ಉರಿಯುವ ಬೆಂಕಿಗೆ ತುಪ್ಪ ಸುರಿದ ಖಲಿಸ್ತಾನಿ ಗ್ಯಾಂಗ್ ನಾಯಕ!
ಇಸ್ರೇಲ್ ಮತ್ತು ಹಮಾಸ್ ಉಗ್ರರು ಬಡಿದಾಡುತ್ತಿರುವ ಸಮಯದಲ್ಲೇ ಖಲಿಸ್ತಾನಿ ಗ್ಯಾಂಗ್‌ನ ಲೀಡರ್ಸ್ ಭಾರತದ ವಿರುದ್ಧ ಸೇಡಿಗೆ ನಿಂತಿದ್ದಾರೆ. ಈ ಪೈಕಿ ಖಲಿಸ್ತಾನಿಗಳಲ್ಲೇ ಮೋಸ್ಟ್ ವಾಂಟೆಡ್ ಉಗ್ರನಾಗಿರುವ ಗುರ್ಪತ್ವಂತ್ ಸಿಂಗ್ ಪನ್ನು, ಭಾರತದ ವಿರುದ್ಧ ಹಮಾಸ್‌ನ ಗ್ಯಾಂಗ್ ಎತ್ತಿ ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾನೆ. ಹಾಗಾದ್ರೆ ಆಗಿದ್ದು ಏನು? ಮೋಸ್ಟ್ ವಾಂಟೆಡ್ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನು ಹೇಳಿದ್ದು ಏನು?
ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಇಸ್ರೇಲ್ ಕೂಡ ಇದೀಗ ಹಮಾಸ್ ವಿರುದ್ಧ ಭೀಕರ ದಾಳಿ ನಡೆಸುತ್ತಿದೆ. ಆದರೆ ಇದೇ ಸಮಯದಲ್ಲಿ ಖಲಿಸ್ತಾನಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಭಾರತ ಈಗ ಇಸ್ರೇಲ್ ಪರವಾಗಿ ಧ್ವನಿ ಎತ್ತಿರುವ ಹಿನ್ನೆಲೆ, ನಿಷೇಧಿತ ಸಂಘಟನೆ 'ಸಿಖ್ಸ್ ಫಾರ್ ಜಸ್ಟಿಸ್' ನಾಯಕ ಗುರ್ಪತ್ವಂತ್ ಸಿಂಗ್ ಪನ್ನು ಹಮಾಸ್ ಉಗ್ರರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಮುಂದಾಗಿದ್ದಾನೆ. ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿರುವ ಪನ್ನು, ಬೆಂಕಿ ಹಚ್ಚಲು ಮುಂದಾಗಿರುವ ಆರೋಪ ಈಗ ಕೇಳಿಬಂದಿದೆ.

ಭಾರತದ ಕಚೇರಿಗಳೇ ಖಲಿಸ್ತಾನಿಗಳ ಟಾರ್ಗೆಟ್!
ಇನ್ನು ಇಸ್ರೇಲ್ ಮತ್ತು ಹಮಾಸ್ ಕಿತ್ತಾಟದ ನಡುವೆ ಪ್ಯಾಲೆಸ್ತೀನ್‌ನ ರಮಲ್ಲಾದಲ್ಲಿ ಇರುವ ಭಾರತದ ಪ್ರತಿನಿಧಿ ಕಚೇರಿಯನ್ನು, ಬಲವಂತವಾಗಿ ಮುಚ್ಚಲು ಪ್ಯಾಲೆಸ್ತೀನ್ ಜನರಿಗೆ ಪನ್ನು ಕರೆ ನೀಡಿದ್ದಾನೆ. ಈ ಪ್ರಚೋದನಕಾರಿ ಹೇಳಿಕೆ ಆತಂಕವನ್ನ ಹುಟ್ಟುಹಾಕಿದೆ. ಅಲ್ಲದೆ ಜಿ-7 ದೇಶಗಳಲ್ಲಿ ಇರುವ ಭಾರತೀಯ ಪ್ರತಿನಿಧಿ ಕಚೇರಿಗಳನ್ನೂ ಅಕ್ಟೋಬರ್ 21ಕ್ಕೆ ಮುಚ್ಚಿಸುವ ಬೆದರಿಕೆ ಹಾಕಿದ್ದನು ಈ ಪನ್ನು. ಈಗ ಇಸ್ರೇಲ್ & ಹಮಾಸ್ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಮೂಲಕ ಭಾರತದ ಜೊತೆಗೆ ಕಿರಿಕ್ ಮಾಡಲು ರೆಡಿಯಾಗಿದ್ದಾನೆ.
SFJ's Gurpatwant Pannu incites Palestinians to shutdown India's Representative Office in Ramallah.
— Megh Updates 🚨™ (@MeghUpdates) October 12, 2023
Threatens to shutdown down Indian Representative Offices in G7 countries on 21st October. pic.twitter.com/a7uTLiEOJV
ಭಾರತದ ವಿರುದ್ಧ ದಾಳಿಯ ಬೆದರಿಕೆ
ಹಾಗೆ ಮೊನ್ನೆ ಮೊನ್ನೆಯಷ್ಟೇ ಇದೇ ಗುರ್ಪತ್ವಂತ್ ಸಿಂಗ್, ಹಮಾಸ್ ಉಗ್ರರ ರೀತಿ ಭಾರತದ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ್ದ. ಪಂಜಾಬ್ ಮೇಲೆ ಭಾರತದ ಸರ್ಕಾರ ಅಧಿಪತ್ಯ ಮುಂದುವರಿಸಿದರೆ, ಇಸ್ರೇಲ್ ಮೇಲೆ ನಡೆದ ಹಮಾಸ್ ಉಗ್ರರ ದಾಳಿ ಮಾದರಿಯಲ್ಲೇ ಭಾರತದ ಮೇಲೂ ದಾಳಿ ಮಾಡ್ತೀವಿ ಎಂದಿದ್ದ. ಈಗ ನೋಡಿದರೆ ಮತ್ತೊಂದು ರೀತಿ ಬೆಂಕಿ ಹಚ್ಚಲು ಮುಂದಾಗಿದ್ದಾನೆ.
ಗುರ್ಪತ್ವಂತ್ ಸಿಂಗ್ ಪನ್ನು ನೀಡಿದ ಹೇಳಿಕೆ ಭಾರತ & ಭಾರತೀಯರ ಕೋಪ ಹೆಚ್ಚಿಸಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಒಟ್ನಲ್ಲಿ ಖಲಿಸ್ತಾನಿ ಗ್ಯಾಂಗ್‌ನ ಬುದ್ಧಿ ಸರಿ ಹೋಗಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಕೆನಡಾದಲ್ಲಿ ಕಿರಿಕ್ ಮಾಡುತ್ತಿದ್ದ ಖಲಿಸ್ತಾನಿಗಳು ಈಗ ಜಗತ್ತಿನಾದ್ಯಂತ ಭಾರತದ ವಿರುದ್ಧ ಷಡ್ಯಂತ್ರ ರೂಪಿಸಿರುವ ರೀತಿಯೇ ಕಾಣುತ್ತಿದೆ. ಹೀಗಾಗಿ ಭಾರತ ಕೂಡ ಖಲಿಸ್ತಾನಿಗಳ ವಿಚಾರದಲ್ಲಿ ಮತ್ತಷ್ಟು ಕಠಿಣವಾಗ್ತಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications