• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಚಿತ್ರ ಕಾರಣಕ್ಕಾಗಿ ಪಾಕಿಸ್ತಾನಿಗಳ ಬಳಿ ಭಿಕ್ಷೆ ಬೇಡಿದ ಜಾವೇದ್ ಮಿಯಾಂದಾದ್

|

ಮಾಜಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮತ್ತು ಉಗ್ರ ದಾವೂದ್ ಇಬ್ರಾಹಿಂ ನಂಟ ಜಾವೇದ್ ಮಿಯಾಂದಾದ್, ವಿಚಿತ್ರ ಕಾರಣಕ್ಕಾಗಿ ಪಾಕಿಸ್ತಾನಿಗಳ ಬಳಿ ಭಿಕ್ಷೆ ಬೇಡಿದ್ದಾರೆ.

   ಬಿಗ್ ಬಾಸ್ ದಿವಾಕರ್ ವಿರುದ್ಧ ದೂರು ಕೊಡಲು ಮುಂದಾದ ಅಹೋರಾತ್ರ..? | Diwakar & Ahoratra

   ಸುಮಾರು ಹನ್ನರಡು ಸಾವಿರ ಹಿಂಬಾಲಕರನ್ನು ಹೊಂದಿರುವ ತನ್ನ ಟ್ವಿಟ್ಟರ್ ಮೂಲಕ, ಮಿಯಾಂದಾದ್ ಪಾಕಿಸ್ತಾನದ ಪ್ರಜೆಗಳಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

   ಕೊನೆಗೂ ತನ್ನ ಫಾರಂ ಹೌಸ್ ನಲ್ಲಿ ಪತ್ತೆಯಾದ ದಾವೂದ್ ಇಬ್ರಾಹಿಂ

   2.20 ನಿಮಿಷದ ವಿಡಿಯೋದಲ್ಲಿ, ದೇಶ ಮತ್ತು ವಿದೇಶದಲ್ಲಿರುವ ಪಾಕಿಸ್ತಾನಿಗಳ ಬಳಿ ಮನವಿ ಮಾಡಿದ ಮಿಯಾಂದಾದ್, ದೇಣಿಗೆ ನೀಡುವಂತೆ ಕೋರಿದ್ದಾರೆ. ತಾವು ಯಾವ ಕಾರಣಕ್ಕಾಗಿ ಮನವಿ ಮಾಡುತ್ತಿದ್ದೇನೆ ಎಂದು, ಸವಿವರವಾಗಿ ಮಿಯಾಂದಾದ್ ವಿಡಿಯೋದಲ್ಲಿ ಹೇಳಿದ್ದಾರೆ.

   ಭಾರತದ ಮೇಲೆ ದಾಳಿಗೆ ಪಿಒಕೆ ಪ್ರಧಾನಿಯಿಂದ ಪಾಕಿಸ್ತಾನಕ್ಕೆ ಒತ್ತಾಯ

   "ಪಾಕಿಸ್ತಾನದ ರಾಷ್ಟ್ರೀಯ ಸಾಲ ಹೆಚ್ಚಾಗಿದೆ, ಈ ಸಮಯದಲ್ಲಿ ನಮ್ಮ ದೇಶಕ್ಕೆ ಯಾರೂ ಸಾಲವನ್ನು ನೀಡುತ್ತಿಲ್ಲ" ಎನ್ನುತ್ತಾ, "ನೀವು ಸಾಲ ನೀಡಿದರೆ ಪರಮಾಣು ಬಾಂಬ್ ಉಳಿಸಿಕೊಳ್ಳಬಹುದು" ಎಂದು ಮಿಯಾಂದಾದ್ ಮನವಿ ಮಾಡಿದ್ದಾರೆ.

   ಭ್ರಷ್ಟ ಪಾಕಿಸ್ತಾನಿಗಳೂ ಕೈಜೋಡಿಸಬಹುದು

   ಭ್ರಷ್ಟ ಪಾಕಿಸ್ತಾನಿಗಳೂ ಕೈಜೋಡಿಸಬಹುದು

   "ತಾನು ಆರಂಭಿಸಲು ಉದ್ದೇಶಿಸಲಾಗಿರುವ ಅಭಿಯಾನಕ್ಕೆ ದೇಶ ಮತ್ತು ವಿದೇಶ, ಅದೂ ಅಲ್ಲದೇ, ಪಾಕಿಸ್ತಾನವನ್ನು ಲೂಟಿ ಮಾಡಿರುವ ಭ್ರಷ್ಟ ಪಾಕಿಸ್ತಾನಿಗಳೂ ಕೈಜೋಡಿಸಬಹುದು. ಶ್ರೀಘ್ರವೇ ನಾನು ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನದಲ್ಲಿ ಬ್ಯಾಂಕ್ ಖಾತೆ ತೆರೆಯಲಿದ್ದೇನೆ"ಎಂದು ಜಾವೇದ್ ಮಿಯಾಂದಾದ್ ಹೇಳಿದ್ದಾರೆ.

   ಐಎಂಎಫ್ ಮುಂತಾದ ಸಂಸ್ಥೆಗಳು ಪಾಕಿಸ್ತಾನವನ್ನು ಸ್ವಾಧೀನ ಪಡಿಸಿಕೊಳ್ಳುತ್ತದೆ

   ಐಎಂಎಫ್ ಮುಂತಾದ ಸಂಸ್ಥೆಗಳು ಪಾಕಿಸ್ತಾನವನ್ನು ಸ್ವಾಧೀನ ಪಡಿಸಿಕೊಳ್ಳುತ್ತದೆ

   ಪಾಕಿಸ್ತಾನದ ರಾಷ್ಟ್ರೀಯ ಸಾಲವನ್ನು ಕ್ಲಿಯರ್ ಮಾಡಲೇಬೇಕಿದೆ. ಮತ್ತೆ ಹೆಚ್ಚಿನ ಸಾಲವನ್ನು ಕೇಳಿದರೆ, ಐಎಂಎಫ್ ಮುಂತಾದ ಸಂಸ್ಥೆಗಳು ಪಾಕಿಸ್ತಾನವನ್ನು ಸ್ವಾಧೀನ ಪಡಿಸಿಕೊಳ್ಳುತ್ತದೆ. ಆಗ, ನಮ್ಮ ದೇಶದ ಅಮೂಲ್ಯ ಆಸ್ತಿಯಾದ ಪರಮಾಣು ಬಾಂಬ್ ಅನ್ನು ಕೂಡಾ ಐಎಂಎಫ್ ಸ್ವಾಧೀನ ಪಡಿಸಿಕೊಳ್ಳುತ್ತದೆ.

   ಮಿಯಾಂದಾದ್ ಮನವಿ

   ಮಿಯಾಂದಾದ್ ಮನವಿ

   "ಪಾಕಿಸ್ತಾನದ ‘ಪರಮಾಣು ಶಕ್ತಿ' ಸ್ಥಾನಮಾನ ಹೋದರೆ ದೇಶದ ಭದ್ರತೆಗೆ ತೊಂದರೆಯಾಗಲಿದೆ. ಹಾಗಾಗಿ, ನಾನು ತೆರೆಯುವ ಬ್ಯಾಂಕ್ ಖಾತೆಗೆ ಪ್ರತೀ ತಿಂಗಳು ಎಲ್ಲರೂ ದೇಣಿಗೆಯನ್ನು ನೀಡಬೇಕು. ಆ ಮೂಲಕ, ಪರಮಾಣು ಹೊಂದಿರುವ ದೇಶ ಎನ್ನುವ ಸ್ಥಾನಮಾನವನ್ನು ಉಳಿಸಿಕೊಳ್ಳೋಣ" ಎಂದು ಮಿಯಾಂದಾದ್ ಮನವಿ ಮಾಡಿದ್ದಾರೆ.

   ಜಾವೇದ್ ಮಿಯಾಂದಾದ್, ದಾವೂದ್ ಇಬ್ರಾಹಿಂ ನಂಟರು

   ಜಾವೇದ್ ಮಿಯಾಂದಾದ್, ದಾವೂದ್ ಇಬ್ರಾಹಿಂ ನಂಟರು

   ಜಾವೇದ್ ಮಿಯಾಂದಾದ್ ಮಗ ಜುನೈದ್ ಮಿಯಾಂದಾದ್, ದಾವೂದ್ ಇಬ್ರಾಹಿಂ ಮಗಳು ಮೆಹ್ರುಕ್ ಅನ್ನು ವರಿಸಿದ್ದ. ಭಾರತದ ವಿರುದ್ದ ಕಿಡಿಕಾರುವಲ್ಲಿ ಮಂಚೂಣಿಯಲ್ಲಿ ಬರುವ ಮಿಯಾಂದಾದ್, ಅವರ ಈ ವಿಡಿಯೋ, ಅಲ್ಲಲ್ಲಿ ನಗೇಪಾಟಲಿಗೆ ಗುರಿಯಾಗಿದೆ.

   English summary
   Former Pak Cricketer Javed Miandad To Collect The Fund To Pay Off Country Loan And Also To Retain Atom Bomb.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X