Israel Attacks: ಲ್ಯಾಬ್ರಡಾರ್ ಕೊಂದ ವ್ಯಕ್ತಿ- ಭಯಾನಕ ವೀಡಿಯೊ ವೈರಲ್

ಕಳೆದ ಹಲವು ದಿನಗಳಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಘರ್ಷ ನಡೆಯುತ್ತಿದೆ. ಈ ಘರ್ಷಣೆಯಲ್ಲಿ ಇದುವರೆಗೆ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಯದಲ್ಲಿ ಭಯಾನಕ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬರು ನಾಯಿಯ ಮೇಲೆ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಲ್ಯಾಬ್ರಡಾರ್ ಮುಂಭಾಗದಲ್ಲಿ ಓಡಿ ಹೋಗುತ್ತಿದೆ. ಅದನ್ನು ಹಿಂಬಾಲಿಸುತ್ತಿರುವ ವ್ಯಕ್ತಿ ಗುಂಡು ಹಾರಿಸಿರುವುದನ್ನು ಕಾಣಬಹುದು. ಶೀರ್ಷಿಕೆಯಲ್ಲಿ ಹೀಗೆ ಬರೆಯಲಾಗಿದೆ- 'ಆ ಬಡ ಮತ್ತು ಸುಂದರ ಲ್ಯಾಬ್ರಡಾರ್ ಯಾರಿಗೆ ಏನು ಮಾಡಿದೆ ಹೇಳಿ? ಲ್ಯಾಬ್ರಡಾರ್ ಯಾವುದೇ ಪ್ಯಾಲೆಸ್ಟೀನಿಯಾದ ಮೇಲೆ ದಾಳಿ ನಡೆಸಿದಿಯೇ?' ಎಂದು ಪ್ರಶ್ನೆ ಮಾಡಲಾಗಿದೆ.

Hamas attacks on Israel: Man Killed Labrador - Horrifying Video Goes Viral

ವೀಡಿಯೋ ಸಾಕಷ್ಟು ಹೃದಯ ವಿದ್ರಾವಕವಾಗಿದ್ದು, ಸ್ವಲ್ಪ ಸಮಯದಲ್ಲೇ ನಾಯಿಯನ್ನು ಕೊಲ್ಲಲಾಗಿದೆ. ವೀಡಿಯೋ ನೋಡಿದ ನಂತರ ಜನರ ಮನಸ್ಸಿನಲ್ಲಿ ಒಂದೇ ಒಂದು ಪ್ರಶ್ನೆ ಏಳುತ್ತಿದೆ. ಈ ಪ್ರಾಣಿಗಳು ಯಾರಿಗೆ ಏನು ಹಾನಿ ಮಾಡಿದೆ? ಅಷ್ಟಕ್ಕೂ ಮೂಕಪ್ರಾಣಿಗಳು ಇದಕ್ಕೆ ಏಕೆ ನರಳಬೇಕು? ಜನರು ಪ್ರಾಣಿಗಳನ್ನು ಏಕೆ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ? ಎಂದು ಪ್ರಶ್ನೆ ಮಾಡಲಾಗುತ್ತಿದೆ. ಈ ವೀಡಿಯೋ ಜನರಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಕಳೆದ ಶನಿವಾರ ಮುಂಜಾನೆ ಹಮಾಸ್ ಉಗ್ರರು ನಡೆಸಿದ ಅಚ್ಚರಿಯ ದಾಳಿಯಿಂದ ಇಸ್ರೇಲ್ ಇರುವರೆಗೆ 700ಕ್ಕೂ ಹೆಚ್ಚು ನಾಗರಿಕರು ಹಾಗೂ ಯೋಧರನ್ನು ಕಳೆದುಕೊಂಡಿದೆ. ಮೃತರಲ್ಲಿ ವಿದೇಶಿಗರು ಕೂಡ ಸಾವನ್ನಪ್ಪಿದ್ದಾರೆ. ಸುಮಾರು 2300 ಮಂದಿ ಗಾಯಗೊಂಡಿದ್ದಾರೆ.

ಹಮಾಸ್ ವಿರುದ್ಧದ ಪ್ರತೀಕಾರದ ಭಾಗವಾಗಿ ಇಸ್ರೇಲ್ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ. 1973 ರ ಯೋಮ್ ಕಿಪ್ಪೂರ್ ಯುದ್ಧದ ನಂತರ ಇಸ್ರೇಲ್ 400,000 ಸೈನಿಕರನ್ನು ಕರೆಸಿಕೊಂಡಿದ್ದು ಇದು ಅತಿದೊಡ್ಡ ಸೇನಾ ಸಜ್ಜುಗೊಳಿಸುವಿಕೆಯಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇಸ್ರೇಲ್ ಪ್ರತಿ ದಾಳಿಯನ್ನು ಮುಂದುವರೆಸಿದೆ. ಇಸ್ರೇಲ್ ಮಂಗಳವಾರ ಡೌನ್‌ಟೌನ್ ಗಾಜಾ ಸಿಟಿಯ ಮೇಲೆ ಸರಣಿ ಬಾಂಬ್ ದಾಳಿ ಮಾಡಿದೆ. ಇಸ್ರೇಲ್‌ನ ಪಡೆಗಳು ದಾಳಿ ಬಳಿಕ ತನ್ನ ದಕ್ಷಿಣ ಮತ್ತು ಗಡಿಯ ಮೇಲೆ ನಿಯಂತ್ರಣವನ್ನು ಮರಳಿ ಪಡೆದಿರುವುದಾಗಿ ಹೇಳಿಕೊಂಡಿವೆ. ಇಸ್ರೇಲ್ ಸೇನೆಯು ದಾಳಿ ಬಳಿಕ ಪ್ರದೇಶದಲ್ಲಿ 1,500 ಹಮಾಸ್ ಭಯೋತ್ಪಾದಕರ ಶವಗಳನ್ನು ಪತ್ತೆ ಮಾಡಿದೆ ಎಂದು ಹೇಳಿಕೊಂಡಿದೆ. ಸುಮಾರು 360,000 ಸೇನೆಯನ್ನು ಗಡಿ ಕಾಯಲು ಸಜ್ಜುಗೊಳಿಸಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳಲ್ಲಿನ ವರದಿಗಳು ಹೇಳಿವೆ.

ಇಸ್ರೇಲಿ ಸೇನೆಯು ಗಾಜಾ ನಗರದ ರಿಮಲ್ ನೆರೆಹೊರೆಯ ಜನನಿಬಿಡ ಪ್ರದೇಶದಲ್ಲಿ ಹಲವಾರು ಬಾರಿ ವೈಮಾನಿಕ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಈ ಉನ್ನತ ಮಟ್ಟದ ಜಿಲ್ಲೆಯು ಹಮಾಸ್, ವಿಶ್ವವಿದ್ಯಾನಿಲಯಗಳು, ಮಾಧ್ಯಮ ಸಂಸ್ಥೆಗಳು ಮತ್ತು ಮಾನವೀಯ ನೆರವು ಸಂಸ್ಥೆಗಳ ಪ್ರಧಾನ ಕಛೇರಿಯಿಂದ ನಿಯಂತ್ರಿಸಲ್ಪಡುವ ಸರ್ಕಾರಿ ಸಚಿವಾಲಯಗಳನ್ನು ಹೊಂದಿದೆ.

ಹಮಾಸ್ ಉಗ್ರರ ಭೀಕರ ದಾಳಿಗೆ ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಲಿಲ್ಲ. ಆದರೆ ಮುಗಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಮಾಸ್ ಉಗ್ರರ ವಿರುದ್ಧ ವಾಗ್ದಾಳಿ ನಡೆಸಿದ ನೆತನ್ಯಾಹು, ಈ ಹೇಯ ಕೃತ್ಯಕ್ಕೆ ಅವರು ತಕ್ಕ ಬೆಲೆ ತೆರಬೇಕಾಗಲಿದೆ ಮತ್ತು ಇದನ್ನು ಅವರು ಸುದೀರ್ಘ ಕಾಲ ನೆನಪಿಟ್ಟುಕೊಳ್ಳಬೇಕಾಗಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+