ಇರಾನ್ ಸುಪ್ರೀಂ ಲೀಡರ್ ಖಮೇನಿ ಕಥೆ ಮುಗಿಸಲು ಇಸ್ರೇಲ್ ಸಿದ್ಧತೆ? Israel And Iran
ಹೊಡಿ ಮಗ.. ಹೊಡಿ ಮಗ.. ಹೊಡಿ ಮಗ.. ಬಿಡಬೇಡ ಅವ್ನ ಅಂತಾ ಜೋಗಿ ಸಿನಿಮಾ ಸಾಂಗ್ ರೀತಿಯಲ್ಲೇ ಇರಾನ್ ವಿರುದ್ಧ ಇಸ್ರೇಲ್ ಸೇನೆ ದಾಳಿ ಮಾಡುತ್ತಿದೆ. ಹಾಗಂತ ಇಲ್ಲಿ ಇರಾನ್ ಏನು ಅಶಕ್ತ ಅಥವಾ ಡಮ್ಮಿ ಪೀಸ್ ಅಲ್ಲ. ಇರಾನ್ ಕೂಡ ಇಸ್ರೇಲ್ ದೇಶಕ್ಕೆ ಭಾರಿ ದೊಡ್ಡ ಆಘಾತ ನೀಡುತ್ತಿದೆ. ಇಂತಹ ಸಮಯದಲ್ಲೇ, ಇಸ್ರೇಲ್ ಸೇನೆ ಖತರ್ನಾಕ್ ಪ್ಲಾನ್ ಒಂದನ್ನ ಮಾಡಿದ್ದು ಭಾರಿ ಸಂಚಲನ ಸೃಷ್ಟಿ ಮಾಡಿದೆ! ಹಾಗಾದ್ರೆ ಏನದು ಇಸ್ರೇಲ್ ಸೇನೆಯ ಖತರ್ನಾಕ್ ಪ್ಲಾನ್?
ಹೌದು, ಮನುಷ್ಯರು ಮತ್ತೊಂದು ಅಂದ್ರೆ 3ನೇ ಮಹಾಯುದ್ಧಕ್ಕೆ ಸರ್ವ ಸನ್ನದ್ಧವಾಗಿದ್ದಾರೆ. ಇಸ್ರೇಲ್ & ಇರಾನ್ ತೀವ್ರವಾಗಿ ಯುದ್ಧ ಮಾಡುತ್ತಿದ್ದು, ಹಿಂಸಾಚಾರ ಕೂಡ ಜೋರಾಗಿದೆ. ಹೀಗೆ ಪರಮಾಣು ಬಾಂಬ್ ಬಳಕೆ ಮಾಡುವ ಸಾಮರ್ಥ್ಯವನ್ನ ಹೊಂದಿರುವ ಎರಡು ದೇಶಗಳು ಬಡಿದಾಡುವ ರೀತಿ ನೋಡಿ ಇಡೀ ಜಗತ್ತಿಗೆ ಭಯವಾಗಿತ್ತು. ಹೀಗಿದ್ದಾಗ ಇಸ್ರೇಲ್ & ಇರಾನ್ ನಡುವೆ ಕದನ ವಿರಾಮ ಘೋಷಣೆ ಮಾಡಿಸಲು ಕೂಡ ಪ್ರಯತ್ನಗಳು ನಡೆಯುವಾಗಲೇ ಭಾರಿ ಸ್ಫೋಟಕ ಸುದ್ದಿಯೊಂದು ಹಬ್ಬಿದೆ. ಅದು ಏನಂದ್ರೆ, ಇರಾನ್ ಸುಪ್ರೀಂ ಲೀಡರ್ ಖಮೇನಿ ಕಥೆ ಮುಗಿಸಲು ಇಸ್ರೇಲ್ ಸಿದ್ಧತೆ ನಡೆಸಿದೆಯಾ?

ಇರಾನ್ ಸುಪ್ರೀಂ ಲೀಡರ್ ಖಮೇನಿ ಕಥೆ...
ಗಾಜಾ & ಇಸ್ರೇಲ್, ಯೆಮನ್ & ಇಸ್ರೇಲ್, ಲೆಬನಾನ್ & ಇಸ್ರೇಲ್, ಸಿರಿಯಾ & ಇಸ್ರೇಲ್ ಯುದ್ಧ ನಡುವೆ ದಿಢೀರ್, ಇರಾನ್ ಜೊತೆಯಲ್ಲಿಯೂ ಇದೀಗ ಘೋರ ಯುದ್ಧವನ್ನು ಶುರು ಮಾಡಿದೆ ಪುಟಾಣಿ ದೇಶ ಇಸ್ರೇಲ್ ಮಿಲಿಟರಿ. ಮಧ್ಯಪ್ರಾಚ್ಯದಲ್ಲಿ ಭಾರಿ ದೊಡ್ಡ ಯುದ್ಧ ಶುರುವಾಗಿದೆ, ಪರಮಾಣು ಸಾಮರ್ಥ್ಯವೇ ಅಂದ್ರೆ ಅಣುಬಾಂಬ್ ಇರುವ ಇರಾನ್ ಮತ್ತು ಅಮೆರಿಕ ಬೆಂಬಲ ಇರುವ ಇಸ್ರೇಲ್ ನಡುವೆ ಘೋರ ಕದನ ಆರಂಭವಾಗಿ ದೊಡ್ಡ ಹಿಂಸಾಚಾರವೂ ನಡೆಯುತ್ತಿದೆ.
ಹೀಗಿದ್ದಾಗಲೇ, ಇರಾನ್ ಸುಪ್ರೀಂ ಲೀಡರ್ ಖಮೇನಿ ಕಥೆ ಮುಗಿಸಲು ಇಸ್ರೇಲ್ ಸಿದ್ಧತೆ ನಡೆಸಿದೆ ಎಂಬ ಸುದ್ದಿ ಹಬ್ಬಿದೆ. ಈ ವಿಚಾರ ತಿಳಿದು ಖಮೇನಿ ಕೂಡ ಎಸ್ಕೇಪ್ ಆಗಿರುವ ಆರೋಪ ಕೇಳಿ ಬಂದಿದೆ. ಇಷ್ಟೆಲ್ಲದರ ನಡುವೆ ಇರಾನ್ ಸೇನೆಯ ಹಲವು ಪ್ರಮುಖ ನಾಯಕರ ಕಥೆ ಮುಗಿಸಿದೆ ಇಸ್ರೇಲ್. ಇದರ ಜೊತೆಗೆ ಇನ್ನಷ್ಟು ಘೋರ ಯುದ್ಧಕ್ಕೂ ಇಸ್ರೇಲ್ ಸೇನೆ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ತಯಾರಿ ಆರಂಭ ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.












Click it and Unblock the Notifications