ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಲಸಿಕೆಯಿಂದ ರಷ್ಯಾ ಅಧ್ಯಕ್ಷ ಪುಟಿನ್ ಮಗಳು ಮೃತಪಟ್ಟಿದ್ದು ನಿಜವೇ?

|
Google Oneindia Kannada News

ಮಾಸ್ಕೋ, ಆಗಸ್ಟ್ 19: ಕೋವಿಡ್-19 ಚಿಕಿತ್ಸೆಗೆ ಲಸಿಕೆಯೊಂದಕ್ಕೆ ರಷ್ಯಾ ಅನುಮತಿ ನೀಡಿದ್ದು, ಮುಂಬರುವ ವಾರಗಳಲ್ಲಿ ಅದರ ಸಾರ್ವಜನಿಕ ಬಳಕೆಯನ್ನು ಆರಂಭಿಸಲಾಗುವುದು ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಸ್ಟ್ ಆರಂಭದಲ್ಲಿ ತಿಳಿಸಿದ್ದರು. ಈ ಲಸಿಕೆ ಬಹಳ ಸುರಕ್ಷಿತವಾಗಿದೆ. ತಮ್ಮ ಮಗಳೂ ಅದನ್ನು ತೆಗೆದುಕೊಂಡಿದ್ದಾಳೆ ಎಂದು ಪುಟಿನ್ ಹೇಳಿದ್ದರು.

Recommended Video

DJ Halli , KG halli ಪ್ರಕರಣದ ಬಳಿಕ ಕೊತ್ತಂಬರಿ ಸೊಪ್ಪು ವೈರಲ್ ಆಗಿದ್ದೇಕೆ | Oneindia Kannada

ಆದರೆ ವೈಜ್ಞಾನಿಕ ಸಮುದಾಯದ ಕೆಲವು ವರ್ಗ ಇದರ ಬಗ್ಗೆ ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದೆ. ಈ ಲಸಿಕೆಯ ಹೆಚ್ಚಿನ ಉತ್ಪಾದನೆಗೆ ರಷ್ಯಾ ಅಡ್ಡದಾರಿಗಳನ್ನು ಹಿಡಿಯುವ ಸಾಧ್ಯತೆ ಇದೆ ಎಂದು ಹೇಳಿದೆ.

ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ ಆಯ್ತು: ಯಾರ ಮೇಲೆ ಮೊದಲ ಪ್ರಯೋಗ?ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ ಆಯ್ತು: ಯಾರ ಮೇಲೆ ಮೊದಲ ಪ್ರಯೋಗ?

ಪುಟಿನ್ ಈ ಘೋಷಣೆ ಮಾಡಿದ ಕೆಲವು ದಿನಗಳಲ್ಲಿಯೇ ಅದರ ಸುತ್ತಲೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಕೂಡ ಸೃಷ್ಟಿಯಾಗತೊಡಗಿವೆ. ಪುಟಿನ್ ಮಗಳು ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಆದರೆ ಅದು ವಾಸ್ತವವಾಗಿ ಪುಟಿನ್ ಅವರಿಗೆ ಸಂಬಂಧವೇ ಇಲ್ಲದ ಸ್ವಯಂಸೇವಕ ಯುವತಿಯೊಬ್ಬರ ವಿಡಿಯೋವಾಗಿತ್ತು. ಮುಂದೆ ಓದಿ...

ಪುಟಿನ್ ಮಗಳು ಮೃತಪಟ್ಟ ಸುದ್ದಿ

ಪುಟಿನ್ ಮಗಳು ಮೃತಪಟ್ಟ ಸುದ್ದಿ

ಆಗಸ್ಟ್ 15ರಂದು ಯಾವುದೇ ಹಿಂದೆ ಮುಂದಿಲ್ಲದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು. ಕೋವಿಡ್-19 ಲಸಿಕೆಯ ಎರಡನೆಯ ಡೋಸ್ ಪಡೆದುಕೊಂಡ ಬಳಿಕ ಪುಟಿನ್ ಮಗಳು ಮೃತಪಟ್ಟಿದ್ದಾರೆ ಎಂಬ ವರದಿ ಟೊರಾಂಟೊ ಟುಡೆ ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿತ್ತು.

ವೆಬ್‌ಸೈಟ್ ಸೃಷ್ಟಿಸಿದ ಸುದ್ದಿ

ವೆಬ್‌ಸೈಟ್ ಸೃಷ್ಟಿಸಿದ ಸುದ್ದಿ

ಈ ವರದಿ ಸುಳ್ಳು ಎನ್ನುವುದು ದೃಢಪಟ್ಟಿದೆ. ಇದು ರಷ್ಯಾದ ಯಾವುದೇ ಅಧಿಕೃತ ವಿಶ್ವಾಸಾರ್ಹ ಮಾಧ್ಯಮ ಅಥವಾ ಸಂಸ್ಥೆಗಳಿಂದ ಹೊರಬಿದ್ದ ಹೇಳಿಕೆಯಲ್ಲ. ರಷ್ಯಾದ ಸರ್ಕಾರದಿಂದ ಅಥವಾ ಪುಟಿನ್ ಅವರಿಂದ ಯಾವುದೇ ಹೇಳಿಕೆ ದಾಖಲಾಗಿಲ್ಲ. ಕೆಲವು ವಾರಗಳ ಹಿಂದಷ್ಟೇ ಹುಟ್ಟಿಕೊಂಡಿದ್ದ ಈ ವೆಬ್‌ಸೈಟ್, ಸುದ್ದಿ ಸೃಷ್ಟಿಸಿದೆ.

ರಷ್ಯಾದ ಕೊವಿಡ್ ಲಸಿಕೆ ಸುರಕ್ಷಿತವಲ್ಲ ಎಂಬ ಆರೋಪ ಆಧಾರ ರಹಿತರಷ್ಯಾದ ಕೊವಿಡ್ ಲಸಿಕೆ ಸುರಕ್ಷಿತವಲ್ಲ ಎಂಬ ಆರೋಪ ಆಧಾರ ರಹಿತ

ಅಧಿಕೃತವಲ್ಲದ ವಿಡಿಯೋ

ಅಧಿಕೃತವಲ್ಲದ ವಿಡಿಯೋ

ತನ್ನ ವರದಿಗೆ ಪೂರಕವೆಂಬಂತೆ ಎರಡು ಪುರಾವೆಗಳನ್ನು ಅದು ಒದಗಿಸಿದೆ. ಆದರೆ ಈ ಎರಡೂ ಕೂಡ ನಂಬಲರ್ಹವಲ್ಲ. 'ರಷ್ಯಾ ಸರ್ಕಾರ ಒಳಗಿನ ಮೂಲಗಳು' ಮತ್ತು ಟ್ಯಾರೋಟ್ ಕಾರ್ಡ್ ರೀಡಿಂಗ್ ಎಂಬ ಯೂಟ್ಯೂಬ್ ವಿಡಿಯೋಗಳನ್ನು ಅದು ಸಾಕ್ಷ್ಯ ಎಂಬಂತೆ ತಿಳಿಸಿದೆ. ಆದರೆ ಘಟನೆಯ ಬಗ್ಗೆ ಅದರಲ್ಲಿ ಯಾವುದೇ ವಿವರಗಳು ಇಲ್ಲ.

ಟ್ಯಾರೊಟ್ ಕಾರ್ಡ್ ವಿಡಿಯೋವನ್ನು ಡಿಲೀಟ್ ಮಾಡಲಾಗಿದ್ದರೂ, ಅದರ ವಿಡಿಯೋದ ಸಂಗ್ರಹಿತ ಆವೃತ್ತಿಯಲ್ಲಿ ಇದರಲ್ಲಿ ತಿಳಿಸುವ ಮಾಹಿತಿಗಳು ನಿಖರ ಎಂದು ಹೇಳಲಾಗದು ಎಂಬುದನ್ನೂ ಸ್ಪಷ್ಟವಾಗಿ ಹೇಳಲಾಗಿದೆ.

ಚೇತರಿಸಿಕೊಂಡಿದ್ದಾಳೆ ಎಂದಿದ್ದ ಪುಟಿನ್

ಚೇತರಿಸಿಕೊಂಡಿದ್ದಾಳೆ ಎಂದಿದ್ದ ಪುಟಿನ್

ಕೋವಿಡ್ 19ರ ಲಸಿಕೆ ಪಡೆದುಕೊಂಡ ಬಳಿಕ ಪುಟಿನ್ ಮಗಳಲ್ಲಿ ಆಗಿರುವ ಬದಲಾವಣೆಗಳು ಮತ್ತು ಅವರ ಅನುಭವಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ರಷ್ಯಾದ ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಸಿದ್ಧ, ಯಾವಾಗ ಲಭ್ಯ?ರಷ್ಯಾದ ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಸಿದ್ಧ, ಯಾವಾಗ ಲಭ್ಯ?

ಜ್ವರದಿಂದ ಬಳಲುತ್ತಿದ್ದ ಮಗಳು ಕೊರೊನಾ ವೈರಸ್‌ಗಾಗಿ ಸಿದ್ಧಪಡಿಸಿರುವ ಲಸಿಕೆ ತೆಗೆದುಕೊಂಡಿದ್ದು, ಆಕೆ ಈಗ ಚೇತರಿಸಿಕೊಂಡಿದ್ದಾಳೆ. ಆಕೆಯ ದೇಹದಲ್ಲಿ ಜೀವ ನಿರೋಧಕ ಶಕ್ತಿ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಪುಟಿನ್ ತಿಳಿಸಿದ್ದರು. ಆದರೆ ಅವರ ಮಗಳು ಮೃತಪಟ್ಟಿದ್ದಾರೆ ಎಂಬ ಸುದ್ದಿಗಳ ಬಗ್ಗೆ ಯಾವುದೇ ಖಚಿತ ಹೇಳಿಕೆ ದಾಖಲಾಗಿಲ್ಲ.

English summary
A Fake News about Russia president Vladimir Putin's daughter was died after taking COVID-19 vaccine was circulating. Here is the fact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X