ಅಮಿತ್ ಶಾ ಅರುಣಾಚಲ ಭೇಟಿಗೆ ಡ್ರ್ಯಾಗನ್ ಚೀನಾ ಗರಂ!

ಬೀಜಿಂಗ್: ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಕಿರಿಕ್ ತೆಗೆಯುತ್ತಿರುವ ಚೀನಾ ಈಗ ಭಾರತದ ವಿರುದ್ಧ ಅಸಮಾಧಾನ ಹೊರಹಾಕಿದೆ. ಗೃಹ ಸಚಿವ ಅಮಿತ್ ಶಾ ಅರುಣಾಚಲ ಭೇಟಿ ಬಗ್ಗೆ ಚೀನಾ ಗರಂ ಆಗಿದ್ದು, ಈ ನಡೆ ಪ್ರಾದೇಶಿಕ ಸಾರ್ವಭೌಮತ್ವ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿತ್ತು. ತೈವಾನ್ ಜೊತೆಗಿನ ಕಿರಿಕ್ ಜೊತೆಗೆ ಭಾರತ ಜೊತೆಗೂ ಇಂತಹದ್ದೇ ಕಿತ್ತಾಟ ಮುಂದುವರಿಸಿದೆ ಚೀನಾ.

ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿರುವ ವಿಚಾರ ತಿಳಿಯುತ್ತಿದ್ದಂತೆ, ಚೀನಾ ವಿದೇಶಾಂಗ ವಕ್ತಾರರ ಪ್ರತಿಕ್ರಿಯೆ ನೀಡಿರುವುದು ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಹುಳಿ ಹಿಂಡುವಂತೆ ಮಾಡಿದೆ. ಅರುಣಾಚಲ ಪ್ರದೇಶಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿಯನ್ನು ಚೀನಾ ವಿರೋಧಿಸುತ್ತದೆ. ಈ ಪ್ರದೇಶದಲ್ಲಿ ಅವರ ಚಟುವಟಿಕೆಗಳು ಚೀನಾದ ಪ್ರಾದೇಶಿಕ ಸಾರ್ವಭೌಮತ್ವ ಉಲ್ಲಂಘಿಸುತ್ತಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಆರೋಪಿಸಿದ್ದಾರೆ.

China angered over home minister Amit Shahs Arunachal pradesh visit

ಹೆಸರು ಬದಲಿಸಿದ್ದ ಡ್ರ್ಯಾಗನ್ ಚೀನಾ

ಅಂದಹಾಗೆ ಕಳೆದ ವಾರವಷ್ಟೇ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಹೆಸರು ಬದಲಾಯಿಸುವ ಜೊತೆಗೆ, ಅವು ತನ್ನ ಭೂಭಾಗ ಎಂದು ಹೇಳಿಕೊಂಡಿತ್ತು. ಇದಾದ ನಂತರ ಗೃಹ ಸಚಿವ ಅಮಿತ್ ಶಾ ಅವರ 2 ದಿನಗಳ ಅರುಣಾಚಲ ಪ್ರದೇಶ ಭೇಟಿ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಚೀನಾ ವಕ್ತಾರ ವಾಂಗ್ ವೆನ್‌ಬಿನ್ 'ಝಂಗ್ನಾನ್ ಚೀನಾದ ಪ್ರದೇಶವಾಗಿದೆ' ಎಂದು ಹೇಳಿದ್ದರು. ಅಲ್ಲದೆ ಗಡಿಯಲ್ಲಿ ಈ ಬೆಳವಣಿಗೆ ಶಾಂತಿ, ನೆಮ್ಮದಿಗೆ ಪೂರಕವಾಗಿ ಇರುವುದಿಲ್ಲ ಎಂದು ಪರೋಕ್ಷ ಎಚ್ಚರಿಕೆ ಕೂಡ ನೀಡಿತ್ತು.

ತೈವಾನ್ ಜೊತೆಗೂ ಚೀನಾ ಕಿರಿಕ್!

ಅಷ್ಟಕ್ಕೂ ಭಾರತದ ಅರುಣಾಚಲ ಪ್ರದೇಶ ಮಾತ್ರವಲ್ಲ, ತೈವಾನ್ ಮೇಲೂ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತಲೇ ಬಂದಿದೆ. ಆದರೆ ಚೀನಾದ ಈ ಪ್ರಯತ್ನಕ್ಕೆ ತೈವಾನ್ ತಿರುಗೇಟು ನೀಡುತ್ತಿದ್ದು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಚೀನಾದ ಶತ್ರುಗಳ ಜೊತೆಗೆ ಸಂಬಂಧ ಬೆಳೆಸುತ್ತಿದೆ ತೈವಾನ್. ಅದರಲ್ಲೂ ಅಮೆರಿಕದ ಜೊತೆಗೆ ತೈವಾನ್ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದು ಚೀನಾ ಪಿತ್ತ ನೆತ್ತಿಗೇರುವಂತೆ ಮಾಡುತ್ತಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕಕ್ಕೆ ಭೇಟಿ ನೀಡಿದ್ದು, ತೈವಾನ್ ಸುತ್ತಲೂ ತನ್ನ ಯುದ್ಧ ನೌಕೆ ಹಾಗೂ ಯುದ್ಧ ವಿಮಾನಗಳನ್ನು ನಿಯೋಜಿಸಿ ಬೆದರಿಕೆ ಹಾಕುತ್ತಿದೆ ಚೀನಾ.

China angered over home minister Amit Shahs Arunachal pradesh visit

10 ಫೈಟರ್ ಜೆಟ್, 70 ಯುದ್ಧ ವಿಮಾನ

ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕ ತಲುಪಿ ಒಂದಷ್ಟು ಗಂಟೆ ಕಳೆದಿತ್ತು ಅಷ್ಟೇ, ಅಷ್ಟರಲ್ಲೇ ತನ್ನ ನೆರೆ ರಾಷ್ಟ್ರಕ್ಕೆ ಪಾಠ ಕಲಿಸಲು ಚೀನಾ ಸಿದ್ಧವಾಗಿತ್ತು. 10 ಯುದ್ಧ ನೌಕೆಗಳು ಹಾಗೂ 70ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ತೈವಾನ್ ಸುತ್ತಲೂ ನಿಯೋಜಿಸಿ ಚೀನಾ ಮಿಲಿಟರಿ ಸಮರಾಭ್ಯಾಸ ಆರಂಭಿಸಿದೆ. ನೂರಾರು ಮಿಸೈಲ್ ಹಾಗೂ ಲೆಕ್ಕವಿಲ್ಲದಷ್ಟು ಗುಂಡುಗಳು ತೈವಾನ್ ಸುತ್ತಲೂ ಸದ್ದು ಮಾಡುತ್ತಾ ಯುದ್ಧದ ಭೀತಿ ಆವರಿಸುವಂತೆ ಮಾಡಿದೆ. ಇದರ ಜೊತೆಗೆ ಚೀನಾ ಅರುಣಾಚಲ ಪ್ರದೇಶದ ವಿಚಾರದಲ್ಲೂ ಕಿರಿಕಿರಿ ಶುರು ಮಾಡಿರುವುದು ಅಮೆರಿಕ ಸೇರಿದಂತೆ ಜಗತ್ತಿನ ಕಣ್ಣು ಕೆಂಪಾಗುವಂತೆ ಮಾಡಿದೆ.

ಒಟ್ಟಾರೆ ಹೇಳುವುದಾದರೆ ಚೀನಾದ ಈ ಬೆದರಿಕೆ ಭಾರತಕ್ಕೆ ಏನೂ ಮಾಡಲಾಗದು. ಆದರೆ ಗಡಿಯಲ್ಲಿ ಪದೇಪದೆ ಕಿರಿಕ್ ಮಾಡುತ್ತಿರುವ ಚೀನಿ ಸೇನೆ ಆಗಾಗ ಗಡಿಯನ್ನೂ ದಾಟಿ ಬರುತ್ತಿದೆ. ಭಾರತದ ಗಡಿಯೊಳಗೆ ಕೆಲವು ಪ್ರದೇಶಗಳು ಒತ್ತುವರಿಯಾಗಿರುವ ಆರೋಪ ಕೂಡ ಕೇಳಿಬರುತ್ತಿದೆ. ಈ ಮಧ್ಯೆ ಚೀನಾಗೆ ಬಿಸಿ ಮುಟ್ಟಿಸಲು ಗೃಹ ಸಚಿವ ಅಮಿತ್ ಶಾ ಅರುಣಾಚಲಕ್ಕೆ ಭೇಟಿ ನೀಡಿರುವುದು ಚೀನಾಗೆ ನಿದ್ದೆಗೆಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+