Russia & Ukraine: ಉಕ್ರೇನ್ ಬೆನ್ನಿಗೆ ನಿಲ್ಲುತ್ತಿರುವ ಯುರೋಪ್ ದೇಶಗಳು?

ಉಕ್ರೇನ್ ಯುದ್ಧದ ನಂತರ ಯುರೋಪ್ ದೇಶಗಳಲ್ಲಿ ಸಂಚಲನ ಸೃಷ್ಟಿಯಾಗಿ ಒದ್ದಾಟವೂ ಹೆಚ್ಚಾಗಿದೆ. ಒಂದು ಕಡೆ ಚಳಿಯಲ್ಲಿ ಉಕ್ರೇನ್ ಜನರು ನರಳುವಾಗ, ಸರಿಯಾದ ವಿದ್ಯುತ್ ಸರಬರಾಜು ಸಿಗುತ್ತಿಲ್ಲ ಎಂಬ ಚಿಂತೆ ಶುರುವಾಗಿದೆ. ಮತ್ತೊಂದು ಕಡೆ ಉಕ್ರೇನ್ ಜನರಿಗೆ ಈ ಸಮಯದಲ್ಲಿ ಅನ್ನ & ನೀರು ಕೂಡ ಸಿಗ್ತಿಲ್ಲ. ಇಷ್ಟೆಲ್ಲದರ ಮಧ್ಯೆ ಉಕ್ರೇನ್ ಬೆನ್ನಿಗೆ ನಿಲ್ಲುತ್ತಿರುವ ಯುರೋಪ್ ದೇಶಗಳು? ಎಂಬ ಪ್ರಶ್ನೆ ಮೂಡಿದೆ.

ಯುರೋಪ್ ದೇಶಗಳು, ರಷ್ಯಾ & ಉಕ್ರೇನ್ ಯುದ್ಧದ ಆರಂಭದಲ್ಲಿ ಉಕ್ರೇನ್ ಬೆನ್ನಿಗೆ ನಿಂತು ಹೋರಾಟಕ್ಕೆ ಸಪೋರ್ಟ್ ಕೊಟ್ಟಿದ್ದವು. ಆದರೆ ಕೆಲವು ವರ್ಷಗಳಿಂದ ಈ ಯುದ್ಧದಲ್ಲಿ ಇದೇ ಯುರೋಪ್ ದೇಶಗಳು ಗ್ಯಾಪ್ ಇಟ್ಟುಕೊಂಡಿದ್ದವು. ಆದರೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಎಂಟ್ರಿಗೆ ಮೊದಲೇ ಹೊಸ ತಲ್ಲಣ ಎದ್ದಿದೆ. ಯುರೋಪ್ ದೇಶಗಳು ಈಗ ಉಕ್ರೇನ್ ಬೆನ್ನಿಗೆ ನಿಂತು, ರಷ್ಯಾ ವಿರುದ್ಧದ ಹೋರಾಟಕ್ಕೆ ತಮ್ಮದೇ ಸಹಾಯ ಮಾಡುತ್ತಿವೆಯಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

European Countries Supporting Ukraine A Comprehensive Overview

3 ವರ್ಷಕ್ಕೆ ಯುದ್ಧ ಮುಗಿಯುತ್ತಾ?

ಮುಂದಿನ ತಿಂಗಳಿಗೆ ಅಂದ್ರೆ ಫೆಬ್ರವರಿಗೆ 3 ವರ್ಷ ಪೂರೈಸಲಿದೆ ರಷ್ಯಾ & ಉಕ್ರೇನ್ ಯುದ್ಧ. ಇದೇ ಸಮಯದಲ್ಲಿ ಹೊಸ ಆಶಾಭಾವನೆ ಕೂಡ ಇದೀಗ ಶುರುವಾಗಿದ್ದು, ಯುದ್ಧ ನಿಲ್ಲುತ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಉಕ್ರೇನ್ ಜನರು ಕಳೆದ 3 ವರ್ಷಗಳ ಕಾಲ ನರಳಾಡಿದ್ದು, ಏನು ಮಾಡಬೇಕು ಎಂಬ ಒದ್ದಾಟದಲ್ಲಿ ಇದ್ದರು. ಇಷ್ಟೆಲ್ಲದರ ನಡುವೆ ಹೊಸ ಮನ್ವಂತರ ಎದುರಾಗುವ ನಿರೀಕ್ಷೆ ಉಕ್ರೇನ್ ಜನರಲ್ಲಿ ಮೂಡಿದೆ. ಇದೇ ಸಮಯದಲ್ಲಿ ಯುರೋಪ್‌ನ ದೇಶಗಳು ಉಕ್ರೇನ್ ಜೊತೆಗೆ ಮಾತುಕತೆಗೆ ಆಗಮಿಸುತ್ತಿವೆ.

ರಷ್ಯಾ ಉತ್ಪನ್ನ ಇಲ್ಲದೆ ಒದ್ದಾಟ

ಒಟ್ನಲ್ಲಿ ಬೀದಿ ಬೀದಿಯಲ್ಲಿ ಬಡಿದಾಡುತ್ತಾ ರಷ್ಯಾ & ಉಕ್ರೇನ್ ಸೇನೆಗಳು ಸರ್ವನಾಶಕ್ಕೆ ಸಜ್ಜಾಗಿ ನಿಂತ ರೀತಿ ಕಾಣುತ್ತಿದೆ. ರಷ್ಯಾ & ಉಕ್ರೇನ್ ಮಧ್ಯೆ ಹೀಗೆ ಯುದ್ಧ ನಡೆಯುತ್ತಿದ್ದರೆ, ಮತ್ತೊಂದು ಕಡೆ ಯುರೋಪ್ ವಿಲವಿಲ ಒದ್ದಾಡುತ್ತಿದೆ. ಅದರಲ್ಲೂ ರಷ್ಯಾ ಕಡೆಯಿಂದ ಬರುತ್ತಿದ್ದ ಎಲ್ಲ ಉತ್ಪನ್ನಗಳು ನಿಂತು ಹೋಗಿ ಹಲವು ವರ್ಷಗಳೇ ಕಳೆದಿವೆ. ಹೀಗಾಗಿ ಚಿಂತೆ ಕೂಡ ಹೆಚ್ಚಾಗಿದ್ದು, ಮುಂದೆ ಈ ಯುದ್ಧ ದೊಡ್ಡ ತಿರುವು ಪಡೆಯುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+