ಭಾರತೀಯ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ ಕೆನಡಾ: ಎಚ್1ಬಿ ವೀಸಾ ಇದ್ದವರಿಗೆ ಭರ್ಜರಿ ಚಾನ್ಸ್!
ಟೊರಾಂಟೊ: ಭಾರತ ಮೂಲದ ಉದ್ಯೋಗಿಗಳು ಅಂದ್ರೆ ಜಗತ್ತಿನಾದ್ಯಂತ ತಮ್ಮದೇ ಛಾಪು ಮೂಡಿಸಿದ್ದಾರೆ. ಅದರಲ್ಲೂ ಅಮೆರಿಕದಿಂದ ಹಿಡಿದು, ಆಸ್ಟೇಲಿಯಾ ತನಕ ಭಾರತೀಯರೇ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಪಡೆದಿದ್ದಾರೆ. ಹಾಗೇ ಆಧುನಿಕ ಜಗತ್ತಿನಲ್ಲಿ ಕೆನಡಾಗೂ ಅತ್ಯಧಿಕ ಪ್ರಮಾಣದಲ್ಲಿ ಭಾರತೀಯರು ಎಂಟ್ರಿ ಕೊಡುತ್ತಿದ್ದು, ಕೆನಡಾದಲ್ಲಿ ನೆಲಸಬೇಕು ಅಂದುಕೊಂಡ ಭಾರತೀಯ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟಿದೆ ಕೆನಡಾ ಸರ್ಕಾರ!
ಎಚ್-1ಬಿ ವೀಸಾ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು, ಈ ವೀಸಾ ಪಡೆದವರು ಬಹುತೇಕ ಭಾರತೀಯರು. ಅಮೆರಿಕದಲ್ಲಿ ಉದ್ಯೋಗ ಮಾಡಲು ಹೆಚ್ಚಾಗಿ H1B ವೀಸಾ ನೀಡುತ್ತದೆ ಅಲ್ಲಿನ ಸರ್ಕಾರ. ಹೀಗೆ ಅಮೆರಿಕದ ಎಚ್-1ಬಿ ವೀಸಾ ಹೊಂದಿದವರಿಗೆ ಬಂಪರ್ ಆಫರ್ ಸಿಕ್ಕಂತಾಗಿದೆ. ಅದರಲ್ಲೂ ಅಮೆರಿಕದ ನೆರೆಯ ದೇಶವಾಗಿರುವ ಕೆನಡಾದಲ್ಲಿ ನೆಲಸಬೇಕು ಅಂದುಕೊಂಡವರಿಗೆ ಇದು ಸುವರ್ಣಾವಕಾಶ. ಇತ್ತೀಚೆಗೆ ತನ್ನ ಸೌಲಭ್ಯಗಳ ಮೂಲಕ ಈ ದೇಶ ಉದ್ಯೋಗಿಗಳನ್ನ ತನ್ನತ್ತ ಸೆಳೆಯುತ್ತಿದೆ. ಹೊಸ ಯೋಜನೆ ಕುರಿತು ಖುದ್ದು ಕೆನಡಾ ಸರ್ಕಾರ ಮಾಹಿತಿ ನೀಡಿದ್ದು, ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಎಚ್-1ಬಿ ವೀಸಾ ಇದ್ದವರಿಗೆ ಲಾಟರಿ!
ಹೌದು, ಅಮೆರಿಕದ ಎಚ್-1ಬಿ ವೀಸಾ ಇರುವ 10,000 ಜನ ಕೆನಡಾದಲ್ಲಿ ಉದ್ಯೋಗಾವಕಾಶ ಪಡೆಯಲು ಅರ್ಹರಾಗಿದ್ದಾರಂತೆ. ಈ ಕುರಿತು ಕೆನಡಾ ಸರ್ಕಾರ ಘೋಷಣೆ ಹೊರಡಿಸಿದ್ದು, ಹೊಸ ಯೋಜನೆಯ ಲಾಭ ಬಹುತೇಕ ಭಾರತೀಯರಿಗೆ ಆಗಲಿದೆ. ಏಕೆಂದರೆ ಅಮೆರಿಕದಲ್ಲಿ ಎಚ್-1ಬಿ ವೀಸಾ ಪಡೆಯುವುದು ಹೆಚ್ಚಿನ ಪ್ರಮಾಣದಲ್ಲಿ ಭಾರತೀಯರು. ಹೀಗಾಗಿ ಇದೀಗ ಕೆನಡಾ ನೀಡಿರುವ ಹೊಸ ಅವಕಾಶ ಭಾರತ ಮೂಲದ ಉದ್ಯೋಗಿಗಳಿಗೆ ಹೊಸ ಅವಕಾಶ ಹಾಗೂ ಹೊಸ ದಾರಿ ತೋರಿಸಲಿದೆ. ಹೀಗಾಗಿ ಕೆನಡಾ ಸರ್ಕಾರದ ಯೋಜನೆ ಹಲ್‌ಚಲ್ ಎಬ್ಬಿಸಿದೆ. ಆದರೆ ಕೆನಡಾ ಇಂಥ ನಿರ್ಧಾರಕ್ಕೆ ಬಂದಿದ್ದು ಏಕೆ? ಅಷ್ಟಕ್ಕೂ ಅದರ ಹಿಂದೆ ಬಲವಾದ ಕಾರಣ ಏನಿದೆ? ಮುಂದೆ ಓದಿ.
ಅಮೆರಿಕ ಮೀರಿ ಬೆಳೆಯುತ್ತಾ ಕೆನಡಾ?
ಕೆನಡಾ ಮತ್ತು ಅಮೆರಿಕ ಎರಡು ಅಕ್ಕಪಕ್ಕದ ದೇಶಗಳಾಗಿದ್ದು, ಕೆನಡಾ ಫ್ರೆಂಚರ ಆಳ್ವಿಕೆಗೆ ಒಳಪಟ್ಟಿತ್ತು ಹಾಗೂ ಅಮೆರಿಕ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಇತ್ತೀಚಿನ ದಿನಗಳಲ್ಲಂತು ಕೆನಡಾ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಅದರಲ್ಲೂ ಕೆಲವೊಂದು ಕ್ಷೇತ್ರದಲ್ಲಿ ಕೆನಡಾದ ವೇಗ ಅಮೆರಿಕವನ್ನ ಮೀರಿಸಿದೆ. ಹೀಗಾಗಿಯೇ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳ ಜಾಗತಿಕ ನಾಯಕನಾಗಿ ಹೊರಹೊಮ್ಮುವ ಗುರಿ ಕೆನಡಾ ಸರ್ಕಾರದ್ದು. ಅಮೆರಿಕದ ಕೆಲ ತಂತ್ರಜ್ಞಾನ ಆಧರಿತ ಸೇವೆ ಒದಗಿಸುವ ಪ್ರಮುಖ ಕಂಪನಿಗಳು ತಮ್ಮಲ್ಲಿ ಉದ್ಯೋಗ ಕಡಿತ ಮಾಡುತ್ತಿರುವ ಕಾರಣ ಕೆನಡಾ ಹೊಸ ಪ್ಲ್ಯಾನ್ ಮಾಡಿದೆ. ಅಮೆರಿಕದಲ್ಲಿರುವ ಅತ್ಯುತ್ತಮ ಕೆಲಸಗಾರರನ್ನ ತನ್ನ ದೇಶಕ್ಕೆ ಕರೆಸಿಕೊಳ್ಳಲು ಸಿದ್ಧವಾಗಿದೆ. ಅಮೆರಿಕದ ಎಚ್-1ಬಿ ವೀಸಾ ಇರುವ 10,000 ಜನರಿಗೆ ಹೊಸ ಅವಕಾಶ ನೀಡಲು ಮುಂದಾಗಿದೆ.
ಭಾರತೀಯರಿಗೆ ಇದರಿಂದ ಬಂಪರ್!
ಇನ್ನು ಕಳೆದ ವರ್ಷ ನವೆಂಬರ್‌ನಿಂದ ಈವರೆಗೂ ಅಮೆರಿಕದಲ್ಲಿ ಸುಮಾರು 2 ಲಕ್ಷದಷ್ಟು ಐಟಿ ಉದ್ಯೋಗಿಗಳನ್ನ ಮನೆಗೆ ಕಳುಹಿಸಿವೆ ಅಮೆರಿಕದ ಕಂಪನಿಗಳು. ಉದ್ಯೋಗ ಕಳೆದುಕೊಂಡ ಬಹುತೇಕರು ಭಾರತೀಯರಂತೆ. ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡವರಲ್ಲಿ ಶೇಕಡಾ 30ರಿಂದ 40ರಷ್ಟು ಭಾರತೀಯರೇ ಇದ್ದಾರೆ. ಹೀಗೆ ಉದ್ಯೋಗ ಕಳೆದುಕೊಂಡವರಿಗೆ ಹೊಸ ಅವಕಾಶ ಲಭಿಸುತ್ತಿದೆ. ಕೆನಡಾದ ಹೊಸ ಯೋಜನೆಯಿಂದ ಭಾರತೀಯ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ಆಗುತ್ತೆ . ಹೀಗಾಗಿ ಕೆನಡಾದಲ್ಲಿ ಮುಕ್ತ ಉದ್ಯೋಗಾವಕಾಶವನ್ನ ನೀಡುವ ಯೋಜನೆಯನ್ನು ಜುಲೈ 16ರ ಒಳಗೆ ಸರ್ಕಾರ ಜಾರಿಗೆ ತರಲಿದೆ ಎಂದು ಕೆನಡಾ ಸಚಿವರಿಂದ ಮಾಹಿತಿ ಹೊರಬಿದ್ದಿದೆ.
ಇನ್ನು ಕೆನಡಾ ಸರ್ಕಾರದ ಯೋಜನೆಯಡಿ ಉದ್ಯೋಗ ಪಡೆಯುವ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ಶಿಕ್ಷಣ ಪಡೆಯುವ ಅಥವಾ ಉದ್ಯೋಗ ಪಡೆಯುವ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ ಯೋಜನೆ ಅಡಿ ಅರ್ಜಿ ಸಲ್ಲಿಸುವವರಿಗೆ ಕೆನಡಾದಲ್ಲಿ 3 ವರ್ಷ ಉದ್ಯೋಗ ಮಾಡಲು ಅವಕಾಶವಿದೆ. ಇದರ ಜೊತೆಗೆ ಉದ್ಯೋಗಿಯ ಪತಿ ಅಥವಾ ಪತ್ನಿಯು ಕೆನಡಾದ ತಾತ್ಕಾಲಿಕ ವೀಸಾ ಪಡೆಯಲು ಅರ್ಜಿಯನ್ನ ಸಲ್ಲಿಸಬಹುದು. ಒಟ್ನಲ್ಲಿ ಸಂಕಷ್ಟದ ಸಮಯ ಎದುರಾದ ಸಮಯದಲ್ಲಿ ಕೆನಡಾ ಸರ್ಕಾರದ ಹೊಸ ಯೋಜನೆ ಭಾರತದ ಉದ್ಯೋಗಿಗಳ ಕೈಹಿಡಿದಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications