Get Updates
Get notified of breaking news, exclusive insights, and must-see stories!

Breaking: 53 ಜೀವಗಳನ್ನು ಬಲಿ ಪಡೆದ ಅಫ್ಘಾನ್ ಆತ್ಮಾಹುತಿ ಬಾಂಬ್ ದಾಳಿ

ಕಾಬೂಲ್, ಅಕ್ಟೋಬರ್ 03: ಅಫ್ಘಾನಿಸ್ತಾನ ರಾಜಧಾನಿಯ ಶೈಕ್ಷಣಿಕ ಕೇಂದ್ರದಲ್ಲಿ ಕಳೆದ ವಾರ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. "53 ಮಂದಿ ಮೃತರಲ್ಲಿ ಕನಿಷ್ಠ 46 ಹುಡುಗಿಯರು ಮತ್ತು ಮಹಿಳೆಯರಿದ್ದಾರೆ," ಎಂದು ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ ಮಿಷನ್ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಶುಕ್ರವಾರ ನಡೆದ ಬಾಂಬ್ ದಾಳಿಯಲ್ಲಿ ಇನ್ನೂ 110 ಜನರು ಗಾಯಗೊಂಡಿದ್ದಾರೆ. ಶುಕ್ರವಾರ ಕಾಬೂಲ್‌ನ ಪಕ್ಕದಲ್ಲಿರುವ ಸ್ಟಡಿ ಹಾಲ್‌ನಲ್ಲಿ ಆತ್ಮಾಹುತಿ ಬಾಂಬರ್ ಒಬ್ಬರು ಮಹಿಳೆಯ ಪಕ್ಕದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಘಟನೆ ನಡೆಯಿತು. ಈ ವೇಳೆ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪರೀಕ್ಷೆಗಾಗಿ ನೂರಾರು ವಿದ್ಯಾರ್ಥಿಗಳು ಕುಳಿತಿದ್ದರು.

ಈ ದಾಳಿಯ ಹೊಣೆಯನ್ನು ಇದುವರೆವಿಗೂ ಯಾವುದೇ ಸಂಘಟನೆಯು ಹೊತ್ತುಕೊಂಡಿಲ್ಲ, ಆದರೆ ಶಿಯಾಗಳನ್ನು ಧರ್ಮದ್ರೋಹಿಗಳೆಂದು ಪರಿಗಣಿಸುವ ಉಗ್ರಗಾಮಿ ಇಸ್ಲಾಮಿಕ್ ಸ್ಟೇಟ್ ಗುಂಪು (ಐಎಸ್) ಈ ಪ್ರದೇಶದಲ್ಲಿ ಹುಡುಗಿಯರು, ಶಾಲೆಗಳು ಮತ್ತು ಮಸೀದಿಗಳನ್ನು ಗುರಿಯಾಗಿಸಿಕೊಂಡು ಹಲವಾರು ಬಾರಿ ಮಾರಣಾಂತಿಕ ದಾಳಿಗಳನ್ನು ನಡೆಸಿರುವುದನ್ನು ಇಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ.

ಅಫ್ಘಾನಿಸ್ತಾನದಲ್ಲಿ ಹದಗೆಟ್ಟ ಭದ್ರತೆ:

ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿತು. ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರದ ವಿರುದ್ಧ ಎರಡು ದಶಕಗಳ ಯುದ್ಧವು ಅಂದಿಗೆ ಕೊನೆ ಆಯಯಿತು. ಈ ವೇಳೆ ಹಂತದಲ್ಲಿ ಹಿಂಸಾಚಾರವು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಆಯಿತು, ಆದರೆ ಇತ್ತೀಚಿನ ತಿಂಗಳುಗಳಲ್ಲಿ ಭದ್ರತೆಯು ಹದಗೆಡಲು ಪ್ರಾರಂಭಿಸಿದೆ. ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಖಟ್ಟರ್ ವಾದಿಗಳು, ತಮ್ಮ ಆಡಳಿತಕ್ಕೆ ಸವಾಲು ಹಾಕಲು ದಾಳಿಗಳಿಗೆ ಕಡಿವಾಣ ಹಾಕಬೇಕಿದೆ.

Death number rises to 53 in Afghanistan classroom bombing

ಕಾಬೂಲ್ ನೆರೆ ಹೊರೆ ನಗರಗಳಲ್ಲಿ ಮಹಿಳೆಯರ ಹೋರಾಟ:

ಶುಕ್ರವಾರದ ದಾಳಿಯನ್ನು ಖಂಡಿಸಿ ಕಾಬೂಲ್ ಮತ್ತು ಇತರ ಕೆಲವು ನಗರಗಳಲ್ಲಿ ಮಹಿಳೆಯರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಇದೇ ಶನಿವಾರ ಮೆರವಣಿಗೆ ನಡೆಸುತ್ತಿದ್ದ ಸುಮಾರು 50 ಮಹಿಳೆಯರು, "ಹಜಾರಾ ನರಮೇಧ ನಿಲ್ಲಿಸಿ, ಶಿಯಾ ಆಗಿರುವುದು ಅಪರಾಧವಲ್ಲ" ಎಂದು ಘೋಷಣೆ ಕೂಗಿದರು. ಈ ಸಂದರ್ಭಬದಲ್ಲಿ ತಾಲಿಬಾನ್ ಪಡೆಗಳು ಆಗಾಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹಾಗೂ ಪ್ರತಿಭಟನಾಕಾರರನ್ನು ಥಳಿಸುವ ಮೂಲಕ ಮೆರವಣಿಗೆಗಳನ್ನು ಚದುರಿಸಿದರು.

ಈ ಹಿಂದೆ ನಡೆದ ದಾಳಿಯಲ್ಲಿ 85 ಮಂದಿ ಸಾವು:

ಬಹುಸಂಖ್ಯಾತ ಸುನ್ನಿ ಮುಸ್ಲಿಮರ ಮೂಲಕ ದೇಶದಲ್ಲಿ ಅಫ್ಘಾನಿಸ್ತಾನದ ಹಜಾರಾಗಳು ನಿಯಮಿತವಾಗಿ ದಾಳಿಗಳನ್ನು ಎದುರಿಸುತ್ತಿದ್ದಾರೆ. ಅವರು ದಶಕಗಳಿಂದ ಕಿರುಕುಳವನ್ನು ಎದುರಿಸಿದ್ದಾರೆ, ಹಿಂದಿನ ಯುಎಸ್ ಬೆಂಬಲಿತ ಸರ್ಕಾರ ಮತ್ತು ಐಎಸ್ ವಿರುದ್ಧದ ದಂಗೆಯ ಸಮಯದಲ್ಲಿ ತಾಲಿಬಾನ್‌ನಿಂದ ಗುರಿಯಾಗಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳುವ ಮೊದಲು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 85 ಮಂದಿ ಮೃತಪಟ್ಟಿದ್ದು, 300 ಮಂದಿ ಗಾಯಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+