ಅಮೆರಿಕಾ ಸಾಹಿತಿ ಬಾಬ್ ಡೈಲನ್ ಗೆ ಸಾಹಿತ್ಯ ನೊಬೆಲ್

Posted By: Prithviraj
Subscribe to Oneindia Kannada

ಸ್ಟಾಕ್ ಹೋಮ್, ಅಕ್ಟೋಬರ್, 13: ಅಮೆರಿಕಾದ ಪ್ರಸಿದ್ಧ ಗಾಯಕ ಹಾಗೂ ಸಾಹಿತಿ ಬಾಬ್ ಡೈಲನ್ ಅವರು ಈ ವರ್ಷದ ಸಾಹಿತ್ಯ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಅಮೆರಿಕಾ ಸಾಂಪ್ರಾದಾಯಿಕ ಸಂಗೀತ ಕ್ಷೇತ್ರ ಪರಿಧಿಯಲ್ಲೇ ಇವರ ಸೃಜನಶೀಲ ಕಾವ್ಯತ್ಮಕ ಅಭಿವ್ಯಕ್ತಿಯನ್ನು ಪರಿಗಣಿಸಿ ಇವರಿಗೆ ನೊಬೆಲ್ ಪುರಸ್ಕಾರ ನೀಡಲಾಗಿದೆ.

ಅಮೆರಿಕಾ ಜಾನಪದ ಗೀತೆಗಳ ರಚನೆ ಮತ್ತು ಗಾಯನ ಕ್ಷೇತ್ರಕ್ಕೆ ಇವರು ಅದ್ವಿತೀಯ ಕೊಡುಗೆ ನೀಡಿರುವ ಡೈಲನ್, ಗಾಯಕರಾಗಿ, ಗೀತರಚನೆಕಾರರಾಗಿ, ನಟರಾಗಿ, ಲೇಖಕರಾಗಿ ಅವರು ಗುರುತಿಸಲ್ಪಟ್ಟಿದ್ದಾರೆ. [ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನ್ಯುಯಲ್ ಸ್ಯಾಂಟೋಸ್ ಗೆ ನೊಬೆಲ್ ಶಾಂತಿ]

ಅಮೆರಿಕಾ ಸಾಹಿತಿ ಬಾಬ್ ಡೈಲನ್ ಗೆ ಸಾಹಿತ್ಯ ನೊಬೆಲ್

ಕಳೆದ 5 ದಶಕಳಿಂದ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿರುವ ಇವರ ಕೊಡುಗೆಗೆ ನೊಬೆಲ್ ಪುರಸ್ಕಾರ ಅರಿಸಿಕೊಂಡು ಬಂದಿರುವುದು ಇವರ ಸಾಧನೆಗೆ ದೊರೆತ ಫಲ ಎಂದು ಹೇಳಬಹುದು.

ಅಮೆರಿಕಾದ ಮಿನ್ನೆಸೋಟದಲ್ಲಿ 1941 ಮೇ 24ರಂದು ಜನಿಸಿದ ಡೈಲನ್, 1959ರಿಂದ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕಾಲಿಫೋರ್ನಿಯಾದ ಮಲಿಬುನಲ್ಲಿ ಇದ್ದಾರೆ.[ಮೂವರು ರಸಾಯನಶಾಸ್ತ್ರ ಸಂಶೋಧಕರಿಗೆ ನೊಬೆಲ್!]

ಡೈಲನ್ ಅವರು ಜಾನಪದ, ಬ್ಲೂಸ್, ರಾಕ್, ಕಂಟ್ರಿ ಮತ್ತು ಗೊಸ್ಪೆಲ್ ಸಂಗೀತ ಪ್ರಕಾರಗಳಲ್ಲಿ ಹೆಚ್ಚು ಸಾಧನೆ ಮಾಡಿದ್ದಾರೆ. ಅದೇ ರೀತಿ ಇವರು ಗಿಟಾರ್, ಕೀಬೋರ್ಡ್, ಹಾರ್ಮೋನಿಯಂ ಮತ್ತಿತರರ ಸಂಗೀತ ಪರಿಕರಗಳನ್ನು ಅನಾಯಸಾವಾಗಿ ನುಡಿಸಬಲ್ಲರು.

ಇವರು ಉತ್ತಮ ಚಿತ್ರಕಲಾವಿದರಾಗಿಯೂ ಸಾಧನೆ ಮಾಡಿದ್ದು, 1994ರಿಂದ ಚಿತ್ರಕಲೆ ಕುರಿತು ಇವರು ಪ್ರಕಟಿಸಿರುವ ಪುಸ್ತಕಗಳು ವಿಶ್ವದ ಪ್ರಮುಖ ಗ್ಯಾಲರಿಗಳಲ್ಲಿ ಪ್ರದರ್ಶನ ಕಂಡಿವೆ. ಇವರ ಸಂಗೀತ ಕ್ಷೇತ್ರದ ಸಾಧನೆ ಪರಿಗಣಿಸಿ ಗ್ಯಾಮಿ, ಗೋಲ್ಡನ್ ಗ್ಲೋಬ್ ಪ್ರಶಸ್ತಿ, ಹಾಲ್ ಆಫ್ ಫೇಮ್ ಪುರಸ್ಕಾರಗಳು ಲಭಿಸಿವೆ.

ಮಾರ್ಡನ್ ಟೈಮ್ಸ್, ಟೈಮ್ ಔಟ್ ಆಫ್ ಮೈಂಡ್, ಓಹ್ ಮರ್ಸಿ ಬಾಬ್ ಅವರ ಕೆಲವು ಪ್ರಮುಖ ಆಲ್ಪಂಗಳು. ಸ್ವೀಡನ್ ಸ್ಟಾಕ್ ಹೋಮ್ ನಲ್ಲಿ ಡಿಸೆಂಬರ್ 10ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
America rock legend recevied 2016 Nobel Literature prize for " having created new poetic expressions within the great Americam song tradition".
Please Wait while comments are loading...