ಕ್ಯಾನ್ಸರ್ ನಿಂದ ಸತ್ತ 14ರ ಬಾಲಕಿಯ ದೇಹ ಇನ್ನೂ 'ಜೀವಂತ'!

Posted By:
Subscribe to Oneindia Kannada

ಲಂಡನ್, ನವೆಂಬರ್ 19: ತೀರಾ ಸಣ್ಣ-ಪುಟ್ಟ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಸುದ್ದಿ ಎಷ್ಟೋ ಕೇಳಿರ್ತೀವಿ. ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬರುವವರಿಗೆ ಜೀವ ಹಾಗೂ ಜೀವನದ ಬೆಲೆ ತಿಳಿಸೋದು ಹೇಗೆ? ಇಲ್ಲೊಂದು ಉದಾಹರಣೆ ಇದೆ. ಇದನ್ನು ಓದಿದ ನಂತರ ಜೀವದ ಬಗ್ಗೆ ಯಾವ ಪರಿಯ ಪ್ರೀತಿ ಇರೋರು ಇರ್ತಾರೆ ಅನ್ನೋದು ಖಂಡಿತಾ ಅರ್ಥವಾಗುತ್ತದೆ.

ಲಂಡನ್ ನ ಹದಿಹರೆಯದ ಆ ಹೆಣ್ಣುಮಗಳಿಗೆ ಕ್ಯಾನ್ಸರ್. ತಾನಿನ್ನು ಬದುಕೋದಿಲ್ಲ ಅನ್ನೋದು ಕೂಡ ಆಕೆಗೆ ಖಾತ್ರಿಯಾಗಿ ಹೋಗುತ್ತೆ. ಆದರೆ ಸಣ್ಣ ನಿರೀಕ್ಷೆ. ತಾನು ಸತ್ತ ನಂತರ ದೇಹವನ್ನು ಹಾಗೆ ಕಾಯ್ದಿಟ್ಟು, ಮುಂದೆ ಒಂದು ದಿನ ತನ್ನ ಕಾಯಿಲೆಗೆ ಔಷಧಿ ಕಂಡುಹಿಡಿದು ಸಾವಿನಿಂದ ಆಚೆ ಕರೆದುಕೊಂಡು ಬರಬಹುದು ಅಂತ.[ಅಂತ್ಯ ಸಂಸ್ಕಾರದ ವೇಳೆಯೂ ಸದ್ದು ಮಾಡಿದ ನೋಟು ರದ್ದು]

Cancer

ಅದಕ್ಕಾಗಿ ಆಕೆ ಕೋರ್ಟ್ ಮೊರೆ ಹೋಗ್ತಾಳೆ. ನೆರವಿಗೆ ಕೋರ್ಟ್ ಕೂಡ ಬಂದಿದ್ದು, ಆಕೆಯ ಕೋರಿಕೆ ಪ್ರಕಾರವೇ ಸಾವಿನ ನಂತರ ದೇಹ ಹೂಳದಂತೆ ಕಾಪಾಡಿಕೊಳ್ಳಲು ಸೂಚನೆ ನೀಡಿದೆ. 'ನನಗೆ ಬಹಳ ಬಹಳ ವರ್ಷ ಬದುಕಬೇಕು ಅನ್ನೋ ಆಸೆ. ನನಗಿರುವ ಕ್ಯಾನ್ಸರ್ ಕಾಯಿಲೆಗೆ ಭವಿಷ್ಯದಲ್ಲಿ ಔಷಧಿ ಕಂಡುಹಿಡಿಯಬಹುದು. ಅಗ ನನ್ನನ್ನು ಮತ್ತೆ ಎಚ್ಚರಿಸಲಿ' ಎಂದು ಹದಿನಾಲ್ಕು ವರ್ಷದ ಆ ಹುಡುಗಿ ತನ್ನ ಸಾವಿಗೂ ಮುನ್ನ ಬ್ರಿಟಿಷ್ ಜಡ್ಜ್ ಗೆ ಪತ್ರ ಬರೆದಿದ್ದಾಳೆ.

ನನ್ನ ದೇಹವನ್ನು ಕಾಪಾಡಿಕೊಂಡರೆ ನನಗೊಂದು ಅವಕಾಶ ಸಿಕ್ಕಹಾಗೆ. ಈ ಕಾಯಿಲೆ ಗುಣ ಮಾಡುವ ಕಾಲ ಬರಬಹುದು. ಮತ್ತೆ ಎದ್ದು ಬರಬಹುದು-ಅದಿನ್ನೂ ನೂರಾರು ವರ್ಷಗಳ ನಂತರವಾದರೂ ಪರವಾಗಿಲ್ಲ ಎಂದು ಹುಡುಗಿ ಹೇಳಿದ್ದಾಳೆ. ಆಕೆಯ ಮಾತುಗಳು ನ್ಯಾಯಾಧೀಶರಾದ ಪೀಟರ್ ಜಾಕ್ಸನ್ ಅವರ ಮನಸ್ಸು ಕರಗುವಂತೆ ಮಾಡಿದೆ.[ಮೃತ ಪತ್ನಿಯನ್ನು ತಳ್ಳುಗಾಡಿಯಲ್ಲಿಟ್ಟು 60 ಕಿಮೀ ನಡೆದ ಪತಿ]

ಇದು ಇಂಗ್ಲೆಂಡ್ ನಲ್ಲೇ ಅಲ್ಲ, ಜಗತ್ತಿನಲ್ಲೇ ಅಪರೂಪದ ಪ್ರಕರಣ. ಆಕೆಯ ಕೊನೆಯಾಸೆ ನೆರವೇರಿಸಿ ಎಂದು ನ್ಯಾಯಾಧೀಶರೇ ಹೇಳಿದ್ದಾರೆ. ತುಂಬ ಸಂಶೋಧನೆಗಳ ನಂತರ ಆ ಹುಡುಗಿ ಆಯ್ದುಕೊಂಡಿರುವುದು ದೇಹ ಕಾಯ್ದಿಡುವ ಪ್ರಾಥಮಿಕ ಮಟ್ಟದ ಆಯ್ಕೆಯನ್ನು. ಅದಕ್ಕಾಗಿ ಮೂವತ್ತೇಳು ಸಾವಿರ ಪೌಂಡ್ ಖರ್ಚಾಗುತ್ತದೆ. ಅಂದರೆ ರುಪಾಯಿ ಲೆಕ್ಕದಲ್ಲಿ 31 ಲಕ್ಷ.

ವಾಸಿಯಾಗದ ಕಾಯಿಲೆಗಳಿಂದ ಮೃತಪಟ್ಟವರ ದೇಹಕ್ಕೆ ಭವಿಷ್ಯದಲ್ಲಿ ಜೀವ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಕ್ರಯೋಜನಿಕ್ ವಿಧಾನದಲ್ಲಿ ದೇಹವನ್ನು ಹಾಗೇ ಇಡಲಾಗುತ್ತದೆ. ಆ ಹುಡುಗಿಯ ವಿಚ್ಛೇದಿತ ಪೋಷಕರು ಮೊದಲಿಗೆ ಇದಕ್ಕೆ ಒಪ್ಪಿಲ್ಲ. ಆಕೆಯ ತಂದೆ ಬೇಡ ಅಂತಲೇ ಹೇಳಿದ್ದಾರೆ. ಆದರೆ ಹುಡುಗಿಯ ಸಾವಿನ ದಿನಗಳು ಹತ್ತಿರವಾಗುತ್ತಿದ್ದಂತೆ ಆತ ಮೆತ್ತಗಾಗಿದ್ದಾರೆ.[ಹಾವು ಕಡಿದು ಮಗಳು, ಹೃದಯಾಘಾತದಿಂದ ತಾಯಿ ಸಾವು]

ತಜ್ಞರಾದ ಬ್ಯಾರಿ ಫುಲ್ಲರ್, ಇಡೀ ಮಾನವ ದೇಹ ಕಯೋಜನಿಕ್ ವಿಧಾನದಲ್ಲಿ ಕಾಪಾಡಬಹುದು ಅನ್ನೋದಿಕ್ಕೆ ಯಾವುದೇ ಸಾಕ್ಷಿ ಇಲ್ಲ. ಎಲ್ಲ ಜೀವಕೋಶಗಳು ಭವಿಷ್ಯದಲ್ಲಿ ಮತ್ತೆ ಕೆಲಸ ಮಾಡಬಹುದು ಅನ್ನೋದಿಕ್ಕೆ ಖಾತ್ರಿ ಇಲ್ಲ. ಸದ್ಯಕ್ಕೆ ಟ್ರಾನ್ಸ್ ಪ್ಲಾಂಟೇಷನ್ ಗಳಿಗೆ ಇದೇ ವಿಧಾನ ಅನುಸರಿಸ್ತಿದೀವಿ ಎಂದಿದ್ದಾರೆ.

ಇನ್ನು ಹುಡುಗಿಯ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಇದು ಹೊಸ ಬಗೆಯ ಪ್ರಕರಣ. ಬೆಳೆಯುತ್ತಿರುವ ವಿಜ್ಞಾನದಿಂದ ಕಾನೂನು ಎದುರಿಸುತ್ತಿರುವ ಪ್ರಶ್ನೆಯಿದು ಎಂದಿದ್ದಾರೆ. ಕಡೆಗೆ ಹುಡುಗಿಯ ಬೇಡಿಕೆಗೆ ಒಪ್ಪಿಕೊಂಡಿದ್ದರಿಂದ ಆ ಹೆಣ್ಣುಮಗಳು, 'ಅವರು ಹೀರೋ' ಎಂದು ತನ್ನ ವಕೀಲರಿಗೆ ಹೇಳಿ ಖುಷಿಪಟ್ಟಿದ್ದಾಳೆ. ಅದೂ ಆ ಹುಡುಗಿ ಉಸಿರು ಚೆಲ್ಲುವ ಆರು ದಿನದ ಹಿಂದೆ.[ಹೃದಯವಂತಿಕೆ ಮೆರೆದ ಟ್ರಾಫಿಕ್ ಪೊಲೀಸ್ ಕುಮಾರ್]

ತೀರಾ ಆರೋಗ್ಯ ಸರಿಯಿಲ್ಲದ ಆಕೆಯನ್ನು ನ್ಯಾಯಾಧೀಶರು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ತನ್ನನ್ನು ಹೂಳಬೇಡಿ ಎಂದು ಮನವಿ ಸಲ್ಲಿಸಿದ ಆಕೆ, ದೇಹ ಕಾಪಾಡುವಂಥ ಕ್ರಯೋಜನಿಕ್ ವಿಧಾನದ ಬಗ್ಗೆ ಇಂಟರ್ ನೆಟ್ ನಲ್ಲಿ ಎಲ್ಲ ಮಾಹಿತಿ ಕಲೆ ಹಾಕಿದ್ದಾಳೆ. ಅದನ್ನು ಕಂಡು ನಾಯಾಧೀಶ ಜಾಕ್ಸನ್, ಆ ಹುಡುಗಿಯ ಜೀವನ ಪ್ರೀತಿಗೆ ಕರಗಿಹೋಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In London, England the teenager's instructions were direct: she didn't want to be buried, but to be frozen — with the hope that she can continue her life in the future when cancer is cured.
Please Wait while comments are loading...