Salt Bae: ಸ್ಪ್ರೈಟ್ ಬೆಲೆ 800 ರೂಪಾಯಿ, ಇದೆಂತಹ ರೆಸ್ಟೋರೆಂಟ್?
ಸಾಮಾನ್ಯವಾಗಿ 1 ಸ್ಪ್ರೈಟ್ ಬೆಲೆ ಎಷ್ಟಿರುತ್ತೆ ಹೇಳಿ? ಎಲ್ಲೇ ಖರೀದಿ ಮಾಡಿದರೂ ಹೆಚ್ಚೆಚ್ಚು ಅಂದ್ರೆ 50 ರೂಪಾಯಿ ಇರಬಹುದು. ಭರ್ಜರಿ ಊಟದ ಜೊತೆಗೆ ಕೆಲವರಿಗೆ ಸ್ಪ್ರೈಟ್ ಕೂಡ ಇರಲೇಬೇಕು. ಆದರೆ ಇಲ್ಲೊಂದು ರೆಸ್ಟೋರೆಂಟ್ ಇದೆ, ಇಲ್ಲಿ ಒಂದು ಸ್ಪ್ರೈಟ್ ಬೆಲೆ ಬರೀ 50 ರೂಪಾಯಿ ಅಲ್ಲ ಬರೋಬ್ಬರಿ 800 ರೂಪಾಯಿ!
ಜಗತ್ತಿನಲ್ಲಿ ದೊಡ್ಡ ದೊಡ್ಡ ಹೋಟೆಲ್ ಇವೆ, ಅದರಲ್ಲೂ ಶ್ರೀಮಂತರು ಒಂದು ಹೊತ್ತಿನ ಊಟಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಹೀಗೆ ಇಲ್ಲೊಂದು ಹೋಟೆಲ್‌ನಲ್ಲಿ ಯಕಶ್ಚಿತ್ ಒಂದು ಸಾಫ್ಟ್ ಡ್ರಿಂಕ್ಸ್‌ಗೆ 800 ರೂಪಾಯಿ ಚಾರ್ಜ್ ಮಾಡಿದ್ದಾರೆ. ಈ ಬೆಲೆಯ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅಲ್ಲದೆ ಇದೆಂತಹ ಹೋಟೆಲ್ ಸ್ವಾಮಿ? ಅಂತಾ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಹಾಗಾದರೆ ಆ ಹೋಟೆಲ್ ಯಾವುದು?

ರೇಟ್ ನೋಡಿದರೆ ಹೊಟ್ಟೆ ತುಂಬುತ್ತೆ!
ಅಂದಹಾಗೆ ಟರ್ಕಿಶ್ ಬಾಣಸಿಗ ನುಸ್ರೆತ್ ಗೊಕ್ಸಿ ಬಗ್ಗೆ ನಿಮಗೆಲ್ಲಾ ಗೊತ್ತು, ಅದರಲ್ಲೂ ಈತ ತನ್ನ ಅಡುಗೆ ಅಥವಾ ತಾನು ತಯಾರಿಸಿದ ತಿನಿಸುಗಳ ಮೇಲೆ ಉಪ್ಪು ಮತ್ತು ಮಸಾಲೆಯ ಸುರಿಯುವ ಶೈಲಿ ಸೂಪರ್. ಈ ಕಾರಣಕ್ಕೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ನುಸ್ರೆತ್ ಗೊಕ್ಸಿ ಅವರಿಗೆ ಸೃಷ್ಟಿಯಾಗಿದ್ದಾರೆ. ಇನ್ನೊಂದು ಕಡೆ ನುಸ್ರೆತ್ ಗೊಕ್ಸಿಯ 'ಸಾಲ್ಟ್ ಬೇ' ಎಂಬ ಹೋಟೆಲ್ ದುಬೈನಲ್ಲಿ ಇದೆ. ಈ ಹೋಟೆಲ್‌ನಲ್ಲಿ ಎಲ್ಲಾ ತುಂಬಾ ದುಬಾರಿ ಅನ್ನೋ ಆರೋಪ ಇತ್ತು, ಇದೀಗ ಯಕಶ್ಚಿತ್ ಒಂದು ಸಾಫ್ಟ್ ಡ್ರಿಂಕ್ಸ್‌ಗೆ 800 ರೂಪಾಯಿ ಚಾರ್ಜ್ 'ಸಾಲ್ಟ್ ಬೇ' ಸದ್ದು ಮಾಡಿದೆ.
I’m sorry but this is just so cringe. pic.twitter.com/ULzFFSkMth
— South Dallas Foodie (@SouthDallasFood) November 13, 2023
ಪ್ರತಿಯೊಬ್ಬರಿಗೂ ಬಡಿಸುವ ಓನರ್!
'ಸಾಲ್ಟ್ ಬೇ' ಹೋಟೆಲ್‌ನ ಮತ್ತೊಂದು ವಿಶೇಷತೆ ಏನಂದ್ರೆ, ಈ ಹೋಟೆಲ್‌ಗೆ ಬರುವವರ ತಟ್ಟೆಗೆ ಖುದ್ದಾಗಿ ಈ ರೆಸ್ಟೋರೆಂಟ್ ಮಾಲೀಕ ನುಸ್ರೆತ್ ಗೊಕ್ಸಿ ಅವರೇ ಬಡಿಸುತ್ತಾರೆ. ಅಲ್ಲಿ ಮತ್ತೊಂದು ಸ್ಪೆಷಾಲಿಟಿ ಇದೆ, ಮಾಂಸವನ್ನ ತಾನೇ ಕತ್ತರಿಸಿ ಅದಕ್ಕೆ ತನ್ನದೇ ಶೈಲಿಯಲ್ಲಿ ಮಸಾಲೆ ಹಾಕುತ್ತಾರೆ ನುಸ್ರೆತ್ ಗೊಕ್ಸಿ. ಆದರೆ ಈ ಹೋಟೆಲ್‌ನಲ್ಲಿ ಒಂದು ಪ್ಲೇಟ್ ಮಾಂಸ ತೆಗೆದುಕೊಂಡರೆ 83,000 ರೂಪಾಯಿ ಚಾರ್ಜ್ ಮಾಡ್ತಾರೆ, ಹಾಗೇ ಒಂದು ಫ್ರೆಂಚ್ ಫ್ರೈಗೆ ಸಾವಿರಕ್ಕೂ ಹೆಚ್ಚು ರೂಪಾಯಿ ಚಾರ್ಜ್ ಮಾಡ್ತಾರೆ, ಈಗ ಒಂದು ಸ್ಪ್ರೈಟ್‌ಗೆ 800 ರೂ. ಚಾರ್ಜ್ ಮಾಡಿರುವುದು ಸದ್ದು ಮಾಡ್ತಿದೆ.
ಒಟ್ನಲ್ಲಿ 2017ರಿಂದ ಸದ್ದು ಮಾಡುತ್ತಾ ಸುದ್ದಿಯಲ್ಲಿರುವ ನುಸ್ರೆತ್ ಗೊಕ್ಸಿ ಈಗ ಅತಿದೊಡ್ಡ ಸೆಲೆಬ್ರಿಟಿ. ಅದ್ರಲ್ಲು ನುಸ್ರೆತ್ ಗೊಕ್ಸಿ ಅವರ ಕೈಯಿಂದ ಊಟ ಮಾಡಲು ದೊಡ್ಡ ದೊಡ್ಡ ಸಿನಿಮಾ ನಟರು, ಕ್ರೀಡಾಪಟುಗಳು ಕಾಯುತ್ತಾರೆ. ಆದರೆ ಇಲ್ಲಿ ಊಟ ಮಾಡಲು ಜೇಬು ಗಟ್ಟಿ ಇರಬೇಕು ಅಷ್ಟೇ.












Click it and Unblock the Notifications