ರಷ್ಯಾ ಹಾರಿಸಿದ್ದ 74 ಡ್ರೋನ್ ಪೀಸ್ ಪೀಸ್ ಮಾಡಿದ ಉಕ್ರೇನ್!
ಜಗತ್ತಿನಲ್ಲಿ 3ನೇ ಮಹಾಯುದ್ಧ ನಡೆಯಬಾರದು ಯಾಕಂದ್ರೆ ಅದರ ಪರಿಸ್ಥಿತಿ ಘೋರವಾಗಿ ಇಡೀ ಭೂಮಿಯೇ ನಾಶವಾಗುತ್ತದೆ. ಇದೇ ಕಾರಣಕ್ಕೆ 3ನೇ ಮಹಾಯುದ್ಧ ತಪ್ಪಿಸಲು ಈಗ ಬೇಕಿರುವ ಎಲ್ಲಾ ಪ್ರಯತ್ನಗಳನ್ನ ಶಕ್ತಿಶಾಲಿ ದೇಶಗಳು ಮಾಡುತ್ತಿವೆ. ಆದರೆ ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಭೀಕರ ಯುದ್ಧ 3ನೇ ಮಹಾಯುದ್ಧವನ್ನ ಈಗ ಇನ್ನಷ್ಟು ಹತ್ತಿರಕ್ಕೆ ತರುತ್ತಿದೆ.
ಹೌದು ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಯಾವುದೇ ಲಕ್ಷಣವು ಕಾಣುತ್ತಿಲ್ಲ. ಬದಲಾಗಿ ರಷ್ಯಾ & ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಘೋರವಾಗುತ್ತಿದೆ. ಅದ್ರಲ್ಲೂ ರಷ್ಯಾ ಡ್ರೋನ್ ದಾಳಿ ವಿರುದ್ಧ ಉಕ್ರೇನ್ ತೊಡೆತಟ್ಟಿ ನಿಂತಿದೆ. ತನ್ನಲ್ಲಿರುವ ಎಲ್ಲ ರೀತಿ ಅತ್ಯಾಧುನಿಕ ಅಸ್ತ್ರ ಬಳಸಿ, ರಷ್ಯಾ ಹಾರಿಸುವ ಡ್ರೋನ್‌ಗಳನ್ನ ಪೀಸ್ ಮಾಡುತ್ತಿದೆ ಉಕ್ರೇನ್. ಈಗ ಕೂಡ ಅಷ್ಟೆ ಉಕ್ರೇನ್‌ಗೆ ದೊಡ್ಡ ಗೆಲುವು ಸಿಕ್ಕಿದೆಯಂತೆ. ಅದರಲ್ಲೂ ರಷ್ಯಾ ಹಾರಿಸಿದ್ದ ಬರೋಬ್ಬರಿ 74 ಡ್ರೋನ್ ಪೀಸ್ ಪೀಸ್ ಮಾಡಿದೆಯಂತೆ ಉಕ್ರೇನ್ ಸೇನೆ. ಅದು ಹೇಗೆ ಗೊತ್ತಾ? ಮುಂದೆ ಓದಿ.

ಉಕ್ರೇನ್ ರಾಜಧಾನಿಯೇ ಟಾರ್ಗೆಟ್!
ರಷ್ಯಾ ಸೇನೆ ಈಗಾಗಲೇ ಭಾಗಶಃ ಉಕ್ರೇನ್ ನೆಲವನ್ನ ತನ್ನ ವಶಕ್ಕೆ ಪಡೆದಿದ್ದು, ಉಕ್ರೇನ್‌ನ ರಾಜಧಾನಿ ಕೀವ್ ಭಾಗವನ್ನ ಟಾರ್ಗೆಟ್ ಮಾಡಿದೆ. ಹಿಗಾಗಿ ಸುಮಾರು 75 ಡ್ರೋನ್‌ಗಳನ್ನ ಒಂದೇ ಬಾರಿಗೆ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಹಾರಿಬಿಟ್ಟಿತ್ತು ಎನ್ನಲಾಗಿದೆ. ಆದರೆ ಹೀಗೆ ತನ್ನ ರಾಜಧಾನಿ ಕೀವ್ ಮೇಲೆ ಹಾರಿಬಂದ ಸುಮಾರು 75 ಡ್ರೋನ್‌ಗಳ ಪೈಕಿ ಬರೋಬ್ಬರಿ 74 ಡ್ರೋನ್‌ಗಳನ್ನ ಉಕ್ರೇನ್ ಸೇನೆ ಪುಡಿಪುಡಿ ಮಾಡಿದೆ. ಈ ಮೂಲಕ ರಷ್ಯಾ ಸೇನೆ ಶಾಕ್ ಆಗುವಂತೆ ಮಾಡಿದೆ ಉಕ್ರೇನ್. ಈಗ ಉಕ್ರೇನ್ ಹೊಡೆದುರುಳಿಸಿದೆ ಎನ್ನಲಾದ ಡ್ರೋನ್‌ಗಳ ಸಂಖ್ಯೆ, ರಾಜಧಾನಿ ಕೀವ್ ಭಾಗದಲ್ಲೇ ಅತಿ ಹೆಚ್ಚಾಗಿ ಕಂಡು ಬಂದಿದೆ ಎನ್ನಲಾಗಿದೆ.
ಮಗು ಸೇರಿ ಐವರಿಗೆ ಗಾಯ?
ರಷ್ಯಾ ಈಗ ನಡೆಸಿರುವ ಡ್ರೋನ್ ದಾಳಿಯು ಇಡೀ ಯುದ್ಧದಲ್ಲೇ ಭೀಕರ ಎನ್ನಲಾಗುತ್ತಿದೆ. 2022ರ ಫೆಬ್ರವರಿ ತಿಂಗಳಲ್ಲಿ ರಷ್ಯಾ ಸೇನೆ ಉಕ್ರೇನ್ ವಿರುದ್ಧ ದಾಳಿ ಆರಂಭಿಸಿತ್ತು. ಯುದ್ಧ ಶುರುವಾದ ಬಳಿಕ ಈಗ ನಡೆದ 75 ಡ್ರೋನ್‌ಗಳ ದಾಳಿ ಅತಿ ಭಯಾನಕ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿರುವ ಸೂಚನೆ ಸಿಗುತ್ತಿದೆ. ಒಂದು ಕಡೆ ಹಮಾಸ್ ಮತ್ತು ಇಸ್ರೇಲ್ ಯುದ್ಧ ನಿಲ್ಲುವ ಲಕ್ಷಣ ಕಂಡುಬಂದರೂ ರಷ್ಯಾ VS ಉಕ್ರೇನ್ ಯುದ್ಧಕ್ಕೆ ಬ್ರೇಕ್ ಬೀಳುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ.

ಯುದ್ಧ ನಿಲ್ಲಿಸುವ ದೊಡ್ಡ ಪ್ರಯತ್ನ ನಡೆದಿಲ್ಲ
ರಷ್ಯಾ ತನ್ನ ಶತ್ರು ಉಕ್ರೇನ್ ಸರ್ವನಾಶಕ್ಕೆ ತೊಡೆತಟ್ಟಿದ್ದು, ಸಂಧಾನ ನಡೆಯುವ ಯಾವ ಲಕ್ಷಣ ಕೂಡ ಕಾಣುತ್ತಿಲ್ಲ. ಹೀಗಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಯುದ್ಧ ನಿಲ್ಲಿಸುವ ಮನಸ್ಸು ಮಾಡುತ್ತಿಲ್ಲ. ಇನ್ನ ಉಕ್ರೇನ್ ತಲೆಬಗ್ಗಿಸಿ ಸೋಲು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಹೀಗೆ ಯಾರದ್ದೋ ಸ್ವಾರ್ಥ ಹಾಗೂ ಕಿರಿಕಿರಿಗೆ ಅಮಾಯಕರ ಜೀವ ಸಂಕಷ್ಟಕ್ಕೆ ಸಿಲುಕಿದೆ. ತುತ್ತು ಅನ್ನಕ್ಕೂ ಉಕ್ರೇನ್ ಜನರು ಪರದಾಡುವ ಪರಿಸ್ಥಿತಿ ಬಂದಿದೆ. ಆದರೂ ಈ ಘೋರ ಯುದ್ಧ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ.
ಜಾಗತಿಕವಾಗಿ ಇಬ್ಬರ ನಡುವೆ ಯುದ್ಧ ಬೇಗ ನಿಲ್ಲಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ಕಾರ್ಯಕ್ಕೆ ಮಾತ್ರ ಯಾವುದೇ ದೊಡ್ಡ ದೇಶವೂ ಮುಂದಾಗುತ್ತಿಲ್ಲ. ಹೀಗಾಗಿಯೇ ಪರಿಸ್ಥಿತಿ ಕೂಡ ದಿನದಿಂದ ದಿನಕ್ಕೆ ಸೂಕ್ಷ್ಮವಾಗುತ್ತಿದ್ದು ಒಂದು ಕಡೆ ಉಕ್ರೇನ್ ಪರವಾಗಿ ಅಮೆರಿಕ & ಯುರೋಪ್ ದೇಶಗಳು ನಿಂತಿವೆ. ಇನ್ನೊಂದು ಕಡೆ ರಷ್ಯಾ ಪರವಾಗಿ ಚೀನಾ ಮತ್ತೆ ಉತ್ತರ ಕೊರಿಯಾ ದೇಶಗಳು ನಿಂತಿವೆ. ಹೀಗೆ ನಿಧಾನವಾಗಿ ಜಗತ್ತು ಎರಡು ಭಾಗವಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.












Click it and Unblock the Notifications