• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಜಾರ್ಜಿಯಾದಲ್ಲಿ ವಿಮಾನ ಅಪಘಾತ : ಐವರು ದುರ್ಮರಣ

|
Google Oneindia Kannada News

ಪುಟ್ನಮ್ ಕೌಂಟಿ, ಜೂನ್ 6: ಉತ್ತರ ಜಾರ್ಜಿಯಾದಲ್ಲಿ ಶುಕ್ರವಾರ ವಿಮಾನ ಅಪಘಾತಕ್ಕೀಡಾಗಿದ್ದು, ಐವರು ಸಾವನ್ನಪ್ಪಿದ್ದಾರೆ.

   ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Oneindia Kannada

   ಇಂಡಿಯಾನಾಗೆ ತೆರಳುತ್ತಿದ್ದ ಫ್ಲೋರಿಡಾದ ಒಂದೇ ಕುಟುಂಬದ ನಾಲ್ವರು ಸದಸ್ಯರು ಮತ್ತು ವಿಮಾನದ ಪೈಲಟ್ ದುರಂತ ಸಾವಿಗೀಡಾಗಿದ್ದಾರೆ.

   ಪಾಕಿಸ್ತಾನ ವಿಮಾನ ದುರಂತದಲ್ಲಿ 97 ಜನರು ಸಾವುಪಾಕಿಸ್ತಾನ ವಿಮಾನ ದುರಂತದಲ್ಲಿ 97 ಜನರು ಸಾವು

   ಅಟ್ಲಾಂಟಾದ ಆಗ್ನೇಯಕ್ಕೆ ಸುಮಾರು 100 ಮೈಲಿ (161 ಕಿ.ಮೀ) ದೂರದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಐವರು ಮೃತಪಟ್ಟಿದ್ದಾರೆ ಎಂದು ಪುಟ್ನಮ್ ಕೌಂಟಿ ಶೆರಿಫ್ ಹೂವಾರ್ಡ್ ಸಿಲ್ಸ್ ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

   Five Killed in Small Plane Crash in Georgia

   ಪ್ಲೇನ್ ಕ್ರ್ಯಾಶ್ ನಲ್ಲಿ ಮೃತ ದುರ್ದೈವಿಗಳನ್ನು ಫ್ಲೋರಿಡಾದ ಮಾರಿಸ್ಟನ್ ನ ಲ್ಯಾರಿ ರೇ ಪ್ರುಯಿಟ್ (67), ಶಾನ್ ಚಾರ್ಲ್ಸ್ ಲಾಮಂಟ್ (41), ಪತ್ನಿ ಜೋಡಿ ರೇ ಲಾಮಂಟ್ (43), ಇಬ್ಬರು ಮಕ್ಕಳು - ಜೇಸ್ (6), ಆಲಿಸ್ (4) ಎಂದು ಗುರುತಿಸಲಾಗಿದೆ.

   ಪೈಪರ್ ಪಿ.ಎ 31-T ಫ್ಲೋರಿಡಾದ ವಿಲಿಸ್ಟನ್ ನಿಂದ ಇಂಡಿಯಾನಾದ ನ್ಯೂಕ್ಯಾಸಲ್ ಗೆ ಹಾರಾಟ ನಡೆಸುತ್ತಿತ್ತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.

   ಸ್ಥಳೀಯ ಕಾಲಮಾನ ಸಂಜೆ 5 ರ ಹೊತ್ತಿಗೆ ನ್ಯೂಕ್ಯಾಸಲ್ ನಲ್ಲಿರುವ ಹೆನ್ರಿ ಕೌಂಟಿ ಮುನ್ಸಿಪಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಬೇಕಿತ್ತು. ಆದರೆ ಅಷ್ಟರೊಳಗೆ ಅಪಘಾತ ಸಂಭವಿಸಿದೆ. ವಿಮಾನ ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದು ತಿಳಿದುಬಂದಿಲ್ಲ.

   English summary
   Five Killed in Small Plane Crash in Georgia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion