ದುಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೈಹಾಕಿದ ದಾವೂದ್‌?

ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಆರಾಮಾಗಿರುವುದು ಎಲ್ಲರಿಗೂ ಗೊತ್ತು. ತನ್ನ ಮೇಲೆ ಎಷ್ಟೇ ಆರೋಪಗಳಿದ್ದರೂ ರಾಜಾರೋಷದಿಂದ ಬದುಕುತ್ತಿರುವ ದಾವೂದ್ ದುಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿ ಮೂರು ಲಕ್ಷ ದಿರಮ್ ಕೊಟ್ಟು ಜಮೀನು ಖರೀದಿಸಿರುವ ಸಂಗತಿ ಬಯಲಾಗಿದೆ.

ಭಾರತದಲ್ಲಿ ದಾವೂದ್‌ನ ಚಟುವಟಿಕೆಗಳನ್ನು ಹತ್ತಿಕ್ಕಲು ಗುಪ್ತದಳಗಳು ತೀವ್ರವಾಗಿ ಯತ್ನಿಸುತ್ತಿವೆ. ಗೋವಾದಲ್ಲಿ ಡಿ ಗ್ಯಾಂಗ್‌ನ ಶಾರ್ಪ್ ಶೂಟರ್ ಶ್ಯಾಮ್ ಕಿಹೋರ್ ಎಂಬಾತನನ್ನು ಪೊಲೀಸರು ಬಂಧಿಸಿರುವುದು ದಾವೂದ್‌ನಿಗೆ ಬಿದ್ದಿರುವ ಬಹುದೊಡ್ಡ ಹೊಡೆತ. ಅಬು ಸಲೇಂನ ಅಪರಾಧ ಸಾಬೀತಾಗಿರುವುದು ಕೂಡ ಭಾರತೀಯ ರಕ್ಷಣಾ ಪಡೆಗಳ ಗೆಲುವು ಎನ್ನಬಹುದು. [ಕರಾಚಿಯಲ್ಲೇ ಇದ್ದಾನೆ ದಾವೂದ್]

dawood

ರಿಯಲ್ ಎಸ್ಟೇಟ್ ಆರಂಭಿಸಿದ್ದು ಏಕೆ? : ಎರಡು ತಿಂಗಳ ಹಿಂದಷ್ಟೇ ದುಬೈನಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ದಾವೂದ್ ಕೈ ಹಾಕಿರುವ ವಿಷಯ ಹೊರಬಂದಿದೆ. ದುಬೈನ ಯಾಸಿರ್ ಎಂಬಾತನಿಗೆ ಕರಾಚಿಯಿಂದ ದಾವೂದ್ ಮಾಡಿದ್ದ ಎನ್ನಲಾದ ಫೋನ್ ಕರೆ ರಿಯಲ್ ಎಸ್ಟೇಟ್ ದಂಧೆಯ ವಿಷಯವನ್ನು ಹೊರಗೆಡವಿದೆ. [ದಾವೂದ್ ಸಹೋದರನ ಬಂಧನ]

ದುಬೈನಲ್ಲಿ ಜಾರಿಗೆ ತರಲಾಗುತ್ತಿರುವ ಹೊಸ ಯೋಜನೆಯ ಕುರಿತು ದಾವೂದ್ ಮಾತನಾಡಿದ್ದಾನೆ. ಈ ಯೋಜನೆಗೆ ಮೂರು ಲಕ್ಷ ದಿರಮ್ ಅಗತ್ಯ ಎಂದು ಯಾಸೀರ್ ಹೇಳಿರುವುದು ಫೋನ್ ಕರೆಯಲ್ಲಿ ದಾಖಲಾಗಿದೆ. ಕರಾಚಿಯಲ್ಲಿರುವ ಅಲಿ ಯಾಕೂಬ್ ಮೂಲಕ ಹಣ ಕಳುಹಿಸುವುದಾಗಿಯೂ ದಾವೂದ್ ಹೇಳಿದ್ದಾನೆ.

ದಾವೂದ್ ನಡೆಸುತ್ತಿರುವ ಡ್ರಗ್ ಹಾಗೂ ಅಕ್ರಮ ಶಸ್ತ್ರಾಸ್ತ್ರ ಉದ್ಯಮಕ್ಕೆ ಕಡಿವಾಣ ಬೀಳುತ್ತಿದೆ. ಆದ್ದರಿಂದಲೇ ಆತ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ತೊಡಗಿಸುತ್ತಿದ್ದಾನೆ. [ದಾವೂದ್ ನನ್ನು ಬಂಧಿಸ್ತೇವೆ]

ಫೋನ್ ಕರೆ ದಾವೂದ್‌ನದ್ದೇ : ಈ ಫೋನ್ ಕರೆಯಲ್ಲಿ ಮಾತನಾಡಿರುವುದು ದಾವೂದ್ ಇಬ್ರಾಹಿಂ ಎಂಬುದನ್ನು ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳು ಒನ್ಇಂಡಿಯಾಕ್ಕೆ ದೃಢಪಡಿಸಿದ್ದಾರೆ. ಯಾವಾಗಲೂ ಕರಾಚಿಯಲ್ಲೇ ಇರುವ ದಾವೂದ್ ಈಚೆಗಷ್ಟೇ ಐಎಸ್ಐ ಸಹಾಯದೊಂದಿಗೆ ಬಾಂಗ್ಲಾದೇಶಕ್ಕೆ ತೆರಳಿದ್ದ. ಅಲ್ಲಿರುವ ತನ್ನ ಅತಿಥಿ ಗೃಹದಲ್ಲಿ ಹಲವರೊಂದಿಗೆ ರಹಸ್ಯ ಸಭೆ ನಡೆಸಿ ಬಂದಿದ್ದ. [ಪುಢಾರಿಗಳ ಜೊತೆ ಡಿ ಗ್ಯಾಂಗ್ ಲಿಂಕ್]

ಮೊದಲು ದಾವೂದ್ ಸ್ವತಃ ಫೋನ್ ಕರೆ ಮಾಡುತ್ತಿದ್ದ. ಆದರೆ, ಈಗ ಆತನ ಕರೆಗಳನ್ನು ಭಾರತೀಯ ಗುಪ್ತದಳಗಳು ಹಾಗೂ ಅಮೆರಿಕ ಕೂಡ ಟ್ಯಾಪ್ ಮಾಡುತ್ತಿವೆ. ಆದ್ದರಿಂದ ಈಗ ಸ್ವತಃ ದಾವೂದ್ ಫೋನ್ ಕರೆ ಮಾಡಬಾರದೆಂದು ಐಎಸ್ಐ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+