ಚೀನಾದಲ್ಲಿ ಒಂದೇ ದಿನ 2,009 ಮಂದಿಗೆ ಕೊರೊನಾ ವೈರಸ್

Recommended Video

      2,009 new Corona Virus cases in China

      ಬೀಜಿಂಗ್, ಫೆಬ್ರವರಿ.16: ಡ್ರ್ಯಾಗನ್ ರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿಗೆ ಜನರು ಹೈರಾಣುಗುತ್ತಿದ್ದಾರೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ ಒಂದೇ ದಿನ 2,009 ಮಂದಿಯಲ್ಲಿ ಮಾರಕ ಸೋಂಕು ಪತ್ತೆಯಾಗಿದೆ.

      ಚೀನಾದಲ್ಲಿ ಕೊರೊನಾ ವೈರಸ್ ನಿಂದ ಈಗಾಗಲೇ 1,665 ಮಂದಿ ಪ್ರಾಣ ಬಿಟ್ಟಿದ್ದು, 70 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ತಗಲಿರುವ ಬಗ್ಗೆ ತಿಳಿದು ಬಂದಿದೆ. ಈ ಪೈಕಿ ಹುಬೈ ನಗರ ಒಂದರಲ್ಲೇ 15 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ.

      ಭಾನುವಾರದ ಅಂಕಿ-ಅಂಶಗಳ ಪ್ರಕಾರ ಚೀನಾದಲ್ಲಿ ಕೊರೊನಾ ವೈರಸ್ ಗೆ 142 ಮಂದಿ ಬಲಿಯಾಗಿದ್ದಾರೆ. ಹುಬೈ ನಗರದಲ್ಲೇ 139 ಮಂದಿ ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ(WHO)ಯು ಸ್ಪಷ್ಟನೆ ನೀಡಿದೆ.

      Coronavirus: 2,009 New Infected Cases In China

      ಹುಬೈ ನಗರದಲ್ಲಿ ಏರುತ್ತಿರುವ ಸಾವಿನ ಸಂಖ್ಯೆ:

      ಕೊರೊನಾ ವೈರಸ್ ನಿಂದ ಚೀನಾದ ಹುಬೈ ನಗರದಲ್ಲಿ ಸಾವಿನ ಸಂಖ್ಯೆ ಏರುಮುಖವಾಗಿ ಸಾಗುತ್ತಿದೆ. ಇದುವರೆಗೂ 1,843 ಮಂದಿ ಹುಬೈ ನಗರದಲ್ಲೇ ಪ್ರಾಣ ಬಿಟ್ಟಿದ್ದು, 56,249 ಜನರಲ್ಲಿ ಮಾರಕ ಸೋಂಕು ತಗಲಿರುವುದು ಸ್ಪಷ್ಟವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+