Petrol Diesel Price: ಜಗತ್ತಿನಲ್ಲೇ ಅತಿ ದುಬಾರಿ ಪೆಟ್ರೋಲ್ ಇಲ್ಲಿದೆ
ಏನಪ್ಪಾ ಇದು ಪಾಕಿಸ್ತಾನದ ಪರಿಸ್ಥಿತಿ, ದಿನದಿಂದ ದಿನಕ್ಕೆ ಆ ರಾಷ್ಟ್ರ ಸಂಪೂರ್ಣ ಬೀದಿಗೆ ಬೀಳುತ್ತಿದೆ. ಅದರಲ್ಲೂ ಪಾಕಿಸ್ತಾನ ಜನರಿಗೆ ಒಂದು ಹಿಡಿ ಅಕ್ಕಿ ಸಿಗುವುದೇ ದೊಡ್ಡ ಭಾಗ್ಯ ಎಂಬಂತಾಗಿದೆ. ಗೋಧಿ ಹಿಟ್ಟಿಗಾಗಿ ಪಾಕಿಸ್ತಾನ ಪ್ರಜೆಗಳು ಬಡಿದಾಡಿದ ವಿಚಾರ ಈಗಾಗಲೇ ಜಗತ್ತಿನ ಮೂಲೆ ಮೂಲೆಗೆ ತಲುಪಿದೆ. ಹೀಗಿದ್ದಾಗಲೇ ಪಾಕಿಸ್ತಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ರೇಟ್ ಚಂದ್ರಲೋಕ ತಲುಪಿದೆ.
ಪಾಕಿಸ್ತಾನದ ಆರ್ಥಿಕತೆಯ ಕಥೆ ಏನಾಗಿದೆ ಎಂಬುದು ಜಗತ್ತಿಗೇ ಗೊತ್ತು, ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಹಣದುಬ್ಬರ ಪ್ರಮಾಣ ಎರಡಂಕಿ ತಲುಪಿದೆ. ದೇಶದ ಹಂಗಾಮಿ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿ ಜನರ ಮೇಲೆ ಮತ್ತೊಂದು ಬರೆ ಹಾಕಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್‌ಗೆ ಪಾಕಿಸ್ತಾನ ಕರೆನ್ಸಿಯಲ್ಲಿ 330 ರೂಪಾಯಿಗೆ ತಲುಪಿದೆ. ಇದು ಪಾಕಿಸ್ತಾನದ ಇತಿಹಾಸದಲ್ಲಿಯೇ ಅತ್ಯಂತ ದಾಖಲೆ ಮಟ್ಟದ ಏರಿಕೆ ಎಂದು ಹೇಳಲಾಗುತ್ತಿದೆ.

ಹಂಗಾಮಿ ಸರ್ಕಾರವೇ ಹೀಗಾದರೆ...
ಪಾಕಿಸ್ತಾನದಲ್ಲಿ ಬಡವರ ಬದುಕು ತೀರಾ ಹದಗೆಟ್ಟು ಹೋಗಿದೆ. ಇಂತಹ ಸ್ಥಿತಿಯಲ್ಲಿ ಅಲ್ಲಿ ಅಧಿಕಾರ ಕೈಗೆ ತೆಗೆದುಕೊಂಡಿರುವ ಹಂಗಾಮಿ ಸರ್ಕಾರ ಜನರ ಮೇಲೆ ಸವಾರಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಬಗ್ಗೆ ಹಂಗಾಮಿ ಸರ್ಕಾರದ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅನುಮತಿ ನೀಡಿ ಸಹಿ ಹಾಕಿದ್ದಾರೆ. ಹೀಗಾಗಿ ಹಣಕಾಸು ಸಚಿವಾಲಯ ಬೆಲೆ ಏರಿಕೆಗೆ ಕ್ರಮ ಕೈಗೊಂಡಿದೆ. ಈ ಮೂಲಕ ಪೆಟ್ರೋಲ್ ಪ್ರತಿ ಲೀಟರ್‌ಗೆ 26.02 ರೂಪಾಯಿ ಮತ್ತು ಡೀಸೆಲ್ ಬೆಲೆ 17.34 ರೂಪಾಯಿ ಹೆಚ್ಚಾಗಿದೆ.
ಏನ್ ಗುರೂ ಬೆಲೆ ಏರಿಕೆ!
ಆರ್ಥಿಕವಾಗಿ ಬೀದಿ ಪಾಲಾಗಿ ನರಳುತ್ತಿದ್ದ ಪಾಕಿಸ್ತಾನದಲ್ಲಿ ಈ ಮೂಲಕ ಇನ್ನೊಂದು ಸಮಸ್ಯೆ ಎದುರಾಗಿದೆ. ಪಾಕ್‌ನಲ್ಲಿ ಬಡ ಜನರ ಬದುಕು ನರಳಾಡುವ ಸನ್ನಿವೇಶಕ್ಕೆ ಸಿಲುಕಿದೆ. ಪ್ರತಿದಿನ ಬೇಕಾಗಿರುವ ವಸ್ತುಗಳು ಕೈಗೆ ಸಿಗುತ್ತಿಲ್ಲ, ಭಾರಿ ಆರ್ಥಿಕ ಸಂಕಷ್ಟಕ್ಕೂ ಸಿಲುಕಿರುವ ಪಾಕ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ & ಡೀಸೆಲ್ ಬೆಲೆ 300 ರೂಪಾಯಿ ಗಡಿ ದಾಟಿದೆ. ಇದೀಗ ಬೆಲೆ ಏರಿಕೆ ನಂತರ ಪೆಟ್ರೋಲ್ ಬೆಲೆ 330 ರೂಪಾಯಿ ಆಗಿದ್ದರೆ, ಡೀಸೆಲ್ ಕೂಡ ಕೈಗೆ ಸಿಗುತ್ತಿಲ್ಲ. ಈ ಮೂಲಕ ಪ್ರಜೆಗಳು ಇನ್ನೊಂದು ಹೋರಾಟಕ್ಕೆ ಸಜ್ಜಾಗುವಂತೆ ಮಾಡಿದೆ ಪಾಕ್ ಸರ್ಕಾರ.

ಗಾಯದ ಮೇಲೆ ಬರೆ ಎಳೆದ ಸರ್ಕಾರ
ಆರ್ಥಿಕ ಶಿಸ್ತು ಇಲ್ಲದೆ ಪಾಕಿಸ್ತಾನ ಈಗ ಒದ್ದಾಡುತ್ತಿದೆ. ಹೀಗೆ ಅಲ್ಲಿನ ಸರ್ಕಾರ ಸಾಮಾನ್ಯ ಜನರ ಮೇಲೆ ಸಾಲದ ಹೊರೆ ಹಾಕಲು ಪರೋಕ್ಷವಾಗಿ ಮುಂದಾಗಿದೆ. ಈ ಕಾರಣಕ್ಕೆ ಪಾಕ್ ಸರ್ಕಾರವು ದಿಢೀರ್ ಪೆಟ್ರೋಲ್ & ಡೀಸೆಲ್ ದರ ಹೆಚ್ಚಳ ಮಾಡಿದೆ. ಜನರಿಗೆ ಕೆಲಸವಿಲ್ಲ, ಅದೆಷ್ಟೋ ಜನ ಯುವಕರು ಓದಿದ್ದರೂ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ಇನ್ನು ಇತ್ತೀಚೆಗೆ ಪ್ರಾಕೃತಿಕ ವಿಕೋಪದಲ್ಲಿ ನರಳಾಡಿ ಹೋಗಿತ್ತು ಪಾಕ್ ಈಗ ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆ ಮೂಲಕ ಗಾಯದ ಮೇಲೆ ಬರೆ ಎಳೆದಿದೆ ಸರ್ಕಾರ.












Click it and Unblock the Notifications