ಚೀನಾ-ರಷ್ಯಾ ದೋಸ್ತಿ ಮತ್ತಷ್ಟು ಬಲಿಷ್ಠ..! ಚಂದ್ರ ಗ್ರಹದಲ್ಲಿ ಜಂಟಿ ಕಾರ್ಯಾಚರಣೆ..!

ಚೀನಾ ಹಾಗೂ ರಷ್ಯಾ ದೋಸ್ತಿ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಅಮೆರಿಕ ಎಂಬ ದೈತ್ಯ ಶಕ್ತಿ ವಿರುದ್ಧ ಎರಡೂ ದೇಶಗಳು ಒಗ್ಗಟ್ಟಿನಿಂದ ಹೋರಾಡುತ್ತಿವೆ. ಮಿಲಿಟರಿ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ವಿಚಾರಗಳಲ್ಲಿ ಚೀನಾ ಹಾಗೂ ರಷ್ಯಾ ನಡುವೆ ದೋಸ್ತಿ ಇದೆ. ಹೀಗೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಒಗ್ಗಟ್ಟಿನಿಂದ ಎರಡೂ ದೈತ್ಯ ದೇಶಗಳು ಕೆಲಸ ಮಾಡುತ್ತಾ ಬಂದಿವೆ. ಇದೀಗ ತಮ್ಮ ದೋಸ್ತಿ ಪ್ರತೀಕವಾಗಿ ಚಂದ್ರನ ಮೇಲೆ ಸಂಶೋಧನಾ ಕೇಂದ್ರ ನಿರ್ಮಿಸಲು ಮುಂದಾಗಿವೆ.

ಚೀನಾ ಕೆಲವೇ ತಿಂಗಳ ಅಂತರದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನ ಮಾಡಿದೆ. ಚಂದ್ರನ ಮೇಲೆ ರೋವರ್ ಇಳಿಸಿದ್ದು, ಮಂಗಳ ಗ್ರಹದ ಅಧ್ಯಯನಕ್ಕಾಗಿ ಉಪಗ್ರಹ ಕಳಿಸಿದ್ದು. ಹೀಗೆ ಬಾಹ್ಯಾಕಾಶದಲ್ಲಿ ಹಲವು ಸಾಧನೆ ಮಾಡಿರುವ ಚೀನಾಗೆ ರಷ್ಯಾ ಸಾಥ್ ನೀಡಲಿದೆ. ಒಗ್ಗಟ್ಟಿನ ಮಂತ್ರ ಜಪಿಸುತ್ತಾ 'ಅಂತಾರಾಷ್ಟ್ರೀಯ ಚಂದ್ರ ಸಂಶೋಧನಾ ಕೇಂದ್ರ' ಸ್ಥಾಪಿಸಲು ಮುಂದಾಗಿವೆ.

ಮತ್ತೊಂದು ಗಮನಾರ್ಹ ವಿಚಾರವೆಂದರೆ ಸಂಶೋಧನಾ ಕೇಂದ್ರ ಇತರ ರಾಷ್ಟ್ರಗಳಿಗೂ ಮುಕ್ತವಾಗಿರಲಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಸ್ಪಷ್ಟಪಡಿಸಿದೆ. ಆದರೆ ಈ ಸಂಶೋಧನಾ ಕೇಂದ್ರ ಯಾವಾಗ ತಲೆ ಎತ್ತಲಿದೆ ಎಂಬುದು ಇನ್ನೂ ಕನ್ಫರ್ಮ್ ಆಗಿಲ್ಲ.

ಜಗತ್ತಿನ ಗಮನ ಸೆಳೆದ ಯೋಜನೆ..!

ಜಗತ್ತಿನ ಗಮನ ಸೆಳೆದ ಯೋಜನೆ..!

ಎರಡೂ ದೇಶಗಳ ನಡುವಿನ ಈ ಮಹತ್ವದ ಒಪ್ಪಂದಕ್ಕೆ ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತಾಧಿಕಾರಿ ಮತ್ತು ರಷ್ಯಾ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಡಿಮಿಟ್ರಿ ರೋಗೊಜಿನ್ ಸಹಿ ಹಾಕಿದ್ದಾರೆ. ಭೂಮಿಗೆ ಹತ್ತಿರದಲ್ಲೇ ಇರುವ ಆಕಾಶಕಾಯ ಚಂದ್ರ. ಈಗಾಗಲೇ ಚಂದ್ರನ ಹಲವು ವಿಸ್ಮಯಗಳನ್ನ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಇದೀಗ ರಷ್ಯಾ-ಚೀನಾ ಜಂಟಿಯಾಗಿ ಯೋಜನೆ ಕೈಗೊಂಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಏಕೆಂದರೆ ಮೊಟ್ಟಮೊದಲು ಬಾಹ್ಯಾಕಾಶಕ್ಕೆ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದ್ದು ರಷ್ಯಾ. ಸದ್ಯದ ಸ್ಥಿತಿಯಲ್ಲಿ ಚೀನಾ ತಾಂತ್ರಿಕವಾಗಿ ಅಂದರೆ ಟೆಕ್ನಾಲಜಿ ವಿಚಾರದಲ್ಲಿ ಸಾಕಷ್ಟು ಮುಂದಿದೆ. ಹೀಗಾಗಿ ಈ ಎರಡು ದೇಶಗಳ ಜಂಟಿ ಯೋಜನೆ ಜಗತ್ತಿನ ಗಮನ ಸೆಳೆದಿದೆ.

ಚೀನಾಗೆ ಚಂದ್ರನ ಮೇಲೆ ವ್ಯಾಮೋಹ

ಚೀನಾಗೆ ಚಂದ್ರನ ಮೇಲೆ ವ್ಯಾಮೋಹ

ಚಂದ್ರ ಬಹುಪಾಲು ಧರ್ಮಗಳಿಗೆ ದೇವರ ಸಮಾನ. ಹಾಗೇ ಚೀನಿಯರು ಕೂಡ ಚಂದ್ರನಿಗೆ ವಿಶೇಷ ಸ್ಥಾನ ನೀಡುತ್ತಾರೆ. ಚೀನಿಯರ ಧರ್ಮದಲ್ಲಿ ಚಂದ್ರನಿಗೆ ಮಹತ್ವದ ಸ್ಥಾನಮಾನ ಇದೆ. ಹೀಗೆ ಚಂದ್ರನ ಕುರಿತಾಗಿ ನೂರಾರು ವರ್ಷಗಳಿಂದ ಕುತೂಹಲ ಬೆಳೆಸಿಕೊಂಡು ಬಂದಿದ್ದಾರೆ ಚೀನಿಯರು. ಆದರೆ ಇತ್ತೀಚಿನ ದಿನಗಳಲ್ಲಿ ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಶಕ್ತಿಶಾಲಿಯಾದ ಬಳಿಕ ಚಂದ್ರನ ಮೇಲೆ ಭಾರಿ ಗಮನ ಇಟ್ಟಿದೆ. ಏಕೆಂದರೆ ಅಲ್ಲಿರುವ ಸಂಪತ್ತು ಮಂದೆ ತನಗೆ ಲಾಭ ತರಲಿದೆ ಎಂಬುದು ಚೀನಾ ನಾಯಕರ ಭವಿಷ್ಯದ ಲೆಕ್ಕಾಚಾರ.

ಚಂದ್ರನ ವಶಕ್ಕೆ ಬಲಿಷ್ಠರ ಸ್ಪರ್ಧೆ..!

ಚಂದ್ರನ ವಶಕ್ಕೆ ಬಲಿಷ್ಠರ ಸ್ಪರ್ಧೆ..!

ಭೂಮಿಯನ್ನು ಬಿಟ್ಟರೆ ಭವಿಷ್ಯದಲ್ಲಿ ಮಾನವನಿಗೆ ನೆರವಾಗುವ ಸಮೀಪದ ಆಕಾಶ ಕಾಯ ಎಂದರೆ ಚಂದ್ರ. ಈ ಹಿನ್ನೆಲೆಯಲ್ಲಿ ಚಂದ್ರನ ಮೇಲೆ ಹಿಡಿತ ಸಾಧಿಸಲು ಜಗತ್ತಿನ ಬಲಿಷ್ಠ ದೇಶಗಳ ನಡುವೆ ಪೈಪೋಟಿ ಇದೆ. ಭಾರತದ ಹೆಮ್ಮೆಯ ಇಸ್ರೋ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಏಕೆಂದರೆ ಚಂದ್ರನ ಮೇಲೆ ಸಂಶೋಧನೆ ನಡೆಸಲು ಈಗಾಗಲೇ ಇಸ್ರೋ 2 ಉಪಗ್ರಹಗಳನ್ನ ಯಶಸ್ವಿಯಾಗಿ ಉಡಾಯಿಸಿದೆ. ಅಲ್ಲದೆ 2008ರಲ್ಲಿ ಮೊದಲ ಬಾರಿ ಹಾರಿದ್ದ 'ಚಂದ್ರಯಾನ-1' ಚಂದ್ರನ ಮೇಲೆ ನೀರು ಇದೆ ಎಂಬುದನ್ನ ಕನ್ಫರ್ಮ್ ಮಾಡಿತ್ತು. ಹೀಗೆ ಜಗತ್ತಿನಲ್ಲಿ ಮೊಟ್ಟಮೊದಲು ಚಂದ್ರನ ಮೇಲೆ ನೀರು ಇದೆ ಎಂಬುದನ್ನ ತಿಳಿಸಿದ್ದು ಭಾರತವೇ ಆಗಿದೆ.

ಚಂದ್ರನ ಮೇಲೆ ಭಾರಿ ನೀರು..!

ಚಂದ್ರನ ಮೇಲೆ ಭಾರಿ ನೀರು..!

ಚಂದ್ರನ ಮೇಲೆ ಭಾರಿ ಪ್ರಮಾಣದ ನೀರು ಹುದುಗಿದೆ ಎಂಬ ವಿಚಾರವನ್ನು ಇದೇ ಮೊದಲಬಾರಿಗೆ ನಾಸಾ ವಿಜ್ಞಾನಿಗಳು ಬಾಯಿಬಿಟ್ಟಿದ್ದರು. 2020ರ ಅಕ್ಟೋಬರ್‌ನಲ್ಲಿ ಈ ಕುರಿತು ನಾಸಾ ಮಾಹಿತಿ ನೀಡಿತ್ತು. ನೇಚರ್ ಅಸ್ಟ್ರಾನಮಿಯಲ್ಲಿ ಪ್ರಕಟವಾಗಿದ್ದ 2 ಹೊಸ ಅಧ್ಯಯನ ವರದಿಗಳು ಸಂತಸದ ಸಂಗತಿಯನ್ನು ಮನುಕುಲಕ್ಕೆ ನೀಡಿದ್ದವು. ನಾಸಾ ನಿರ್ಮಿತ ಟೆಲಿಸ್ಕೋಪ್ 'ಸೋಫಿಯಾ' ಸಹಾಯದಿಂದ ಅವರೋಹಿತ ದೂರದರ್ಶಕ (telescope)ವನ್ನು ಬಳಸಿ ಚಂದ್ರನ ಮೇಲೆ ನೀರು ಇರುವುದನ್ನು ಕನ್ಫರ್ಮ್ ಮಾಡಲಾಗಿತ್ತು. ಹಾರುವ ದೂರದರ್ಶಕ ಎಂದು ಕರೆಯಲಾಗುವ ಇದರ ಸಹಾಯದಿಂದ ನೀರು (H2O) ಮತ್ತು ಹೈಡ್ರಾಕ್ಸಿಲ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸುಲಭವಾಗುತ್ತದೆ. ಹೀಗಾಗಿ ಇದೇ ದೂರದರ್ಶಕ ಬಳಸಿ ಸಂಶೋಧಕರು, ಚಂದ್ರನ ಮೇಲೆ ಊಹೆಗೂ ಮೀರಿ ನೀರು ಹುದುಗಿದೆ ಎಂಬುದನ್ನ ತಿಳಿಸಿದ್ದರು.

ಶಿವಮೊಗ್ಗ ಜಿಲ್ಲೆಗಿಂತ 5 ಪಟ್ಟು ಹೆಚ್ಚು ನೀರು..!

ಶಿವಮೊಗ್ಗ ಜಿಲ್ಲೆಗಿಂತ 5 ಪಟ್ಟು ಹೆಚ್ಚು ನೀರು..!

ಚಂದ್ರನ ಮೇಲೆ ಈಗ ಎಷ್ಟು ಪ್ರಮಾಣದ ನೀರು ಸಿಕ್ಕಿರಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆ ಕುತೂಹಲಕ್ಕೂ ನಾಸಾ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಚಂದ್ರನ ಮೇಲೆ ಈಗ ಪತ್ತೆಯಾಗಿರುವ ನೀರಿನ ಪ್ರಮಾಣ ಸುಮಾರು 40,000 ಸ್ಕ್ವೇರ್ ಕಿಲೋಮೀಟರ್. ಇದನ್ನ ಸಾಮಾನ್ಯ ಅಂದಾಜಿನಲ್ಲಿ ಹೇಳುವುದಾದರೆ ಶಿವಮೊಗ್ಗ ಜಿಲ್ಲೆಯ ಒಟ್ಟು ಜಾಗದ 5 ಪಟ್ಟು.

ಅಂದರೆ ಚಂದ್ರನ ಮೇಲಿರುವ ನೀರನ್ನು ಭೂಮಿಗೆ ತಂದರೆ, ಆ ನೀರನ್ನು ಶಿವಮೊಗ್ಗ ಜಿಲ್ಲೆಗೆ 5 ಬಾರಿ ತುಂಬಿಸಬಹುದು. ಅಂದರೆ ಲೆಕ್ಕ ಹಾಕಿ ಭವಿಷ್ಯದಲ್ಲಿ ಚಂದಿರನ ಮೇಲೂ ಮನೆ ಕಟ್ಟಲು ಈ ನೀರು ಬಳಸಲು ಲಭ್ಯವಾದೀತು. ಬರೀ ಮನೆ ಕಟ್ಟಲು ಸಾಕೆ ಕುಡಿಯಲು, ಕೃಷಿ ಮಾಡಲು ಕೂಡ ಬಳಸಬಹುದಾಗಿದೆ. ಮುಂದೆ ಭೂಮಿ ಬೇಜಾರಾದರೆ ಚಂದ್ರನ ಮೇಲೆ ಹೋಗಿ ವಾಸ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+