ಕುವೈತ್, ಫ್ರಾನ್ಸ್, ಟ್ಯೂನೇಷಿಯಾದಲ್ಲಿ ಉಗ್ರರ ಅಟ್ಟಹಾಸ
ಕುವೈತ್, ಜೂ.26: ಇರಾಕಿ ಉಗ್ರರ ಕರಾಳ ಹಸ್ತ ಈಗ ಕುವೈತಿನವರೆಗೂ ಚಾಚಿದೆ. ಶಿಯಾ ಮುಸ್ಲಿಮರು ಶುಕ್ರವಾರ ರಮ್ಜಾನ್ ಪ್ರಾರ್ಥನೆ ಸಲ್ಲಿಸುವ ವೇಳೆಗೆ ಆತ್ಮಾಹುತಿ ದಾಳಿ ನಡೆಸಿದ ಐಎಸ್ ಐಎಸ್ ಸುಮಾರು 13ಜನರನ್ನು ಬಲಿ ತೆಗೆದುಕೊಂಡಿದೆ. 26ಕ್ಕೂ ಅಧಿಕ ಜನರಿಗೆ ತೀವ್ರಗಾಯಗಳಾಗಿವೆ. ಇದೇ ವೇಳೆ ಫ್ರಾನ್ಸ್ ಹಾಗೂ ಟ್ಯೂನೇಷಿಯಾದಲ್ಲೂ ಉಗ್ರರ ದಾಳಿ ನಡೆದಿದೆ.
ಸೌದಿ ಅರೇಬಿಯಾ, ಯೆಮನ್ ಗಳಲ್ಲಿ ಶಿಯಾ ಮಸೀದಿಯ ಮೇಲೆ ದಾಳಿ ನಡೆಸಿದ ಮಾದರಿಯಲ್ಲೇ ಕುವೈತಿನ ಮಸೀದಿಯ ಮೇಲೂ ದಾಳಿ ನಡೆದಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು 13 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ. ಕುವೈತಿನ ಅಲ್ ಸವಾಬಿರ್ ಜಿಲ್ಲೆಯ ಸಾದಿಕ್ ಮಸೀದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ರಮ್ಜಾನ್ ವೇಳೆಯಲ್ಲಿ ಕುವೈತ್ ನಲ್ಲಿ ದಾಳಿ ಜೊತೆಗೆ ಫ್ರಾನ್ಸ್ ಹಾಗೂ ಟ್ಯುನೇಷಿಯಾದಲ್ಲೂ ಇರಾಕಿ ಉಗ್ರರ ನರ್ತನ ಮುಂದುವರೆದಿದೆ.
Third attack on a Shiite mosque in the Gulf in roughly a month. Today, in Kuwait. https://t.co/U64W66k7pO
— DavidKenner (@DavidKenner) June 26, 2015 ಆಗ್ನೇಯ ಫ್ರಾನ್ಸ್ ನ ಫಾಕ್ಟರಿಯೊಂದರ ಮೇಲೆ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ ಎಂದು ಅಧ್ಯಕ್ಷ ಫ್ರಾನ್ಕೊಯಿಸ್ ಹೊಲ್ಲಾಂಡೆ ಹೇಳಿದ್ದಾರೆ.
ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ ಶಂಕಿತನನ್ನು ಫ್ರೆಂಚ್ ಪೊಲೀಸರು ಗುರುತಿಸಿದ್ದು, ಐಎಸ್ ಐಎಸ್ ಬಾವುಟ ಹಿಡಿದುಕೊಂಡಿದ್ದ ಎಂದು ತಿಳಿದು ಬಂದಿದೆ.
Attack in Kuwait Mosque 13 killed claimed by ISIS, Man beheaded in France. Now shooting in Tunisia Hotel !!! Crazy stuff
— Navroop Singh (@s_navroop) June 26, 2015 ಟ್ಯೂನೇಷಿಯಾದ ಸೂಹಾದ ಹೋಟೆಲ್ ರಿಯು ಇಂಪೀರಿಯಲ್ ಮರ್ಹಬಾದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಸುಮಾರು 19 ಜನ ಪ್ರವಾಸಿಗರು ಹೋಟೆಲ್ ನಲ್ಲಿ ಸಾವನ್ನಪ್ಪಿರುವ ವರದಿಗಳು ಬಂದಿದೆ.












Click it and Unblock the Notifications