ವಿಡಿಯೋ; ಕೊರೊನಾ ರೋಗಿಗಳ ಮುಂದೆ ಡ್ಯಾನ್ಸ್ ಮಾಡಿದ ಇರಾನ್ ವೈದ್ಯರು

ಟೆಹರಾನ್, ಮಾರ್ಚ್ 4: ಜಗತ್ತಿನಾದ್ಯಂತ ತೀವ್ರ ತಲ್ಲಣ ಸೃಷ್ಠಿಸಿರುವ ಕೊರೊನಾ ವೈರಸ್ (ಕೋವಿಡ್ 19) ಆರವತ್ತಕ್ಕೂ ಹೆಚ್ಚು ದೇಶಗಳನ್ನು ನಡುಗಿಸುತ್ತಿದೆ. ಚೀನಾದಲ್ಲಿ ಸೋಂಕು ಪತ್ತೆ ಪ್ರಕರಣ ಇಳಿದಿದ್ದರೆ, ಇತ್ತ ವಿವಿಧ ದೇಶಗಳಲ್ಲಿ ಹೆಚ್ಚುತ್ತಿವೆ.

ಚೀನಾ ನಂತರ ಕೊರೊನಾ ವೈರಸ್‌ಗೆ ಮಧ್ಯಪ್ರಾಚ್ಯ ದೇಶವಾದ ಇರಾನ್ ಹೆಚ್ಚು ತುತ್ತಾಗಿದೆ. ಅಲ್ಲಿನ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಶುಕ್ರವಾರದವರೆಗೆ ಒಟ್ಟು 107 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರೆ, 3300 ಜನಕ್ಕೆ ಸೋಂಕು ತಗುಲಿದೆ ಎಂದು ವರದಿಗಳು ಹೇಳಿವೆ.

ಇರಾನ್‌ನಲ್ಲಿ ಕೊರೊನಾ ಇಷ್ಟೊಂದು ತಲ್ಲಣ ಸೃಷ್ಟಿಸಿದ್ದರೇ, ಆ ದೇಶದ ವೈದ್ಯರು ರೋಗಿಗಳಿಗೆ ಸ್ಪೂರ್ತಿ ತುಂಬಲು ಮಾಡಿರುವ ಕೆಲಸ ಮಾದರಿಯಾಗಿದೆ. ದೇಶದಲ್ಲಿ 25 ಕೊರೊನಾ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದ್ದು, ಸುಮಾರು 10 ಸಾವಿರ ವೈದ್ಯರು ಹಗಲು ರಾತ್ರಿ ರೋಗಿಗಳ ಮೇಲೆ ನಿಗಾ ಇಟ್ಟಿದ್ದಾರೆ. ರೋಗಿಗಳಿಗೆ ಜೀವನ ಸ್ಪೂರ್ತಿ ಮೆರೆಯಲು ಆಸ್ಪತ್ರೆಯಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

50 ವೈದ್ಯರು ನೃತ್ಯ

ಕೊರೊನಾ ಸೋಂಕಿತರ ಚಿಕಿತ್ಸೆಗೆ ತೆರೆಯಲಾಗಿರುವ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಸುಮಾರು 50 ವೈದ್ಯರು ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದಕ್ಕೆ ಟ್ವಿಟ್ಟರ್‌ನಲ್ಲಿ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿದೆ. ಹಾಗೆಯೇ ಟಿಕೇಗಳೂ ಕೂಡ ಬಂದಿವೆ. ರೋಗಿಗಳು ಸಾಯುತ್ತಿದ್ದರೇ ವೈದ್ಯರು ಡ್ಯಾನ್ಸ್ ಮಾಡುವುದು ಏನಿತ್ತು? ಎಂದು ಟೀಕಿಸಿದ್ದಾರೆ.

ಇರಾನ್ ಪ್ರಧಾನಿ ಹಸನ್ ರೋಹಾನಿ

ಇರಾನ್ ಪ್ರಧಾನಿ ಹಸನ್ ರೋಹಾನಿ

ಕೊರೊನಾ ವೈರಸ್ ಸೋಂಕಿತರ ಸಾವು ದಿನದಿಂದ ದಿನಕ್ಕೆ ಇರಾನ್‌ನಲ್ಲಿ ಹೆಚ್ಚುತ್ತಿದೆ. ಸೋಂಕಿತರ ಪ್ರಮಾಣವೂ ಹೆಚ್ಚಾಗುತ್ತಿದೆ. ಆದರೆ ಇರಾನ್ ಪ್ರಧಾನಿ ಹಸನ್ ರೋಹಾನಿ ಅವರು ಕೊರೊನಾ ಬಗ್ಗೆ ಸತ್ಯಗಳನ್ನು ಮರೆಮಾಚುತ್ತಿದ್ದಾರೆ ಎಂದು ಹಲವರು ಆರೋಪಿಸುತ್ತಿದ್ದಾರೆ. 200 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ, ಸಾವಿರಾರು ಜನ ಸೋಂಕಿತರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಅಮೆರಿಕ ನೆರವು

ಅಮೆರಿಕ ನೆರವು

ಇನ್ನೊಂದೆಡೆ ಅಮೆರಿಕದ ವೈರತ್ವ ಕಟ್ಟಿಕೊಂಡಿರುವ ಇರಾನ್‌ ಗೆ ಕೊರೊನಾ ಹತ್ತಿಕ್ಕಲು ಎಲ್ಲ ನೆರವು ನೀಡುವುದಾಗಿ ಅಮೆರಿಕ ಹೇಳಿದೆ. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರಿಂದ ಇರಾನ್ ತೀವ್ರ ಸಂಕಷ್ಟಕ್ಕೆ ಇಡಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಇರಾನ್‌ಗೆ ಅಭಯಹಸ್ತ ನೀಡಿದ್ದಾರೆ.

54 ಸಾವಿರ ಕೈದಿಗಳ ಬಿಡುಗಡೆ

54 ಸಾವಿರ ಕೈದಿಗಳ ಬಿಡುಗಡೆ

ಇರಾನ್‌ನ ವಿವಿಧ ಜೈಲಿನಲ್ಲಿ ಇರುವ 5 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾಗಿ ಜೈಲು ಸೇರಿರುವ 54 ಸಾವಿರ ಕೈದಿಗಳನ್ನು ತಪಾಸಣೆ ಮಾಡಿ, ಜೈಲಿನಿಂದ ಬಿಡುಗಡೆ ಮಾಡಲಾಗುತ್ತಿದೆ. ಈ ಬಿಡುಗಡೆ ಕೇವಲ ತಾತ್ಕಾಲಿಕ ಎಂದು ಸಹ ಹೇಳಿದೆ. ಇರಾನ್‌ ಜೈಲಿನಲ್ಲಿ ಕೈದಿಗಳು ಕಿಕ್ಕಿರಿದು ತುಂಬಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಂಡಿದೆ ಎಂದು ಅಲ್ಲಿನ ಸರ್ಕಾರ ಬಿಬಿಸಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+