Coronavirus: ಚೀನಾದಲ್ಲಿ ಚಿಕಿತ್ಸೆ ನೀಡಿದ 1700 ವೈದ್ಯರಿಗೇ ಸೋಂಕು

ಬೀಜಿಂಗ್, ಫೆಬ್ರವರಿ.14: ವೈದ್ಯೋ ನಾರಾಯಣ ಹರಿ ಎನ್ನುವ ಮಾತಿದೆ. ಚೀನಾದಲ್ಲಿ ಸಾವಿರಾರು ಮಂದಿ ಸೋಂಕಿತರ ಪ್ರಾಣ ಉಳಿಸಲು ಪಣ ತೊಟ್ಟು ಶ್ರಮಿಸುತ್ತಿರುವ ವೈದ್ಯರಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಈವರೆಗೂ ಚೀನಾದಲ್ಲಿ 1700 ಮಂದಿ ವೈದ್ಯರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಚೀನಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಶುಕ್ರವಾರವೂ ಮುಂದುವರಿದಿದೆ. ಒಂದೇ ದಿನದಲ್ಲಿ 5 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆಯು 64 ಸಾವಿರದ ಗಡಿಯನ್ನು ದಾಟಿದೆ.

ಇನ್ನು, ಚೀನಾದಲ್ಲಿ ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟವರ ಸಂಖ್ಯೆ 1,381ಕ್ಕೆ ಏರಿಕೆಯಾಗಿದೆ. 64 ಸಾವಿರ ಸೋಂಕಿತರ ಪೈಕಿ 1700 ಮಂದಿ ವೈದ್ಯರಿಗೇ ಸೋಂಕು ತಗಲಿರುವ ಬಗ್ಗೆ ವರದಿಯಾಗಿದೆ.

ಈವರೆಗೆ 6 ವೈದ್ಯರು ಸಾವು, 1700 ಮಂದಿಗೆ ಸೋಂಕು

ಈವರೆಗೆ 6 ವೈದ್ಯರು ಸಾವು, 1700 ಮಂದಿಗೆ ಸೋಂಕು

ಚೀನಾದಲ್ಲಿ ಕೊರೊನಾ ವೈರಸ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೇ ಸೋಂಕು ತಗಲುತ್ತಿರುವುದು ಮತ್ತಷ್ಟು ಆತಂಕವನ್ನು ಹುಟ್ಟಿಸುತ್ತಿದೆ. ಮೊದಲ ಬಾರಿಗೆ ಏಳು ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯ ಇದಾಗಲೇ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಆರು ಮಂದಿ ವೈದ್ಯರು ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು, ಇದೀಗ 1700 ವೈದ್ಯರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮತ್ತಷ್ಟು ಭಯವನ್ನು ಹುಟ್ಟು ಹಾಕಿದೆ.

ಚೀನಾದ ಹುಬೈನ ನಗರ ನಿವಾಸಿಗಳಿಗೆ ಗೃಹನಿರ್ಬಂಧ

ಚೀನಾದ ಹುಬೈನ ನಗರ ನಿವಾಸಿಗಳಿಗೆ ಗೃಹನಿರ್ಬಂಧ

ಹುಬೈನಲ್ಲಿ ಅತಿಹೆಚ್ಚು ಮಂದಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು ಕಳೆದ ಬುಧವಾರ ಒಂದೇ ದಿನದಲ್ಲಿ 242 ಮಂದಿ ಇದೊಂದು ನಗರದಲ್ಲಿ ಮಾರಕ ಸೋಂಕಿನಿಂದ ಪ್ರಾಣ ಬಿಟ್ಟಿದ್ದರು. ಹುಬೈ ನಗರದಲ್ಲಿ ವಾಸಿಸುವ 15 ಸಾವಿರ ಮಂದಿಗೆ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದ್ದು, ನಗರದ ಎಲ್ಲ ನಿವಾಸಿಗಳಿಗೆ ಗೃಹಬಂಧನದಲ್ಲಿ ಇರುವಂತೆ ಸರ್ಕಾರವೇ ಖಡಕ್ ಸೂಚನೆ ನೀಡಿದೆ. ಯಾರೂ ಕೂಡಾ ಮನೆಗಳಿಂದ ಹೊರಗೆ ಬರಬಾರದು, ಸರ್ಕಾರದ ಈ ನಿರ್ದೇಶನವನ್ನು ಮೀರಿದರೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಚೀನಾದಲ್ಲಿ ಪ್ರೇಮಿಗಳ ದಿನವೂ ಮಾರಾಟವಾಗದ ಗುಲಾಬಿ

ಚೀನಾದಲ್ಲಿ ಪ್ರೇಮಿಗಳ ದಿನವೂ ಮಾರಾಟವಾಗದ ಗುಲಾಬಿ

ಫೆಬ್ರವರಿ.14 ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಪ್ರತಿವರ್ಷ ಈ ದಿನವನ್ನು ಚೀನಾದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ, ಈಗ ಡ್ರ್ಯಾಗನ್ ರಾಷ್ಟ್ರದಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಿ ಬಿಟ್ಟಿದೆ. ಪ್ರೇಮಿಗಳ ದಿನವಾದರೂ ಕೂಡಾ ಚೀನಾದ ಮಾರುಕಟ್ಟೆಗಳಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.95ರಷ್ಟು ಗುಲಾಬಿ ಹೂವಿನ ಮಾರಾಟದಲ್ಲಿ ಇಳಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ.

ಕೊವಿಡ್-19 ಪ್ರಕರಣಗಳು ಸಿಂಗಾಪುರ್ ನಲ್ಲೂ ಏರಿಕೆ

ಕೊವಿಡ್-19 ಪ್ರಕರಣಗಳು ಸಿಂಗಾಪುರ್ ನಲ್ಲೂ ಏರಿಕೆ

ಚೀನಾವಷ್ಟೇ ಅಲ್ಲದೇ ಸಿಂಗಾಪುರ್ ನಲ್ಲೂ ಕೂಡಾ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಿನೇ ದಿನೆ ಏರಿಕೆಯಾಗುತ್ತಿವೆ. ಶುಕ್ರವಾರ ಹೊಸತಾಗಿ 9 ಮಂದಿಗೆ ಸೋಂಕು ತಗಲಿದ್ದಿ, ಒಟ್ಟು ಸೋಂಕಿತರ ಸಂಖ್ಯೆಯು 67ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸರ್ಕಾರವು ಸ್ಪಷ್ಟನೆ ನೀಡಿದೆ. ಇದರ ಜೊತೆಗೆ ನೆರೆಹೊರೆ ರಾಷ್ಟ್ರಗಳಿಗೆ ಪ್ರಯಾಣಿಸದಂತೆ ತನ್ನ ಪ್ರಜೆಗಳಿಗೆ ಸರ್ಕಾರವು ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+