Ebrahim Raisi: ಇರಾನ್ ಅಧ್ಯಕ್ಷ ಇಬ್ರಹಾಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ರಕ್ಷಣಾ ಪಡೆ ಹೆಲಿಕಾಪ್ಟರ್ ಇರುವ ಜಾಗವನ್ನು ತಲುಪಲು ಹರಸಾಹಸ ಪಡುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಹೆಲಿಕಾಪ್ಟರ್‌ಗೆ ಏನಾಯಿತು ಮತ್ತು ಅದರಲ್ಲಿ ಯಾರು ಇದ್ದರು ಎಂಬುದರ ಕುರಿತು ತಕ್ಷಣ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಹಲವು ಮಾಧ್ಯಮ ಏಜೆನ್ಸಿಗಳು ಹಲವು ಬಗೆಯ ವರದಿ ನೀಡಿದ್ದು, ಇಬ್ರಹಾಂ ರೈಸಿ ಸುರಕ್ಷತೆ ಕುರಿತು ಮಾಹಿತಿ ಲಭ್ಯವಾಗಿಲ್ಲ.

Helicopter in Iranian President Ebrahim Raisi Convoy Involved in Accident

ಇಬ್ರಹಾಂ ರೈಸಿ ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ "ಹಾರ್ಡ್ ಲ್ಯಾಂಡಿಂಗ್" ಮಾಡಿದೆ ಎಂದು ಮೊದಲು ವರದಿ ಮಾಡಲಾಗಿತ್ತು, ಆದರೆ ಸುದ್ದಿ ಸಂಸ್ಥೆ ಐಆರ್ ಎನ್ಎ ಈಗ ಹೆಲಿಕಾಪ್ಟರ್ "ಅಪಘಾತಕ್ಕೆ ಒಳಗಾಗಿದೆ, ಸಂಭಾವ್ಯ ಗಾಯಗಳು ಅಥವಾ ಹಾನಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಿಲ್ಲ" ಎಂದು ವರದಿ ಮಾಡಿದೆ.

ಹೊಸ ರಕ್ಷಣಾ ತಂಡಗಳು ಮತ್ತು ಕೆಲವು ಪರ್ವತಾರೋಹಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಪಘಾತ ನಡೆದ ಸ್ಥಳದಲ್ಲಿ ಶೀಥ ಹೆಚ್ಚಾಗಿದ್ದು, ಕಳಪೆ ಹವಾಮಾನದ ಕಾರಣ, ವಾಯು ಶೋಧ ಮತ್ತು ಹೆಲಿಕಾಪ್ಟರ್ ಹಾರಾಟ ಸಾಧ್ಯವಿಲ್ಲದ ಕಾರಣ, ರಸ್ತೆಯ ಮೂಲಕವೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಪ್ರದೇಶದಲ್ಲಿ ದಟ್ಟವಾದ ಮಂಜಿನ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಪ್ರೆಸ್ ಟಿವಿ ಪ್ರಕಾರ, ಟೆಹ್ರಾನ್‌ನಿಂದ ಸುಮಾರು 600 ಕಿಮೀ ದೂರದ ಪೂರ್ವ ಅಜರ್‌ಬೈಜಾನ್‌ನ ಜೋಲ್ಫಾದಲ್ಲಿ ಅಧ್ಯಕ್ಷರನ್ನು ಹೊತ್ತ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದೆ ಎಂದು ಇರಾನ್‌ನ ಆಂತರಿಕ ಸಚಿವ ಅಹ್ಮದ್ ವಾಹಿದಿ ದೃಢಪಡಿಸಿದ್ದಾರೆ.

ಈ ಬೆಂಗಾವಲು ಪಡೆಯಲ್ಲಿ ಮೂರು ಹೆಲಿಕಾಪ್ಟರ್‌ಗಳಿದ್ದು, ಅವುಗಳಲ್ಲಿ ಇಬ್ಬರು ಸಚಿವರು ಮತ್ತು ಅಧಿಕಾರಿಗಳನ್ನು ಹೊತ್ತೊಯ್ದು ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪಿದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+