ತೈವಾನ್ ಸರ್ಕಾರ ಹೊಸಕಿ ಹಾಕ್ತೀವಿ ಅಂತು ಚೀನಾ!

ಬೀಜಿಂಗ್: ಬೇಡ ಬೇಡ ಅಂದ್ರು ಕೇಳ್ತಿಲ್ಲ.. ಎಷ್ಟೇ ಬುದ್ಧಿ ಹೇಳಿದ್ರೂ ಬೆಲೆಯೇ ಇಲ್ಲ.. ತೈವಾನ್ ಇದೀಗ ಚೀನಾ ಕೋಪಕ್ಕೆ ಗುರಿಯಾಗುವ ಲಕ್ಷಣ ಕಾಣುತ್ತಿದೆ. ದ್ವೀಪ ರಾಷ್ಟ್ರ ತೈವಾನ್ ಗಡಿಗೆ ತನ್ನ ಸೇನೆ ನುಗ್ಗಿಸಿ ಚೀನಾ ಖಡಕ್ ಎಚ್ಚರಿಕೆ ನೀಡುತ್ತಿದೆ. ಈ ಹೊತ್ತಲ್ಲಿ ತೈವಾನ್ ವಿರುದ್ಧ ಇನ್ನಷ್ಟು ಉಗ್ರ ಕ್ರಮ ಕೈಗೊಳ್ಳುವ ಮಾತನ್ನು ಚೀನಾ ಸೇನೆ ಹೇಳಿದ್ದು, ತೈವಾನ್ ಸರ್ಕಾರವನ್ನೇ ಹೊಸಕಿ ಹಾಕ್ತೀವಿ ಎಂದಿದೆ!

ಹೌದು, ಅತ್ತ ಅಮೆರಿಕ ಸೇನೆ ತೈವಾನ್ ಪರ ಗಟ್ಟಿಯಾಗಿ ನಿಂತಿದೆ. ಇತ್ತ ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ. ಈಗ ಬೀಜಿಂಗ್ (Beijing) ನೀಡಿರುವ ಎಚ್ಚರಿಕೆ ಸಂದೇಶ ತೈವಾನ್‌ಗೆ ನಡುಕ ತರಿಸಿದೆ. ಅದೇನೆಂದರೆ ತೈವಾನ್ ದೇಶದ ಅಮೆರಿಕ ಸ್ನೇಹಿ ಸರ್ಕಾರ ಹೊಸಕಿ ಹಾಕಿ, ತೈವಾನ್‌ನ ಸಂಪೂರ್ಣವಾಗಿ ವಶ ಮಾಡಿಕೊಳ್ಳುವುದಾಗಿ ಚೀನಾ (China) ಹೇಳಿದೆ. ಹಾಗಾದರೆ ಚೀನಾ ಇಂತಹ ಖಡಕ್ ವಾರ್ನಿಂಗ್ ಕೊಡಲು ಕಾರಣ ಏನು? ಚೀನಾ ತಾನು ಹೇಳಿದಂತೆ ಮಾಡೇ ಬಿಡುತ್ತಾ? ಅದನ್ನ ಮುಂದೆ ತಿಳಿಯೋಣ.

China and Taiwan stormy situation

ಅಮೆರಿಕದ ಸಹವಾಸ ತಂದಿಟ್ಟ ಆತಂಕ!

ಅಷ್ಟಕ್ಕೂ ತೈವಾನ್ ನಾಯಕರು ಅಮೆರಿಕದ ಸಹವಾಸ ಮಾಡಿ ಪರದಾಡುತ್ತಿದ್ದಾರೆ. ಯಾಕಂದ್ರೆ ಅಮೆರಿಕ ಬೃಹತ್ ಮೊತ್ತದ ಸಹಾಯ ಮಾಡಲು ಮುಂದೆ ಬಂದಿದ್ದು ತೈವಾನ್ ಸೇನೆಗೆ ಚೀನಾ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರವನ್ನ ಪೂರೈಕೆ ಮಾಡುತ್ತಿದೆ. ಇದು ಚೀನಾ ಸೇನೆ ಕೆರಳಿಸಿದ್ದು, ತೈವಾನ್ ಸರ್ಕಾರವನ್ನ ಹೊಸಕಿ ಹಾಕುವ ಎಚ್ಚರಿಕೆ ನೀಡಿದೆ. ಹಾಗಾದ್ರೆ ಚೀನಾ ನಿಜವಾಗೂ ತೈವಾನ್ ವಿರುದ್ಧ ಯುದ್ಧ ಸಾರುತ್ತಾ? ಯುದ್ಧ ಸಾರಿದ್ರೆ ಮುಂದೆ ಏನೆಲ್ಲ ಸಂಕಷ್ಟ ಎದುರಾಗಬಹುದು? ತಿಳಿಯೋಣ ಬನ್ನಿ.

3ನೇ ಮಹಾಯುದ್ಧದ ಆತಂಕ ಏಕೆ?

ಚೀನಾ ರೊಚ್ಚಿಗೆದ್ದಿದೆ ಅಮೆರಿಕ ವಿರುದ್ಧದ ಸಿಟ್ಟಲ್ಲಿ ಏನೇನೋ ಮಾಡಲು ಹೋಗುತ್ತಿದೆ. ಭೀಕರ ಸಮರಕ್ಕೆ ಚೀನಾ ಸೇನೆ ಸಿದ್ಧತೆ ನಡೆಸಿದೆ. ಇದರ ಮೊದಲ ಭಾಗವಾಗಿ ತೈವಾನ್ (Taiwan) ಗಡಿ ಆಕ್ರಮಿಸಿಕೊಳ್ತಿದೆ. ದ್ವೀಪರಾಷ್ಟ್ರದ ಸುತ್ತಲೂ ನೌಕಾಪಡೆಯ ಯುದ್ಧನೌಕೆ ಹಾಗೂ ಯುದ್ಧ ವಿಮಾನಗಳನ್ನ ರವಾನಿಸಿರುವ ಚೀನಾ, ಮತ್ತಷ್ಟು ಭೀಕರ ಅಸ್ತ್ರಗಳನ್ನ ತೈವಾನ್ ಗಡಿಗೆ ಸಾಗಿಸುತ್ತಿದೆ. ಇದೇ ಹೊತ್ತಲ್ಲಿ ತೈವಾನ್‌ಗೆ ಅಮೆರಿಕ ಬೆಂಬಲ ನೀಡಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಇದು 3ನೇ ಮಹಾಯುದ್ಧದ ಆತಂಕ ಮೂಡುವಂತೆ ಮಾಡಿದೆ.

China and Taiwan stormy situation

ಸಮಸ್ಯೆ ಶುರುವಾಗಿದ್ದು ಎಲ್ಲಿಂದ?

ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಕಿತಾಪತಿ ಮಾಡುತ್ತಿದೆ. ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನ ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ. ಬಳಿಕ ಚೀನಾ ತನ್ನ ಶಕ್ತಿ ಏನು ಅಂತಾ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ತೈವಾನ್ ವಿರುದ್ಧ ನೇರವಾಗಿ ತೊಡೆತಟ್ಟಿ, ರಣವೀಳ್ಯ ನೀಡಿದೆ ಚೀನಾ. ಹೀಗಾಗಿ ತೈವಾನ್ ಮತ್ತು ಚೀನಾ ಗಡಿಯಲ್ಲಿ ಯಾರೂ ಊಹಿಸದ ಸ್ಥಿತಿ ನಿರ್ಮಾಣವಾಗಿದೆ.

ತೈವಾನ್‌ಗೆ ಉಗ್ರರೂಪ ತೋರಿಸಿದ ಚೀನಾ

ಇತ್ತೀಚೆಗೆ ಸೋರಿಯಕೆಯಾಗಿದ್ದ ಅಮೆರಿಕದ ರಹಸ್ಯ ದಾಖಲೆಗಳಲ್ಲಿ ಚೀನಾ ಮತ್ತು ತೈವಾನ್, ಜಪಾನ್ ವಿಚಾರ ಪಸ್ತಾಪವಾಗಿತ್ತು. ಸಮಾನ ಶತ್ರುಗಳ ವಿರುದ್ಧ ಚೀನಾ 'ಬ್ರಹ್ಮಾಸ್ತ್ರ' ಸಿದ್ಧಗೊಳಿಸಿದೆ ಎಂದು ಅಮೆರಿಕದ ಗುಪ್ತಚರ ವರದಿ ತಿಳಿಸಿತ್ತು. ಆ ಪ್ರಕಾರ ಚೀನಾ ತಯಾರಿಸಿರುವ WZ-8 ಸೂಪರ್ ಸಾನಿಕ್ ಡ್ರೋನ್‌ ಮೂಲಕ ಜಪಾನ್, ಅಮೆರಿಕ & ತೈವಾನ್ ಎದೆ ನಡುಗಿಸಿತ್ತು. ಇಷ್ಟೆಲ್ಲಾ ಘಟನೆಗಳು ನಡೆದು ಕೆಲವೇ ದಿನ ಕಳೆದಿದೆ ಅಷ್ಟೇ, ಅಷ್ಟರಲ್ಲಿ ಚೀನಾ ಮತ್ತೊಮ್ಮೆ ತೈವಾನ್‌ ಸರ್ಕಾರವನ್ನ ಹೊಸಕಿ ಹಾಕ್ತೀವಿ ಎಂಬ ಎಚ್ಚರಿಕೆ ನೀಡಿದೆ.

ಒಟ್ನಲ್ಲಿ ಚೀನಾ ಮತ್ತು ತೈವಾನ್ ಜಗಳ ಜೋರಾಗಿದೆ, ಆದರೆ ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿ ಅಮೆರಿಕ ಭಾರಿ ಲಾಭ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಇದೆ. ತನ್ನ ಅಕ್ಕಪಕ್ಕದ ರಾಷ್ಟ್ರಗಳು ಅಮೆರಿಕದ ಜೊತೆಗೆ ಸಂಬಂಧ ಬೆಸೆಯುವುದು ಚೀನಾ ಸೇನೆಗೆ ಇಷ್ಟವಿಲ್ಲ. ಅದ್ರಲ್ಲೂ ತೈವಾನ್ ತನ್ನದೇ ದೇಶ ಎನ್ನುತ್ತಿದೆ ಚೀನಾ. ಪರಿಸ್ಥಿತಿ ಹೀಗಿರುವಾಗ ತೈವಾನ್ ನಾಯಕರು ಅಮೆರಿಕದ ಜೊತೆ ಹತ್ತಿರವಾಗುತ್ತಿರುವುದು ಯುದ್ಧದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಮುಂದೆ ಏನಾಗುತ್ತೋ ಅಂತಾ ತೈವಾನ್ ಜನ ಭಯದಲ್ಲೇ ನರಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+