Illegal Immigrants: ಅಮೆರಿಕದಲ್ಲಿ 64 ಲಕ್ಷ ಅಕ್ರಮ ವಲಸಿಗರು, ಭಾರತ ಮೂಲದವರ ಸಂಖ್ಯೆ ಎಷ್ಟು ಗೊತ್ತಾ?
ಅಮೆರಿಕ ಅಕ್ರಮ ವಲಸಿಗರ ಕಾಟಕ್ಕೆ ಬೇಸತ್ತು ಹೋಗಿದ್ದು, ಅಲ್ಲಿನ ಸರ್ಕಾರಕ್ಕೆ ವಲಸಿಗರ ನಿಯಂತ್ರಣವೇ ದೊಡ್ಡ ತಲೆನೋವಾಗಿದೆ. ಪರಿಸ್ಥಿತಿ ಹೀಗಿದ್ದಾಗ ಏನು ಮಾಡೋದು ಅಂತ ಬೈಡನ್ ಆಡಳಿತ ಪರದಾಡುವ ಸ್ಥಿತಿಯಲ್ಲೇ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಮೆರಿಕ ಈಗ ಬರೋಬ್ಬರಿ 6.4 ಮಿಲಿಯನ್ ಅಕ್ರಮ ವಲಸಿಗರಿಗೆ ತಾಣವಾಗಿ ಹೋಗಿದೆಯಂತೆ. ಈ ಪೈಕಿ ಭಾರತೀಯರ ಸಂಖ್ಯೆ ಎಷ್ಟು ಗೊತ್ತಾ?
ಒಂದು ಜಮಾನ ಇತ್ತು, ಕೇವಲ 20 ಅಥವಾ 30 ವರ್ಷಗಳ ಹಿಂದೆ ಅಮೆರಿಕದಲ್ಲಿ ಹೋಗಿ ಉದ್ಯೋಗ ಪಡೆದರೆ ಅವನ ಲೈಫ್ ಸೆಟಲ್. ಮುಂದಿನ ಜೀವನದ ಬಗ್ಗೆ ಯೋಚನೆ ಬೇಡ, ಅನ್ನೋ ಮನಸ್ಥಿತಿ ಇತ್ತು. ಆದ್ರೆ ಅಮೆರಿಕ ಈಗ ಹೆಸರಿಗೆ ಮಾತ್ರ ಶ್ರೀಮಂತ ರಾಷ್ಟ್ರವಾಗಿದೆ ಹೊರತು, ಅಲ್ಲಿ ಅಸಲಿ ಶ್ರೀಮಂತಿಕೆ ಉಳಿದಿಲ್ಲ. ಅಮೆರಿಕ ಈಗ ಜಗತ್ತಿನ ಕಡುಬಡ ದೇಶ ಅಂದರೂ ತಪ್ಪಾಗಲ್ಲ. ಅಲ್ಲಿ ಕೆಲವೇ ಕೆಲವರ ಬಳಿ ಹಣ ಉಳಿದಿರುವ ಪರಿಣಾಮ ಹಲವು ಜನರು ಬಡವರಾಗಿ ಪರದಾಡುತ್ತಿದ್ದಾರೆ. ಸ್ಥಿತಿ ಹೀಗಿದ್ದಾಗ ಏನೇನೋ ಕನಸು ಕಟ್ಟಿಕೊಂಡು ಅಮೆರಿಕದ ನೆಲಕ್ಕೆ ಹೋದವರು ಪರದಾಡುತ್ತಿದ್ದಾರೆ.

7 ಲಕ್ಷಕ್ಕೂ ಹೆಚ್ಚು ಭಾರತೀಯರು...
ಅಮೆರಿಕದಲ್ಲಿ ಜಗತ್ತಿನ ವಿವಿಧ ದೇಶಗಳಿಂದ ಹೋದ ಸುಮಾರು 6.4 ಮಿಲಿಯನ್ ಅಂದ್ರೆ 64 ಲಕ್ಷ ಅಕ್ರಮ ವಲಸಿಗರು ಇದ್ದು. ಈ ಪೈಕಿ 7,25,000 ಭಾರತೀಯರೇ ಸೇರಿದ್ದಾರೆಂದು ಹೊಸ ಅಧ್ಯಯನ ಹೇಳಿದೆ. ಈ ಮೂಲಕ ಅಮೆರಿಕದಲ್ಲಿ ಅಕ್ರಮವಾಗಿ ವಾಸ ಇರುವವರ ಪೈಕಿ ಭಾರತೀಯರು 3ನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ದಕ್ಷಿಣ ಭಾಗ ಅಂದರೆ ಮೆಕ್ಸಿಕೋ ಜೊತೆ ಗಡಿ ಹಂಚಿಕೊಂಡ ರಾಜ್ಯಗಳಿಂದ ಅಕ್ರಮ ವಲಸಿಗರು ದೇಶಕ್ಕೆ ಪ್ರವೇಶಿಸುತ್ತಿದ್ದಾರೆ. ಅದರಲ್ಲೂ ಗಡಿಯಲ್ಲಿ ಗೋಡೆ ಹಾರಿ ಬರುವವರೇ ಹೆಚ್ಚು.
ಬಡತನಕ್ಕೆ ಬೇಸತ್ತು ಪರಾರಿ
ಮೆಕ್ಸಿಕೋ ಸೇರಿ ದಕ್ಷಿಣ ಅಮೆರಿಕದ ಹತ್ತಾರು ದೇಶಗಳು ಬಡತನದ ಬೇಗೆಯಲ್ಲಿ ಬೆಂದಿವೆ. ಹೀಗಾಗಿ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಅವರೆಲ್ಲಾ ದೇಶ ಬಿಟ್ಟು ಓಡುತ್ತಿದ್ದಾರೆ. ಹೀಗೆ ತಮ್ಮ ಜೀವನ ಕಟ್ಟಿಕೊಳ್ಳಲು ಅವರಿಗೆ ಸಿಗುವ ಏಕೈಕ ಮಾರ್ಗ ಅಂದ್ರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ. ಹೀಗೆ ಯುಎಸ್‌ಗೆ ಸಾಗರದ ಅಲೆಗಳ ರೀತಿ ನುಗ್ಗುತ್ತಿರುವ ಜನಗಳು ಅಲ್ಲಿ ಬದುಕು ಕಟ್ಟಿಕೊಳ್ಳಲು ನೋಡುತ್ತಿದ್ದಾರೆ. ಆದರೆ ಅಕ್ರಮ ವಲಸಿಗರಾಗಿ ಹಲವರನ್ನ ಜೈಲಿಗೆ ತಳ್ಳಲಾಗಿದೆ. ಹೀಗೆ ಭಾರತದಿಂದ ಹೋದವರು ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ ಅಂತಿದೆ ಹೊಸ ಅಧ್ಯಯನ.
ಒಟ್ನಲ್ಲಿ ಅಮೆರಿಕ ಈಗ ಮೊದಲಿನ ಅಮೆರಿಕ ಆಗಿ ಉಳಿದಿಲ್ಲ. ಹೀಗಾಗಿ ಅಲ್ಲಿನ ಜನರಿಗೂ ಬದುಕು ಕಷ್ಟವಾಗುತ್ತಿದೆ ಹೀಗಿದ್ದಾಗಲೇ ಅಕ್ರಮ ವಲಸಿಗರ ಕಾಟ ಕೂಡ ಅಮೆರಿಕ ಸರ್ಕಾರ & ಅಲ್ಲಿನ ಸ್ಥಳೀಯ ಆಡಳಿತಕ್ಕೂ ದೊಡ್ಡ ತಲೆನೋವಾಗಿದೆ. ಹೀಗಾಗಿ ಪರಿಸ್ಥಿತಿ ನಿಭಾಯಿಸಿ ಅಕ್ರಮ ವಲಸಿಗರನ್ನ ಕಂಟ್ರೋಲ್ ಮಾಡುವುದು ಹರಸಾಹಸವಾಗಿದೆ.












Click it and Unblock the Notifications