ಸಾರ್ಸ್ ದಾಖಲೆ ಮುರಿದ ಕೊರೊನಾ; ಸಾವಿನ ಸಂಖ್ಯೆ 803ಕ್ಕೆ ಏರಿಕೆ

ಬೀಜಿಂಗ್, ಫೆಬ್ರವರಿ 09: ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಚೀನಾದಲ್ಲಿ ಸಾವಿನ ಸಂಖ್ಯೆ 803ಕ್ಕೆ ಏರಿಕೆಯಾಗಿದೆ. ಸಾರ್ಸ್‌ ರೋಗದಿಂದ 774 ಮಂದಿ ಸಾವನ್ನಪ್ಪಿರುವುದಾಗಿ ದಾಖಲೆ ಇದ್ದು, ಅದನ್ನು ಕೊರೊನಾ ಮುರಿದಿದೆ.

ಕೊರೊನಾ ವೈರಸ್ ಹೆಚ್ಚಾಗಿ ಹಬ್ಬಿರುವ ಹುಬೇ ಪ್ರಾಂತ್ಯದಲ್ಲಿ 81 ಹೊಸ ಸಾವಿನ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಭಾನುವಾರ ಸಾವಿನ ಸಂಖ್ಯೆ 803ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.

Coronavirus Death Toll In China Touches 803

ಹುಬೇ ಆರೋಗ್ಯ ಸಚಿವಾಲಯ 2,147 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಎಂದು ಹೇಳಿದೆ. ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಮೊದಲು ಪತ್ತೆಯಾಗಿತ್ತು. ಪ್ರಸ್ತುತ ದೇಶದಲ್ಲಿ 36,690 ಪ್ರಕರಣಗಳು ದಾಖಲಾಗಿವೆ.

2002-03ರಲ್ಲಿ ಸಾರ್ಸ್‌ನಿಂದ 774 ಜನರು ಮೃತಪಟ್ಟಿದ್ದರು. ಇದೀಗ ಕೊರೊನಾ ವೈರಸ್‌ನಿಂದ 803 ಮಂದಿ ಮೃತಪಟ್ಟಿದ್ದು, ಸಾರ್ಸ್ ದಾಖಲೆಯನ್ನು ಮುರಿದು ಹಾಕಿದೆ. ಹುಬೇಯಲ್ಲಿಯೇ ಮೊದಲು ಕೊರೊನಾ ವೈರಸ್ ಪತ್ತೆಯಾಯಿತು ಎಂದು ಶಂಕಿಸಲಾಗಿದೆ.

ಶನಿವಾರ ಹೊಸದಾಗಿ 3,399 ಜನರಲ್ಲಿ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ. ಚೀನಾದ ಹೈಲಾಂಗ್ಜಿಯಾಂಗ್, ಬೀಜಿಂಗ್, ಹೆನನ್, ಗುನ್ಸುನ್‌ನಲ್ಲಿಯೂ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕ ಕೊರೊನಾ ವೈರಸ್ ತಡೆಗೆ ಚೀನಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಅನುದಾವನ್ನು ಘೋಷಣೆ ಮಾಡಿದೆ. ಚೀನಾ ಮತ್ತು ಇತರ ದೇಶಗಳಿಗೆ 715 ಕೋಟಿ ನೆರವನ್ನು ರೋಗವನ್ನು ನಿಯಂತ್ರಿಸುವುದಕ್ಕೆ ನೀಡಲಾಗುತ್ತದೆ ಎಂದು ಹೇಳಿದೆ.

ಜಪಾನ್‌ ದೇಶದ ಯೊಕೊಹಾಮಾ ಬಂದಿರಿನಲ್ಲಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಶನಿವಾರ ಹೊಸದಾಗಿ ಮೂವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕು ತಗುಲಿರುವ ಪ್ರಯಾಣಿಕರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+