ಬಾಂಗ್ಲಾದಲ್ಲಿ ಬಾಂಬ್ ಎಸೆದವರ ಮೇಲೆ ಪೊಲೀಸರ ಗುಂಡಿನ ದಾಳಿ
ಢಾಕಾ, ಜುಲೈ 07: ಬಾಂಗ್ಲಾದೇಶದ ಕಿಶೋರ್ ಗಂಜ್ ಜಿಲ್ಲೆಯಲ್ಲಿ ಈದ್ ಪ್ರಾರ್ಥನೆ ವೇಳೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಆದರೆ, ಇದು ಉಗ್ರರ ದಾಳಿಯಲ್ಲ, ರಾಜಕೀಯ ಪ್ರೇರಿತ ದಾಳಿ,ಪೊಲೀಸರನ್ನು ಗುರಿಯನ್ನಾಗಿಸಿ ದಾಳಿ ನಡೆಸಲಾಗಿದೆ ಎಂದು ಬಾಂಗ್ಲಾದೇಶ ಸರ್ಕಾರ ಘೋಷಿಸಿದೆ.
ಇತ್ತೀಚಿನ ಅಪ್ಡೇಟ್ಸ್:
* ಪೊಲೀಸ್ ದಾಳಿಗೆ ಒಬ್ಬ ಉಗ್ರ ಹತ. ಆರೇಳು ಮಂದಿ ಇನ್ನೂ ಶಾಲೆಯಲ್ಲಿ ಅಡಗಿರುವ ಶಂಕೆ.
* ಕೈಯಲ್ಲಿದ್ದ ಬಾಂಬ್ ಖಾಲಿಯಾದ ಮೇಲೆ ಚಾಕು, ಚೂರಿ ಹಿಡಿದುಕೊಂಡು ನಿಂತಿರುವ ಉಗ್ರರು.
* ದಾಳಿ ನಡೆಸಿದವರು ಅಜಿಮುದ್ದೀನ್ ಶಾಲೆಯಲ್ಲಿ ಅಡಗಿ ಕುಳಿತ್ತಿದ್ದು, ಅವರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
* ಬಾಂಬ್ ಸ್ಫೋಟದಲ್ಲಿ ಮೃತರಾದ ಪೊಲೀಸ್ ಸಿಬ್ಬಂದಿಯನ್ನು ಝಾಹಿರುಲ್ ಇಸ್ಲಾಮ್ ಎಂದು ಗುರುತಿಸಲಾಗಿದೆ.

ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಇಲ್ಲಿನ ಶೋಲ್ಕಿಯಾ ಮೈದಾನದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು 3 ಮಂದಿ ಸಾವನ್ನಪ್ಪಿದ ವರದಿಗಳು ಬಂದಿವೆ. ಸುಮಾರು 12ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ. [ಕಹಿ ನೆನಪು : ರಂಜಾನ್ ಮುನ್ನಾದಿನ ಇರಾಕಿನಲ್ಲಿ ಭೀಕರ ಹತ್ಯಾಕಾಂಡ]

ದಾಳಿ ನಡೆಸಿದ ದುಷ್ಕರ್ಮಿಗಳು ಸಮೀಪದ ಮನೆಯೊಂದರಲ್ಲಿ ಅಡಗಿರುವ ಶಂಕೆ ವ್ಯಕ್ತವಾಗಿದೆ.ವಾರದೊಳಗೆ ಎರಡನೇ ಬಾರಿ ಬಾಂಗ್ಲಾದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಆದರೆ, ಕಿಶೋರ್ ಗಂಜ್ ನಲ್ಲಿನ ಸ್ಫೋಟವನ್ನು ರಾಜಕೀಯ ಪ್ರೇರಿತ ದಾಳಿ ಎಂದು ಬಾಂಗ್ಲಾದೇಶದ ವಾರ್ತಾ ಸಚಿವರು ಹೇಳಿದ್ದಾರೆ. [ಕಹಿ ನೆನಪು : ಸೌದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ]
ಇತ್ತೀಚಿನ ಬಾಂಬ್ ಸ್ಫೋಟದಲ್ಲಿ 20 ಮಂದಿ ಸಾವನ್ನಪ್ಪಿದ್ದರು. ಈ ದಾಳಿ ಹಿಂದೆ ಉಗ್ರರ ಕೈವಾಡ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ, ಐಎಸ್ ಐಎಸ್ ಇತ್ತೀಚೆಗೆ ವಿಡಿಯೋ ಬಿಡುಗಡೆ ಮಾಡಿ ಹೆಚ್ಚೆಚ್ಚು ದಾಳಿ ನಡೆಸುವುದಾಗಿ ಘೋಷಿಸಿತ್ತು. ಆದರೆ, ಈ ಎಚ್ಚರಿಕೆ ಗಂಟೆಯನ್ನು ಬಾಂಗ್ಲಾದೇಶ ಸರ್ಕಾರ ಲಘುವಾಗಿ ತೆಗೆದುಕೊಂಡಿದೆ.












Click it and Unblock the Notifications