ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಸಿಎಸ್‌ಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಹಿಂದೂ ಮಹಿಳೆ

|
Google Oneindia Kannada News

ಇಸ್ಲಾಮಾಬಾದ್, ಮೇ 08: ಪಾಕಿಸ್ತಾನದ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ ಪರೀಕ್ಷೆಯಲ್ಲಿ ಹಿಂದೂ ಮಹಿಳೆಯೊಬ್ಬರು ಉತ್ತೀರ್ಣರಾಗುವ ಮೂಲಕ ಪಾಕಿಸ್ತಾನದ ಆಡಳಿತ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ಲಿಖಿತ ಪರೀಕ್ಷೆಗೆ ಹಾಜರಾಗಿದ್ದ 18,553 ಮಂದಿ ಪೈಕಿ ಸಿಎಸ್‌ಎಸ್‌ ಪರೀಕ್ಷೆಯಲ್ಲಿ 221 ಮಂದಿ ತೇರ್ಗಡೆಯಾಗಿದ್ದರು ಅದರಲ್ಲಿ ಸನಾ ಕೂಡ ಒಬ್ಬರು.ಸಿಎಸ್‌ಎಸ್‌ ಪರೀಕ್ಷೆ ಉತ್ತೀರ್ಣರಾಗಿರುವ ವೈದ್ಯೆ ಸನಾ ರಾಮಚಂದ್ ಪಾಕಿಸ್ತಾನದಲ್ಲಿ ಈ ಸಾಧನೆ ಮಾಡಿದ ಮೊದಲ ಹಿಂದೂ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕೋವಿಡ್ ಹೆಚ್ಚಳ: ಜೆಇಇ ಮೇನ್ ಪರೀಕ್ಷೆ ಮುಂದೂಡಿಕೆ ಕೋವಿಡ್ ಹೆಚ್ಚಳ: ಜೆಇಇ ಮೇನ್ ಪರೀಕ್ಷೆ ಮುಂದೂಡಿಕೆ

ಫಲಿತಾಂಶದ ಬಳಿಕ ಸನಾ ರಾಮಚಂದ್ ಅವರು ಟ್ವಿಟ್ಟರ್‌ನಲ್ಲಿ ವಾಹೇಗುರು ಜಿ ಕಾ ಖಲ್ಸಾ ವಾಹೇಗುರು ಜಿ ಕಿ ಫತೇಹ್ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಸರ್ವಶಕ್ತನಾದ ಅಲ್ಲಾಹನ ಕೃಪಡೆಯಿಂದ ನಾನು ಸಿಎಸ್ಎಸ್ ಪಾಸ್ ಪಾಡಿದ್ದೇನೆ. ಪಿಎಎಸ್ ಹುದ್ದೆಗೆ ನೇಮಕಗೊಂಡಿದ್ದೇನೆ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.

Hindu Woman In Pakistan Cracks Prestigious Central Superior Services Examination

ಸನಾ ಅತಿ ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಸಿಂಧ್ ಪ್ರಾಂತ್ಯದ ಶಿಕಾರ್‌ಪುರ ಜಿಲ್ಲೆಯ ಗ್ರಾಮೀಣ ಭಾಗದವರಾಗಿದ್ದಾರೆ. ವಿಸ್ತಾರವಾದ ವೈದ್ಯಕೀಯ, ಮಾನಸಿಕ ಮತ್ತು ಮೌಖಿಕ ಪರೀಕ್ಷೆಗಳ ನಂತರ ಅಂತಿಮವಾಗಿ ಆಯ್ಕೆಯಾಗಿದ್ದಾರೆ.

ಸನಾ ರಾಮಚಂದ್ ಎಂಬಿಬಿಎಸ್ ವೈದ್ಯರಾಗಿದ್ದಾರೆ, ಒಟ್ಟು 79 ಮಹಿಳೆಯರು ಅಂತಿಮ ಪಟ್ಟಿಯಲ್ಲಿದ್ದರು.

English summary
In a first, a Hindu woman in Pakistan has cleared the country's prestigious Central Superior Services (CSS) examination and has been selected for the elite Pakistan Administrative Services (PAS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X