ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಕಾರು ಬಾಂಬ್ ಸ್ಫೋಟ; ಕನಿಷ್ಠ 20 ಸಾವು

|
Google Oneindia Kannada News

ಕಾಬೂಲ್ (ಅಫ್ಘಾನಿಸ್ತಾನ್), ಸೆಪ್ಟೆಂಬರ್ 19: ತಾಲಿಬಾನ್ ಉಗ್ರ ಸಂಘಟನೆಯಿಂದ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟು, ಇತರ 95 ಮಂದಿ ಗಾಯಾಳುಗಳಾಗಿದ್ದಾರೆ. ದಕ್ಷಿಣ ಅಫ್ಘಾನಿಸ್ತಾನದ ಆಸ್ಪತ್ರೆಯೊಂದರ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಝಬುಲ್ ಪ್ರಾಂತ್ಯದ ಖಲತ್ ನಲ್ಲಿರುವ ಸರ್ಕಾರಿ ಗುಪ್ತಚರ ಸಂಸ್ಥೆ ಕಟ್ಟಡದ ಬಳಿ ಗುರುವಾರ ಸ್ಫೋಟ ಸಂಭವಿಸಿದೆ. ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಕಾಬೂಲ್ ನಲ್ಲಿ ಮಾತನಾಡಿ, ಅಫ್ಘಾನಿಸ್ತಾನದ ಪ್ರಬಲ ಭದ್ರತಾ ಸಂಸ್ಥೆ ನ್ಯಾಷನಲ್ ಡೆರೆಕ್ಟೊರೇಟ್ ಆಫ್ ಸೆಕ್ಯೂರಿಟಿ (ಎನ್ ಡಿಎಸ್) ತರಬೇತಿ ಕ್ಯಾಂಪ್ ಅನ್ನು ಗುರಿ ಮಾಡಿಕೊಳ್ಳಲು ಉಗ್ರರು ಬಯಸಿದ್ದರು. ಆಸ್ಪತ್ರೆಯ ಗೇಟ್ ಬಳಿಯಲ್ಲಿ ಸ್ಫೋಟಕ ತುಂಬಿದ್ದ ವಾಹನವನ್ನು ನಿಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಅಫ್ಗಾನಿಸ್ತಾನ ಅಧ್ಯಕ್ಷರ ಚುನಾವಣಾ ಸಮಾವೇಶದಲ್ಲಿ ಸ್ಪೋಟ, 24 ಸಾವುಅಫ್ಗಾನಿಸ್ತಾನ ಅಧ್ಯಕ್ಷರ ಚುನಾವಣಾ ಸಮಾವೇಶದಲ್ಲಿ ಸ್ಪೋಟ, 24 ಸಾವು

ಸ್ಥಳೀಯರು ತಮ್ಮ ಕುಟುಂಬ ಸದಸ್ಯರನ್ನು ಘಟನಾ ಸ್ಥಳದಲ್ಲಿ ಹುಡುಕಾಡುತ್ತಿದ್ದರು. ಗಾಯಗೊಂಡವರನ್ನು ಈಗಾಗಲೇ ನಾಶಗೊಂಡಿರುವ ಆಸ್ಪತ್ರೆ ಕಟ್ಟಡದಿಂದ ಈಚೆಗೆ ಕರೆದೊಯ್ಯುತ್ತಿದ್ದರು. ಹಾಗೆ ಕರೆದೊಯ್ಯಲು ಶಾಲು, ಹೊದಿಕೆಗಳನ್ನು ಹಿಡಿದು ಓಡಾಡುತ್ತಿರುವುದು ಕಂಡುಬರುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Car Bomb Exploded By Taliban; At Least 20 Dead In Afghanistan

ತೀವ್ರವಾಗಿ ಗಾಯಗೊಂಡವರನ್ನು ಕಂದಹಾರ್ ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಗುಪ್ತಚರ ಸಂಸ್ಥೆಯ ಕಟ್ಟಡದ ಗೋಡೆಗೆ ಹಾನಿಯಾಗಿದೆ. ಆ ಪೈಕಿ ಅಧಿಕಾರಿಗಳಿಗೆ ಗಾಯಗಳಾಗಿವೆಯೇ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಈಗಿನ ಸಾವಿನ ಸಂಖ್ಯೆ ಹಾಗೂ ಗಾಯಗೊಂಡವರ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

ಆಸ್ಪತ್ರೆಯಲ್ಲಿ ಇದ್ದ ಮಹಿಳೆಯರು, ಮಕ್ಕಳು, ವೈದ್ಯಕೀಯ ಸಿಬ್ಬಂದಿ, ರೋಗಿಗಳು ಈ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೆಪ್ಟೆಂಬರ್ 28ನೇ ತಾರೀಕು ಅಫ್ಘಾನಿಸ್ತಾನದಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಅಫ್ಘನ್ ಸರ್ಕಾರ ಹಾಗೂ ವಿದೇಶಿ ಸೇನೆಗಳನ್ನು ಗುರಿ ಮಾಡಿಕೊಂಡು ದಾಳಿಯನ್ನು ಮಾಡುವುದಾಗಿ ತಾಲಿಬಾನ್ ಉಗ್ರರು ಈಚೆಗೆ ಎಚ್ಚರಿಕೆ ನೀಡಿದ್ದರು.

ಕಾಬೂಲ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿಕಾಬೂಲ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿ

ದೋಹಾದ ಖತಾರಿಯಲ್ಲಿ ತಿಂಗಳುಗಳಿಂದ ಶಾಂತಿ ಮಾತುಕತೆ ನಡೆಯುತ್ತಿತ್ತು. ಆದರೆ ತಾಲಿಬಾನ್ ನ ಆತ್ಮಾಹುತಿ ದಾಳಿಯಲ್ಲಿ ಅಮೆರಿಕನ್ ನೌಕಾಪಡೆಯ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಧಾನ ಮಾತುಕತೆಯಲ್ಲಿ ನಿಲ್ಲಿಸಿದ್ದರು.

18 ವರ್ಷದಿಂದ ಇರುವ ಅಮೆರಿಕದ ಸೇನಾ ಪಡೆಯನ್ನು ಡೊನಾಲ್ಡ್ ಟ್ರಂಪ್ ವಾಪಸ್ ಕರೆಸಿಕೊಳ್ಳಲು ಉತ್ಸುಕರಾಗಿದ್ದಾರೆ. ಅದಕ್ಕೂ ಮುನ್ನ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸೇರಿದಂತೆ ಉಗ್ರ ಸಂಘಟನೆಗಳಿಂದ ಭದ್ರತೆಗೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂಬ ಖಾತ್ರಿ ಆದ ನಂತರ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಇರಾದೆಯಲ್ಲಿ ಇದ್ದಾರೆ.

English summary
Car bomb exploded near Afghanistan security training building on Thursday. At least 20 people dead and other 90 people injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X