Get Updates
Get notified of breaking news, exclusive insights, and must-see stories!

ಶಾಪಿಂಗ್ ಸೆಂಟರ್ ಗೆ ಡಿಕ್ಕಿ ಹೊಡೆದು ಹೊತ್ತುರಿದ ವಿಮಾನ, ಐವರು ಸಾವು

ಆಸ್ಟ್ರೇಲಿಯಾದ ಮೆಲ್ಬೋರ್ನ್ ಸಮೀಪ ಭೀಕರ ವಿಮಾನ ದುರಂತ ಸಂಭವಿಸಿದೆ. ಕಳೆದ ಮೂವತ್ತು ವರ್ಷದಲ್ಲೇ ದೊಡ್ಡ ಅಪಘಾತ ಇದು ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ತನಿಖೆಗೆ ಆದೇಶ ನೀಡಲಾಗಿದೆ

ಮೆಲ್ಬೋರ್ನ್, ಫೆಬ್ರವರಿ 21: ಆಸ್ಟ್ರೇಲಿಯಾದ ಮೇಲ್ಬೋರ್ನ್ ಸಮೀಪದ ಎಸೆಂಡಾನ್ ವಿಮಾನ ನಿಲ್ದಾಣದ ಬಳಿ ಚಾರ್ಟರ್ ವಿಮಾನವೊಂದು ಶಾಪಿಂಗ್ ಸೆಂಟರ್ ಗೆ ಅಪ್ಪಳಿಸಿ, ಐವರು ಮೃತಪಟ್ಟ ಘಟನೆ ನಡೆದಿದೆ. ಡಿಎಫ್ ಒ ಸೆಂಟರ್ ಗೆ ಅಪ್ಪಳಿಸಿದ ನಂತರ ವಿಮಾನ ಬೆಂಕಿ ಹೊತ್ತುಕೊಂಡು ಉರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಕ್ಟೋರಿಯಾ ಅಗ್ನಿಶಾಮಕ ಸೇವೆಯ ಕಮಿಷನರ್ ಕ್ರೆಗ್ ಲ್ಯಾಪ್ಸ್ಲೇ ಪ್ರಕಾರ, ವಿಮಾನದಲ್ಲಿದ್ದ ಯಾರೂ ಬದುಕುಳಿದಿರುವ ಸಾಧ್ಯತೆಗಳಿಲ್ಲ. ವಿಮಾನದಲ್ಲಿದ್ದವರನ್ನು ಹೊರತುಪಡಿಸಿ ಉಳಿದವರಿಗೆ ಏನೂ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಅಮೆರಿಕ ನಾಗರಿಕರೂ ಕೂಡ ಇದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.[ಸಂಪರ್ಕಕ್ಕೆ ಸಿಗದ ಜೆಟ್ ಏರ್ ವೇಸ್ ವಿಮಾನ, ಅನುಮಾನದಲ್ಲಿ ಬೆನ್ನಟ್ಟಿದ ಜರ್ಮನಿ]

Five killed as plane plunges into shopping centre near Melbourne's Essendon Airport

ಆದರೆ, ಆಸ್ಟ್ರೇಲಿಯಾದಲ್ಲಿರುವ ಅಮೆರಿಕ ರಾಯಭಾರ ಕಚೇರಿ ವಕ್ತಾರರಾದ ಕ್ಯಾನ್ ಬೆರಾ ಈ ವಿಚಾರವನ್ನು ಖಚಿತಪಡಿಸಿಲ್ಲ. ಮೃತರು ಯಾವ ದೇಶದವರು ಎಂಬುದನ್ನು ಇನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ವಿಮಾನವು ಶಾಪಿಂಗ್ ಮಾಲ್ ನ ಹಿಂಭಾಗದಲ್ಲಿ ಡಿಕ್ಕಿಯಾಗಿದೆ.

ಆ ವೇಳೆ ಇಪ್ಪತ್ತು ನೌಕರರು ಸ್ಪಾಟ್ ಲೈಟ್ ಸ್ಟೋರ್ ನಲ್ಲಿದ್ದರು. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ಅಲ್ಲಿನ ಮ್ಯಾನೇಜರ್ ತಿಳಿಸಿದ್ದು, ಶಾಪಿಂಗ್ ಮಾಲ್ ಮುಚ್ಚಿತ್ತು ಎಂದು ತಿಳಿದುಬಂದಿದೆ. "ಸಿನಿಮಾದಲ್ಲಿ ನೋಡುವ ದೃಶ್ಯದ ಹಾಗೆ ಘಟನೆ ನಡೆದುಹೋಯಿತು. ಸಾಮಾನ್ಯಕ್ಕಿಂತ ತುಂಬ ವೇಗವಾಗಿ ಹಾಗೂ ಕೆಳಭಾಗದಲ್ಲಿ ಬಂದ ವಿಮಾನ ಡಿಕ್ಕಿಯಾಗಿ, ಬೆಂಕಿ ಹೊತ್ತಿಕೊಂಡಿತು" ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.[ದೋಹಾ ಟು ಆಕ್ಲೆಂಡ್: ಇದು ಜಗತ್ತಿನಲ್ಲೇ ಅತಿ ದೂರದ ವಿಮಾನ ಯಾನ]

Five killed as plane plunges into shopping centre near Melbourne's Essendon Airport

ಇದೀಗ ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ. ಎಸೆಂಡನ್ ವಿಮಾನ ನಿಲ್ದಾಣ ಹಾಗೂ ಶಾಪಿಂಗ್ ಸೆಂಟರ್ ನ ಮುಚ್ಚಲಾಗಿದೆ. ವಿಚಾರಣೆ ನಡೆಸುತ್ತಿರುವವರು ಸಾಕ್ಷಿ ಕಲೆ ಹಾಕಿದ ನಂತರ ಸಾರ್ವಜನಿಕ ಬಳಕೆಗೆ ಅವಕಾಶ ನೀಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+