ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್1 ಬಿ ಪ್ರೀಮಿಯಂ ವೀಸಾ ವಿತರಣೆ ತಾತ್ಕಾಲಿಕ ತಡೆ

By Mahesh
|
Google Oneindia Kannada News

ವಾಷಿಂಗ್ಟನ್, ಮಾರ್ಚ್ 21: ಎಚ್1ಬಿ ವೀಸಾಕ್ಕೆ ಅರ್ಜಿ ಸಲ್ಲಿಸುವ ಅವಧಿ ಏಪ್ರಿಲ್ 02ರಿಂದ ಆರಂಭವಾಗಲಿದೆ. ಎಚ್1-ಬಿ ವೀಸಾಗಳ ನೀಡಿಕೆ ವಿಧಾನ ಕಠಿಣವಾಗಲಿದ್ದು, ಭಾರತದ ಐಟಿ ಕ್ಷೇತ್ರಕ್ಕೆ ಆಘಾತಕಾರಿಯಾಗಿದೆ. ಆದರೆ, ಸದ್ಯಕ್ಕೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ.

ಯುಎಸ್ ಸಿಟಜನ್ ಶಿಪ್ ಅಂಡ್ ಇಮಿಗ್ರೇಷನ್ ಸರ್ವೀಸಸ್ (ಯುಎಸ್ ಸಿಐಎಸ್) ಎಲ್ಲಾ ಬಗೆಯ ಎಚ್ 1 ಬಿ ವೀಸಾ ಪ್ರೀಮಿಯಂ ಪ್ರೊಸೆಸಿಂಗ್ ತಡೆಗಟ್ಟಲಾಗಿದ್ದು, 2019ರ ವಾರ್ಷಿಕ ಮಿತಿ ಅರ್ಜಿಗಳ ಪರಿಶೀಲನೆ ಅಕ್ಟೋಬರ್ 01, 2018ರ ನಂತರ ನಡೆಯುವ ಸಾಧ್ಯತೆಯಿದೆ.

ಅಮೆರಿಕದಲ್ಲಿ ನುರಿತ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವ ಸ್ಥಳಗಳಲ್ಲಿ ಭಾರತ ಸೇರಿದಂತೆ ವಿದೇಶಗಳ ನಿಪುಣ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಕಂಪನಿಗಳಿಗೆ ಹೊಸ ನೀತಿಯಿಂದ ಭಾರಿ ಹೊಡೆತ ಬೀಳಲಿದೆ.

H-1B application process to begin from April 2; premium processing suspended

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಎಚ್-1ಬಿ ವೀಸಾ ಸಂಖ್ಯೆಗಳ ಮೇಲೆ ನಿಯಂತ್ರಣ ಹೇರಿ, ಸಾಕಷ್ಟು ಬದಲಾವಣೆಯನ್ನು ತಂದಿದ್ದಾರೆ. 'ಕೌಶಲ್ಯ ಆಧಾರಿತ ವಲಸೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಲಾಗಿದೆ. ಅಭ್ಯರ್ಥಿಗಳು ಒಳ್ಳೆ ಕೌಶಲ್ಯದ ಜತೆಗೆ ಒಳ್ಳೆ ಟ್ರ್ಯಾಕ್ ರೆಕಾರ್ಡ್ ಇದ್ದರೆ ಮಾತ್ರ ಯುಎಸ್ ಪ್ರವೇಶಿಸಲು ಸಾಧ್ಯ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಕ್ಟೋಬರ್ 1, 2016ರಿಂದ ಜೂನ್ 30, 2017ರ ಅವಧಿಯಲ್ಲಿ 2.47 ಲಕ್ಷ ಭಾರತೀಯರು ಅರ್ಜಿಗಳನ್ನು ಸಲ್ಲಿಸಿದ್ದರು. ಇನ್ನು 2015-16ಕ್ಕೆ ಹೋಲಿಸಿದರೆ ಅರ್ಜಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ಅವಧಿಯಲ್ಲಿ 3 ಲಕ್ಷ ಜನ ಎಚ್-1ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದರು.

English summary
Petitions for H1-B visas, popular among Indian IT professionals, will be accepted from April 2, a federal agency announced on Tuesday.The US Citizenship and Immigration Services (USCIS) also announced the suspension of premium processing of all H-1B petitions which are subject to the annual caps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X