ಯುರೋಪ್ ಸಂಸತ್‌ನಲ್ಲಿ ಸಿಎಎ ವಿರುದ್ಧದ ನಿರ್ಣಯದ ಚರ್ಚೆ

Recommended Video

      European parliament to debate on anti CAA motion | Europe | Parliament | CAA | Oneindia kannada

      ನವದೆಹಲಿ, ಜನವರಿ 29 : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ನಿರ್ಣಯಗಳ ಕುರಿತು ಯುರೋಪಿಯನ್ ಸಂಸತ್‌ನಲ್ಲಿ ಚರ್ಚೆ ನಡೆಯಲಿದೆ. ಸಿಎಎ ವಿರೋಧಿಸಿ ನಿರ್ಣಯ ಮಂಡನೆ ಮಾಡಿರುವುದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.

      ಯುರೋಪ್ ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಒಟ್ಟು 5 ನಿರ್ಣಯಗಳನ್ನು ಮಂಡಿಸಲಾಗಿದೆ. ಸಂಸತ್‌ನಲ್ಲಿ ಮೊದಲು ನಿರ್ಣಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಬಳಿಕ ಮತಕ್ಕೆ ಹಾಕಲಾಗುತ್ತದೆ.

      ಯುರೋಪಿಯನ್ ಸಂಸತ್‌ ಸದಸ್ಯರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ನಿರ್ಣಯಗಳನ್ನು ಮಂಡಿಸಿದ್ದಾರೆ. ಭಾರತ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಭಾರತದ ಆಂತರಿಕ ವಿಚಾರವಾಗಿದೆ ಎಂದು ಹೇಳಿದೆ.

      European Parliament To Debate On Anti CAA Motion

      ಯುರೋಪ್ ಸಂಸತ್‌ನಲ್ಲಿ 751 ಸದಸ್ಯರು ಇದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಮಾತ್ರವಲ್ಲದೇ ಕಾಶ್ಮೀರ ವಿಷಯದ ಕುರಿತ ನಿರ್ಣಯಗಳನ್ನು ಸಂಸತ್‌ನಲ್ಲಿ ಚರ್ಚಿಸಲು ಮಂಡಿಸಲಾಗಿದೆ. ಇಂದು ಸಂಸತ್‌ನಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

      ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಯುರೋಪ್ ಪಾರ್ಲಿಮೆಂಟ್ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಸಂಸತ್‌ನಲ್ಲಿ ನಿರ್ಣಯ ಮಂಡನೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಭಾರತದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ಪಾಸ್ ಆಗಿದೆ.

      ವಿಶ್ವಸಂಸ್ಥೆಯ ಆರ್ಟಿಕಲ್ 15ರ ಪ್ರಕಾರ ಮಾನವ ಹಕ್ಕುಗಳನ್ನು ಸಾರ್ವತ್ರಿಕ ಘೋಷಣೆಯಾಗಿಸಿರುವುದನ್ನು ಉಲ್ಲೇಖಿಸಿ ನಿರ್ಣಯ ಮಂಡನೆ ಮಾಡಲಾಗಿದೆ. ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಜೊತೆ ಮಾತುಕತೆ ನಡೆಸಬೇಕು, ಅವರ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

      ಭಾರತ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಇದು ದೇಶದ ಆಂತರಿಕ ವಿಚಾರ. ದೇಶದ ಸಂಸತ್ತಿನಲ್ಲಿ ವಿವರವಾದ ಚರ್ಚೆಯ್ನು ನಡೆಸಿದ ಬಳಿಕ ಪ್ರಜಾಪ್ರಭುತ್ವ ವಿಧಾನಗಳ ಮೂಲಕ ಶಾಸನವನ್ನು ಅಂಗೀಕರಿಸಲಾಗಿದೆ ಎಂದು ಹೇಳಿದೆ. ಉಭಯ ಸದನಗಳಲ್ಲಿ ಸಾರ್ವಜನಿಕ ಚರ್ಚೆಯ ನಂತರ ಈ ಶಾಸನವನ್ನು ಸರಿಯಾದ ಪ್ರಕ್ರಿಯೆಯಿಂದ ಮತ್ತು ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಅಂಗೀಕರಿಸಲಾಗಿದೆ ಎಂದೂ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+