ಡೆಡ್ಲಿ ಕೊರೊನಾ; 1500 ರ ಗಡಿ ದಾಟಿದ ಸಾವಿನ ಸಂಖ್ಯೆ

ಬಿಜಿಂಗ್, ಫೆಬ್ರವರಿ 14: ಚೀನಾದಲ್ಲಿ ತೀವ್ರ ತಲ್ಲಣ ಸೃಷ್ಠಿಸಿರುವ ಕೊರೊನಾದಿಂದ (ಕೋವಿದ್19) ಮೃತಪಟ್ಟವರ ಸಂಖ್ಯೆ ಶುಕ್ರವಾರಕ್ಕೆ 1500ರ ಗಡಿ ದಾಟಿದೆ. ಸುಮಾರು 69 ಸಾವಿರ ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಚೀನಾ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಶುಕ್ರವಾರ ಒಂದೇ ದಿನ 3900 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಲಾಗಿದೆ. ಅವರಲ್ಲಿ 138 ಜನರ ಸ್ಥಿತಿ ಗಂಭೀರವಾಗಿದ್ದು, ಸಾವುನೋವಿನ ಸಂಖ್ಯೆಗಳು ಹೆಚ್ಚಾಗುವ ಸಂಭವವಿದೆ ಎಂದು ಚೀನಾ ಸರ್ಕಾರದ ರಾಷ್ಟ್ರೀಯ ಆರೋಗ್ಯ ಸಮಿತಿ ಹೇಳಿದೆ.

ಚೀನಾದಲ್ಲಿ ಕೊರೊನಾದಿಂದ ಮೃತಪಟ್ಟರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಚೀನಾ ಸೇರಿದಂತೆ ಜಗತ್ತಿನ ಯಾವುದೇ ದೇಶಗಳು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಕೊರೊನಾದ ತೀವ್ರಗತಿಯ ಏರಿಕೆ ಸಾಂಕ್ರಾಮಿಕ ರೋಗಗಳ ದೊಡ್ಡ ಬದಲಾವಣೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಡಬ್ಲೂ ಎಚ್ ಓ ಹೇಳಿದೆ.

Deadly Coronavirus Deaths Crossed 1500

ಕೊರೊನಾ ಹರಡದಂತೆ ತಡೆಯುವಲ್ಲಿ ಚೀನಾ ಸರ್ಕಾರ ಚಿಂತಾಕ್ರಾಂತವಾಗಿದೆ ಎಂದು ಕೆಲ ವರದಿಗಳು ಹೇಳಿವೆ. ವುಹಾನ್ ನಗರದಲ್ಲಿ ಸಾವಿನ ಸಂಖ್ಯೆ 511 ಎಂದು ತಿಳಿದು ಬಂದಿದೆ. ಈ ಭಯಾನಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಎಲ್ಲ ಅಗತ್ಯ ಕ್ರಮಗಳನ್ನೂ ಚೀನಾ ಸರ್ಕಾರ ಸಾದ್ಯ ಇರುವ ಎಲ್ಲ ಅಗತ್ಯಗಳನ್ನೂ ಪರಿಶೀಲಿಸುತ್ತಿದೆ ಎಂದು ವರದಿಗಳು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+