಚರದಿಂದ ಗಡಿ ಕಾಯಬೇಕಾಗಿದೆ ಎಂದು ಕಟ್ಟೆಚ್ಚರ ನೀಡಿದೆ. ಭಾರತದ ಪ್ರಮುಖ ಸ್ಥಳಗಳ ಮೇಲೆ ಯಾವುದೇ ಸಮಯದಲ್ಲಿ ಭಾರೀ ದಾಳಿಯಾಗಬಹುದು, ಭಾರತೀಯ ಸೇನೆ ಯಾವುದಕ್ಕೂ ಸಜ್ಜಾಗಿರಬೇಕು ಎಂದು ಕೂಡ ಸೂಚನೆ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+