ಗಾಜಾ ಪಟ್ಟಿಯಲ್ಲಿ ಮುಂದುವರಿದ ನರಳಾಟ.. ‘ಶಾಂತಿ’ ನಿರ್ಮಾಣ ಯಾವಾಗ?
ಅಯ್ಯಯ್ಯೋ.. ಯುದ್ಧ ಮತ್ತಷ್ಟು ಹೆಚ್ಚಾಗುತ್ತಿದೆ.. ಹಿಂಸಾಚಾರದ ಬೆಂಕಿಯಲ್ಲಿ ಈಗಾಗಲೇ 40 ಸಾವಿರಕ್ಕೂ ಹೆಚ್ಚು ಜನರು ಜೀವ ಬಿಟ್ಟಿದ್ದಾರೆ. ನೋಡ ನೋಡುತ್ತಲೇ ಲೆಕ್ಕವಿಲ್ಲದಷ್ಟು ಮಕ್ಕಳು ಊಟ & ನೀರು ಇಲ್ಲದೆ ಸಾವನ್ನಪ್ಪಿವೆ. ಈ ರಣಭೀಕರ ದೃಶ್ಯ ಯಾವುದೋ ಸಿನಿಮಾ ಸೀನ್ ಅಲ್ಲ, ಆದರೆ ಇಂತಹ ಭೀಕರ ದೃಶ್ಯಗಳು ನಿಜವಾಗಿಯೂ ಕಂಡು ಬಂದಿದ್ದು ಗಾಜಾ ಎಂಬ ಪ್ರದೇಶದಲ್ಲಿ. ಇಸ್ರೇಲ್ & ಹಮಾಸ್ ನಡುವಿನ ತಿಕ್ಕಾಟದಲ್ಲಿ ಗಾಜಾ ಪಟ್ಟಿ ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದಿದೆ.
ಹಮಾಸ್ ತಮ್ಮ ಮೇಲೆ ದಾಳಿ ಮಾಡಿತ್ತು ಎಂಬ ಕಾರಣಕ್ಕೆ, ಇಸ್ರೇಲ್ ಕೂಡ ಮರು ದಾಳಿ ಆರಂಭ ಮಾಡಿತ್ತು. ಹೀಗೆ ಇಬ್ಬರ ಕಿತ್ತಾಟ ಶುರುವಾಗಿ ಬರೋಬ್ಬರಿ 10 ತಿಂಗಳು ಕಳೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 11ನೇ ತಿಂಗಳು ಕೂಡ ಮುಗಿಯಲಿದೆ. ಹೀಗಿದ್ದರೂ ಇಬ್ಬರ ಮಧ್ಯೆ ಆರಂಭ ಆದ ಹಿಂಸಾಚಾರ ಇನ್ನೂ ನಿಂತಿಲ್ಲ, ಇದಕ್ಕಿಂತಲೂ ಹೆಚ್ಚಾಗಿ ಸಾವಿನ ಸಂಖ್ಯೆ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯೂ ಆಗುತ್ತಿದೆ. ಮತ್ತೊಂದು ಕಡೆ ಕೆಲವು ದಿನಗಳಿಂದ ಅಮೆರಿಕದ ನಾಯಕರು ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಆರಂಭಿಸಿದ್ದಾರೆ. ಹಾಗಾದರೆ ಇದು ವರ್ಕೌಟ್ ಆಗುತ್ತಾ? ಅಮೆರಿಕದ ಮಾತು ಕೇಳುತ್ತಾ ಇಸ್ರೇಲ್ & ಹಮಾಸ್?

ಯುದ್ಧ ನಿಲ್ಲಿಸುವುದು ಕಷ್ಟ ಕಷ್ಟ?
ಇಸ್ರೇಲ್ ರೊಚ್ಚಿಗೆದ್ದು ದಾಳಿ ಮಾಡುತ್ತಿರುವ ರೀತಿ ನೋಡಿದರೆ ಪರಿಸ್ಥಿತಿ ಕೈಮೀರಿದೆ. ಇದೇ ರೀತಿಯಾಗಿ ದಾಳಿ ಮುಂದುವರಿದರೆ, ಇನ್ನು ಕೆಲವೇ ಕೆಲವು ದಿನಗಳಲ್ಲಿ ಇಡೀ ಗಾಜಾ ಪಟ್ಟಿ ಸರ್ವನಾಶವಾಗಿ ಹೋಗುವ ಭಯ ಕೂಡ ಆವರಿಸಿದೆ. ಮತ್ತೊಂದು ಕಡೆ ಅಮೆರಿಕ ಗಾಜಾದ ಶಾಂತಿಗೆ ಎಲ್ಲಾ ರೀತಿ ಪ್ರಯತ್ನ ಆರಂಭಿಸಿದೆ. ಖುದ್ದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಇಸ್ರೇಲ್ ನೆಲಕ್ಕೆ ಭೇಟಿ ನೀಡಿ ಕದನ ವಿರಾಮಕ್ಕೆ ಮನ ಒಲಿಸಿದ್ದರು. ಆದರೂ ಈಗ ಬೇರೆಯದ್ದೇ ಸಮಸ್ಯೆ ಶುರುವಾಗಿದೆ.
ಜಗತ್ತಿನಾದ್ಯಂತ ಸಂಚಲನ ಶುರು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಜೊತೆಗೆ ಮಾತುಕತೆ ನಡೆಸಿದ ನಂತರ ಯುದ್ಧ ನಿಲ್ಲಿಸಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಇಲ್ಲಿ ಮತ್ತೊಂದು ಸಮಸ್ಯೆ ಶುರುವಾಗಿದೆ. ಅದು ಏನೆಂದರೆ ಹಮಾಸ್ ಸಂಘಟನೆಯ ಕಡೆಯಿಂದ ಯುದ್ಧ ನಿಲ್ಲಿಸುವ ಬಗ್ಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಯುದ್ಧ ಮತ್ತಷ್ಟು ಭೀಕರ ಸ್ವರೂಪ ಪಡೆಯುವ ಭಯ ಆವರಿಸಿದೆ. ಇವರಿಬ್ಬರ ಕಿತ್ತಾಟದಲ್ಲಿ ಅಮಾಯಕ ಜನ ಅದರಲ್ಲೂ ಪುಟಾಣಿ ಮಕ್ಕಳು ಜೀವ ಬಿಡುವ ಪರಿಸ್ಥಿತಿ ಬಂದಿದೆ ಅಂತಾ ಜಗತ್ತಿನಲ್ಲಿ ಜನರು ಹಿಡಿಶಾಪ ಹಾಕುತ್ತಿದ್ದಾರೆ.












Click it and Unblock the Notifications