ನಿಮಗೆ ಗೊತ್ತೇ? ಫಜ್ಲುಲ್ಲಾ 2010ರಲ್ಲೂ ಸತ್ತಿದ್ದ..!

ನವದೆಹಲಿ, ಡಿ. 20: ಪೇಶಾವರದಲ್ಲಿ ನೂರಾರು ಮಕ್ಕಳನ್ನು ಅಮಾನುಷವಾಗಿ ಹತ್ಯೆಗೈದಿದ್ದ ತಾಲಿಬಾನ್ ಉಗ್ರರ ಮುಖಂಡ ಮೌಲಾನಾ ಫಜ್ಲುಲ್ಲಾನನ್ನು ಹತ್ಯೆಗೈದಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವಾಲಯ ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿಕೊಂಡಿದೆ.

ಆದರೆ, ಈ ಕುರಿತು ಅಧಿಕೃತ ಹೇಳಿಕೆ ನೀಡುವ ಮೊದಲು ಸುದ್ದಿಯನ್ನು ದೃಢಪಡಿಸಿಕೊಳ್ಳುವುದಾಗಿ ಪಾಕಿಸ್ತಾನ ಸೈನ್ಯ ಹೇಳಿದೆ. 2010ರಲ್ಲಿಯೂ ಫಜ್ಲುಲ್ಲಾ ಹತ್ಯೆಯಾಗಿದ್ದ ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೈನ್ಯ ಈ ನಿರ್ಧಾರ ಕೈಗೊಂಡಿದೆ.

dead

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸೇನೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಫಜ್ಲುಲ್ಲಾ ಹತ್ಯೆಯಾಗಿದ್ದಾನೆ. ಈತನ ಜೊತೆಯಲ್ಲಿ 77 ತಾಲಿಬಾನ್ ಉಗ್ರರನ್ನು ಹತ್ಯೆಗೈದಿರುವುದಾಗಿ ಪಾಕಿಸ್ತಾನ ಸೇನೆ ಹೇಳಿಕೊಂಡಿದ್ದರೂ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಫೇಸ್‌ಬುಕ್ ಪುಟದಲ್ಲಿ ಈ ಕುರಿತು ಘೋಷಿಸಲಾಗಿದ್ದರೂ ಪಾಕಿಸ್ತಾನದ ವಕ್ತಾರರು ಹೇಳಿಕೆ ನೀಡಿದ ಮೇಲೆಯೇ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

2010ರಲ್ಲೂ ಸತ್ತಿದ್ದ ಫಜ್ಲುಲ್ಲಾ : ಫ್ಲಜ್ಲುಲ್ಲಾ ಸತ್ತಿದ್ದಾನೆಂದು 2010ರಲ್ಲೂ ಸುದ್ದಿ ಹರಡಿತ್ತು. ಆತನ ಜೊತೆ ಇನ್ನೂ 6 ಸಹಚರರು ಮೃತಪಟ್ಟಿದ್ದಾರೆ. ಪಾಕಿಸ್ತಾನದ ಗಡಿಗೆ ಹತ್ತಿರದ ಅಫ್ಘಾನಿಸ್ತಾನದ ನುರಿಸ್ತಾನ್ ಪ್ರಾಂತ್ಯದ ಬಾರ್ಗ್ ಮಟಲ್ ಜಿಲ್ಲೆಯಲ್ಲಿ ಫಜ್ಲುಲ್ಲಾ ಹತ್ಯೆಯಾಗಿದ್ದಾನೆ ಎಂದು ಅಫ್ಘಾನ್ ಗಡಿ ಪಡೆಯ ಮುಖ್ಯಸ್ಥ ಮೊಹಮ್ಮದ್ ಜಮಾನ್ ಮಾಮೋಜೈ ಹೇಳಿಕೆ ನೀಡಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+