• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ-ಚೀನಾ ಗಡಿಯಲ್ಲಿ ತಲೆ ಎತ್ತಿದ PLA ಹೆಲಿಕಾಪ್ಟರ್ ನಿಲ್ದಾಣ!

|

ನವದೆಹಲಿ, ಸಪ್ಟೆಂಬರ್.01: ಭಾರತ-ಚೀನಾ ಪೂರ್ವ ಗಡಿ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ. ಉಭಯ ರಾಷ್ಟ್ರಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ಒಂದು ಕಡೆ ಶಾಂತಿ ಮಾತುಕತೆ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಗಡಿಯಲ್ಲಿ ನಿಯಮ ಉಲ್ಲಂಘನೆ ಆಗುತ್ತಿದೆ.

   China ತನ್ನ ವಾಯು , ನೌಕಾ ಪಡೆಯನ್ನು ದ್ವಿಗುಣಗೊಳಿಸುತ್ತಿರುವುದೇಕೆ | Oneindia Kannada

   ಪ್ರಧಾನಿ ಭೇಟಿ ಮಾಡಿದ ನಿಮು ಪ್ರದೇಶದ ಬಗ್ಗೆ ನಿಮಗೆಷ್ಟು ಗೊತ್ತು?

   ಸೋಮವಾರ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಭಾರತೀಯ ಸೇನೆ ಆರೋಪಿಸಿತ್ತು. ಇದರ ಬೆನ್ನಲ್ಲೇ ಚೀನಾ ಇದೀಗ ಭಾರತದ ವಿರುದ್ಧ ಬೊಟ್ಟು ಮಾಡುತ್ತಿದೆ.

   ಗಡಿಯಲ್ಲಿ ಚೀನಾ ಗಾಂಚಾಲಿ: ಶ್ರೀನಗರದ ಗೌಪ್ಯ ರಸ್ತೆಯಲ್ಲಿ ಸಂಚಾರ ಬಂದ್!

   ಭಾರತೀಯ ಸೇನೆಯು ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ನಿಗದಿತ ಗಡಿ ರೇಖೆಯಿಂದ 4200 ಮೀಟರ್ ದಾಟಿದ್ದು, ಅತಿಕ್ರಮವಾಗಿ ಸೇನಾ ಚಟುವಟಿಕೆಗಳನ್ನು ನಡೆಸುತ್ತಿದೆ. ಇದರಿಂದಾಗಿ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದೆ ಎಂದು ಚೀನಾ ಸೇನೆಯು ದೂಷಿಸುತ್ತಿದೆ.

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   "ಚೀನಾದ ಗಡಿ ರೇಖೆ ಉಲ್ಲಂಘಿಸಿದ ಭಾರತೀಯ ಸೇನೆ"

   ಚೀನಾದ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಧಕ್ಕೆ ಬರುವಂತೆ ಭಾರತೀಯ ಸೇನೆಯು ಗಡಿರೇಖೆಯನ್ನು ಉಲ್ಲಂಘಿಸಿದೆ. ಇದಕ್ಕೆ ಪ್ರತಿಯಾಗಿ ಪೀಪಲ್ಸ್ ಲಿಬರೇಷನ್ ಆರ್ಮಿಯು ತಕ್ಕ ಉತ್ತರ ನೀಡಲು ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಿಎಲ್ಎ ಪ್ರಾದೇಶಿಕ ಕಮಾಂಡರ್ ತಿಳಿಸಿದ್ದಾರೆ.

   ವಿವಾದಿತ ಪ್ರದೇಶದಲ್ಲಿ ಚೀನಾ ಹೆಲಿಕಾಪ್ಟರ್ ಚಿತ್ರ ಸೆರೆ

   ಭಾರತದ ಗುಪ್ತಚರ ವಿಶ್ಲೇಷಕರು ಚೀನಾದ ಹೆಲಿಕಾಪ್ಟರ್ ವೊಂದು ವಿವಾದಿತ ಗಡಿ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಸೆಟ್ ಲೈಟ್ ನಲ್ಲಿ ಸೆರೆಯಾಗಿರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಚೀನಾ, ಭಾರತ ಮತ್ತು ಭೂತಾನ್ ನಡುವಿದ ಗಡಿಯಲ್ಲಿ ಚೀನಾದ ಹೆಲಿಕಾಪ್ಟರ್ ನಿಂತಿರುವ ಫೋಟೋ ಇದಾಗಿದೆ. ಸಿಕ್ಕಿಂ ಸೆಕ್ಟರ್ ನ ಡೋಕ್ಲಾಂ ಗಡಿಯಲ್ಲಿ ಚೀನಾದ ವಾಯುಸೇನೆಗಾಗಿ ಒಂದು ಹೆಲಿಕಾಪ್ಟರ್ ನಿಲ್ದಾಣವನ್ನು ಚೀನಾ ನಿರ್ಮಾಣ ಮಾಡಲು ಹೊರಟಿದೆ. ಪೀಪಲ್ಸ್ ಲಿಬರೇಷನ್ ಆರ್ಮಿಯ ಹೆಲಿಪೋರ್ಟ್ ನಲ್ಲಿ ಮೇಲ್ಮೈ ಪ್ರದೇಶದಲ್ಲಿ ಕ್ಷಿಪಣಿ ಪ್ರಯೋಗಕ್ಕೆ ಅಗತ್ಯ ಸೌಲಭ್ಯಗಳನ್ನು ಶೇಖರಿಸಿಡಲು ಸಹಾಯಕ ಎಂದು ಹೇಳಲಾಗುತ್ತಿದೆ.

   ಕ್ಷಿಪಣಿ ಸೌಲಭ್ಯದ ಕೇಂದ್ರವನ್ನು ಚೀನಾ ಸ್ಥಾಪಿಸಿದ್ದು ಎಲ್ಲಿ?

   ಹಿಂದೂಸ್ತಾನ್ ಟೈಮ್ಸ್ ಮಾಡಿರುವ ವರದಿಯ ಪ್ರಕಾರ, ಚೀನಾದ ಹೊಸ ಕ್ಷಿಪಣಿ ಸೌಲಭ್ಯ ಕೇಂದ್ರವು 'ನಾಕು ಲಾ' ಪ್ರದೇಶದಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಇದೇ ಪ್ರದೇಶದಲ್ಲಿ ಮೇ.09ರಂದು ಉಭಯ ರಾಷ್ಟ್ರಗಳ ಯೋಧರ ನಡುವೆ ಸಂಘರ್ಷ ನಡೆದಿತ್ತು. ಅಲ್ಲದೇ 'ಡೊಕಾ ಲಾ' ಪ್ರದೇಶಕ್ಕೆ ಈ ಕ್ಷಿಪಣಿ ಸೌಲಭ್ಯ ಕೇಂದ್ರವು ಸನ್ನಿಹಿತದಲ್ಲಿದೆ. ಡೋಕ್ಲಾಂಗೆ ಈ ಡೊಕಾ ಲಾ ಪ್ರದೇಶವು ಹತ್ತಿರದಲ್ಲಿದೆ. ಕಳೆದ 2017ರಲ್ಲಿ ಡೋಕ್ಲಾಂನಲ್ಲಿ ಚೀನಾ ಮತ್ತು ಭಾರತ ಸೇನೆಗಳು ಮುಖಾಮುಖಿಯಾಗಿದ್ದು, ರಾಡ್, ದೊಣ್ಣೆಯಿಂದ ಬಡಿದಾಡಿದ್ದರು. ಅಂದು ನಾಲ್ಕು ಭಾರತೀಯ ಯೋಧರು ಮತ್ತು ಏಳು ಚೀನಾದ ಯೋಧರು ಗಾಯಗೊಂಡಿದ್ದರು. ಅದಾಗಿ 73 ದಿನಗಳವರೆಗೂ ಗಡಿಯು ಬೂದಿ ಮುಚ್ಚಿದ ಕೆಂಡದಂತೆ ಉದ್ವಿಗ್ನಗೊಂಡಿತ್ತು.

   ಚೀನಾದ ಬಗ್ಗೆ ಭಾರತೀಯ ಸೇನೆ ಹೇಳಿದ್ದೇನು?

   ಚೀನಾದ ಬಗ್ಗೆ ಭಾರತೀಯ ಸೇನೆ ಹೇಳಿದ್ದೇನು?

   ಕಳೆದ ಆಗಸ್ಟ್.29 ಮತ್ತು 30ರ ಮಧ್ಯರಾತ್ರಿ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ಚೀನಾ ಸೇನಾಪಡೆಗಳು ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ನಡೆಸಿರುವುದು ಗೊತ್ತಾಗಿದೆ. ಕಳೆದ ಜೂನ್.15ರಿಂದಲೂ ಉಭಯ ರಾಷ್ಟ್ರಗಳ ಗಡಿಯಲ್ಲಿ ಸೇನಾಪಡೆಗಳು ಅಲರ್ಟ್ ಆಗಿವೆ. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಬ್ಯಾಂಕ್ ಪ್ರದೇಶದಲ್ಲಿ ಭಾರತೀಯ ಸೇನೆಯು ಪೂರ್ವಭಾವಿಯಾಗಿ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ.

   ಚೀನಾ ವಿದೇಶಾಂಗ ವಕ್ತಾರ ನೀಡಿದ ಸ್ಪಷ್ಟನೆಯೇನು?

   ಚೀನಾ ವಿದೇಶಾಂಗ ವಕ್ತಾರ ನೀಡಿದ ಸ್ಪಷ್ಟನೆಯೇನು?

   ಭಾರತ ಚೀನಾ ಗಡಿ ಪ್ರದೇಶದಲ್ಲಿ ಯಾವುದೇ ಸಂದರ್ಭದಲ್ಲೂ ಚೀನಾದ ಸೇನಾಪಡೆಯು ನಿಗದಿತ ಗಡಿ ರೇಖೆ ದಾಟಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿದೆ. ಭಾರತೀಯ ಸೇನೆ ಹೇಳಿಕೆ ನೀಡಿರುವ ಬೆನ್ನಲ್ಲೇ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝೋವೊ ಲಿಜಿಯಾನ್ ಸ್ಪಷ್ಟನೆ ನೀಡಿದ್ದಾರೆ. ಚೀನಾದ ಪೀಪಲ್ಸ್ ಲಿಬರ್ಟಿ ಆರ್ಮಿ ಯೋಧರು ನಿಗದಿತ ಗಡಿ ರೇಖೆಯನ್ನು ದಾಟಿ ಹೋಗಿಲ್ಲ. ಎರಡೂ ಕಡೆಗಳಲ್ಲಿ ಸದ್ಯದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಪ್ರದೇಶದಲ್ಲಿ ಚೀನಾ ಸೇನೆ ಯಾವುದೇ ರೀತಿ ಪ್ರಚೋದನಾತ್ಮಕ ಚಟುವಟಿಕೆಗಳನ್ನು ನಡೆಸಿಲ್ಲ. ಉಭಯ ರಾಷ್ಟ್ರಗಳ ಗಡಿಯಲ್ಲಿ ಯಥಾಸ್ಥಿತಿಗೆ ಧಕ್ಕೆ ಉಂಟಾಗುವಂತಾ ಯಾವುದೇ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

   English summary
   China Says Border Tension 'Begins' From India's 'Violation'; PLA's Heliport Seen Near Doklam.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X