ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು 'ಹಿಜ್ಬುಲ್' ಯೋಜನೆ ಸಿದ್ಧ?

ಭಾರತದಲ್ಲಿ ಶೀಘ್ರದಲ್ಲೇ ದಾಳಿ ನಡೆಸಲು ಸಿದ್ಧತೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥನ ಹೇಳಿಕೆ. ಪಾಕಿಸ್ತಾನ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಸಯ್ಯದ್ ಸಲಾಹುದ್ದೀನ್.

ಇಸ್ಲಾಮಾಬಾದ್, ಜೂನ್ 3: ಇತ್ತೀಚೆಗಷ್ಟೇ, ಅಮೆರಿಕ ಸರ್ಕಾರದಿಂದ ಜಾಗತಿಕ ಉಗ್ರನೆಂಬ ಪಟ್ಟ ಕಟ್ಟಿಸಿಕೊಂಡ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾವುದ್ದೀನ್, ತಾನು ಭಾರತದಲ್ಲಿ ಶೀಘ್ರವೇ ಭಾರೀ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಭಾನುವಾರ (ಜುಲೈ 2), ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಆತ, ಈ ಹಿಂದೆಯೂ ಭಾರತದಲ್ಲಿ ನಡೆದಿರುವ ಹಲವಾರು ಬುಡಮೇಲು ಕೃತ್ಯಗಳಲ್ಲಿ ತನ್ನ ಕೈವಾಡ ಇದ್ದಿದ್ದಾಗಿ ಹೇಳಿಕೊಂಡಿದ್ದಾನೆ.

Hizbul Mujahideen chief Salahuddin admits to carrying out attacks in India

ಈಗಾಗಲೇ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಉಗ್ರರಿಗೆ ಸೂಕ್ತವಾದ ತರಬೇತಿ ನೀಡಲಾಗಿದೆ. ಆದರೆ, ಅವುಗಳನ್ನು ಯಾವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ನಡೆಸಬೇಕೆಂಬುದನ್ನು ಶೀಘ್ರದಲ್ಲೇ ತೀರ್ಮಾನಿಸಲಾಗುವುದು. ಏಕೆಂದರೆ, ಭಾರತದಲ್ಲಿ ನಮ್ಮ ಕಾರ್ಯತಂತ್ರಗಳನ್ನು ಸೂಕ್ತವಾದ ರೀತಿಯಲ್ಲಿ ನಡೆಸಿಕೊಡುವ ವ್ಯಕ್ತಿಗಳ ಹುಡುಕಾಟದಲ್ಲಿ ನಾವು ನಿರತರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+