'ಭಾರತದಲ್ಲಿ ಯಾವುದೇ ಸಮಯದಲ್ಲಿ ದಾಳಿ ಮಾಡಬಲ್ಲೆವು'
ನವದೆಹಲಿ, ಜುಲೈ 03 : ಭಾರತದ ಯಾವುದೇ ಭಾಗದ ಮೇಲೆ ಬೇಕಾದರೂ ದಾಳಿ ಮಾಡಬಲ್ಲೆವು ಎಂದು ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾಹುದ್ದೀನ್ ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾನೆಂದು ವರದಿಯಾಗಿದೆ.
ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದಾಗಿ ಹೇಳಿಕೊಂಡಿರುವ ಜಾಗತಿಕ ಉಗ್ರ, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖಂಡ ಸಲಾವುದ್ದೀನ್, ಭಾರತದಲ್ಲಿ ಯಾವಾಗ ಬೇಕಾದರೂ ದಾಳಿ ನಡೆಸಬಲ್ಲೆವು ಎಂದು ಬೆದರಿಕೆ ಹಾಕಿದ್ದಾನೆ.

ಅಮೆರಿಕ ಈಚೆಗಷ್ಟೇ ಘೋಷಿಸಿರುವ ಜಾಗತಿಕ ಉಗ್ರ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ನಾಯಕ ಸಯದ್ ಸನಾವುಲ್ಲಾ, ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪಾಕಿಸ್ತಾನ ಸುದ್ದಿ ವಾಹಿನಿ ವರದಿ ಮಾಡಿವೆ ಎಂದು ಎಎನ್ ಐ ಟ್ವೀಟ್ ಮಾಡಿದೆ.
Hizb-ul-Mujahideen chief Syed Salahuddin admits on a Pakistan TV channel to carrying out terror attacks in India (file pic) pic.twitter.com/YHLuX5WyBq
— ANI (@ANI_news) July 3, 2017
ಕಾಶ್ಮೀರ ಕಣಿವೆಯನ್ನು ಭಾರತೀಯ ಭದ್ರತಾ ಪಡೆಯ ಸ್ಮಶಾನವನ್ನಾಗಿಸುತ್ತೇವೆ ಎಂದು ಸಲಾವುದ್ದೀನ್ ಕಳೆದ ವರ್ಷ ಬೆದರಿಕೆ ಹಾಕಿದ್ದ.
#Salahuddin admits carrying out terror attacks in India, boasts he can 'attack anytime'
— ANI Digital (@ani_digital) July 3, 2017
Read @ANI_news story -> https://t.co/zfTDfYQxIT pic.twitter.com/huTGuEezah












Click it and Unblock the Notifications